ETV Bharat / bharat

ಪೊಲೀಸರ ಸಹಕಾರದಿಂದ ಅಕ್ರಮವಾಗಿ ಮದ್ಯ ಸಾಗಣೆಗೆ ಯತ್ನ: ಅಬಕಾರಿ ಸಿಐ​ ಅಮಾನತು - ಪೊಲೀಸರ ಸಹಕಾರದಿಂದ ಮದ್ಯ ಸಾಗಾಟಕ್ಕೆ ಯತ್ನ

ಲಾಕ್​ಡೌನ್​ ಸಮಯದಲ್ಲಿ ಸಹಚರರೊಂದಿಗೆ ಸೇರಿ ಅಕ್ರಮವಾಗಿ ಮದ್ಯ ಸಾಗಾಟಕ್ಕೆ ಯತ್ನಿಸಿದ ಅಬಕಾರಿ ಇನ್ಸ್​ಪೆಕ್ಟರ್​​​​ ಅವರನ್ನು ಅಮಾನತು ಮಾಡಲಾಗಿದೆ.

ci has try to supplying liquor illegally
ಅಕ್ರಮವಾಗಿ ಮದ್ಯ ಸಾಗಾಟಕ್ಕೆ ಯತ್ನ
author img

By

Published : Mar 30, 2020, 10:10 AM IST

ಪೂರ್ವ ಗೋದಾವರಿ(ಆಂಧ್ರ ಪ್ರದೇಶ): ಖಾಸಗಿ ಅನುಯಾಯಿಗಳಿಂದ ಅಕ್ರಮವಾಗಿ ಮದ್ಯ ಸಾಗಿಸಲು ಯತ್ನಿಸಿದ ಪೊಲೀಸ್ ಇನ್ಸ್​ಪೆಕ್ಟರ್​ನನ್ನು ಅಮಾನತು ಮಾಡಲಾಗಿದೆ.

ಅನಪರ್ತಿ ವಲಯದ ಕುತುಕುಲೂರ್ ಎಂಬ ಗ್ರಾಮದಲ್ಲಿ ಲಾಕ್​ಡೌನ್​ ಹಿನ್ನೆಲೆಯಲ್ಲಿ ಮದ್ಯದಂಗಡಿಯನ್ನು ಕಳೆದ ಒಂದು ವಾರದಿಂದ ಮುಚ್ಚಲಾಗಿದೆ. ಆದ್ರೆ ತನ್ನ ಅನುಯಾಯಿಗಳನ್ನು ಕಳುಹಿಸಿ ಮದ್ಯ ತರುವಂತೆ ಅಬಕಾರಿ ಸಿಐ ತ್ರಿನಾಥ್ ರೆಡ್ಡಿ ಹೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅಕ್ರಮವಾಗಿ ಮದ್ಯ ಸಾಗಿಸಲು ಯತ್ನಿಸಿ, ತಗಲಾಕ್ಕೊಂಡ ಅಬಕಾರಿ ಪೊಲೀಸ್​ ಇನ್ಸ್​ಪೆಕ್ಟರ್​

ಕುತುಕುಲೂರ್ ತ್ರನಾಥ್ ರೆಡ್ಡಿ ಸಹಚರರು ಮದ್ಯ ಸಾಗಿಸುವಾಗ ಅನುಮಾನಗೊಂಡ ಗ್ರಾಮಸ್ಥರು ಈ ಬಗ್ಗೆ ಪ್ರಶ್ನಿಸಿದ್ದಾರೆ. ಇದರಿಂದ ಕಂಗಾಲಾದ ಸಹಚರರು ಅಬಕಾರಿ ಸಿಐಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅಬಕಾರಿ ಸಿಐ ತ್ರಿನಾಥ್ ರೆಡ್ಡಿ ಗೊಂದಲದ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಅನಪರ್ತಿ ಶಾಸಕ ಸತ್ತಿ ಸೂರ್ಯನಾರಾಯಣ ರೆಡ್ಡಿ ಅಧಿಕಾರಿಯನ್ನು ಪ್ರಶ್ನಿಸಿದಾಗ ಅಸಲಿ ವಿಷಯ ಬಯಲಾಗಿದೆ.

ಘಟನೆ ಬಗ್ಗೆ ಶಾಸಕ ಸೂರ್ಯನಾರಾಯಣ ಅವರು ಅನಪರ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಅಬಕಾರಿ ಅಧೀಕ್ಷಕ ನಾಗ ಪ್ರಭು ಕುಮಾರ್ ಅವರು, ತ್ರಿನಾಥ್ ರೆಡ್ಡಿಯನ್ನು ಅಮಾನತುಗೊಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.