ETV Bharat / bharat

ಏಷ್ಯಾ ರಾಷ್ಟ್ರಗಳಲ್ಲಿ ಶಾಂತಿ ಕಾಪಾಡದ 'ಚೀನಾ' ವಿಟೋ ಅಧಿಕಾರಕಷ್ಟೇ ಸೀಮಿತ! - ವಿಶ್ವಸಂಸ್ಥೆಯ ಭದ್ರತಾ ಮಂಡಳಿ

ಚೀನಾದ ಈ ಹೊಸ ಬಹುಪಕ್ಷೀಯ ಕ್ರಿಯಾಶೀಲತೆಯು ನಮ್ಮ ಮುಂದೆ ಎರಡು ಪ್ರಶ್ನೆಗಳನ್ನು ಇರಿಸುತ್ತದೆ. ಮೊದಲನೆಯದಾಗಿ, ಯುಎನ್‌ಎಸ್‌ಸಿ ಕಡತದಲ್ಲಿ ಮರೆಯಾಗಿದ್ದ ಭಾರತ- ಪಾಕಿಸ್ತಾನದ ಪ್ರಶ್ನೆಯನ್ನು ಐದು ದಶಕದ ನಂತರ ಚೀನಾ ಈಗ ಏಕೆ ಆಸಕ್ತಿ ತಳಿಯುತ್ತಿದೆ? ಎರಡನೆಯದಾಗಿ, ಯುಎನ್‌ಎಸ್‌ಸಿಯ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತಾ ವಿಷಯಗಳ ಬಗ್ಗೆ ಚೀನಾ ತೀವ್ರವಾಗಿ ಪ್ರತಿಪಾದಿಸುವ ಕ್ರಮವನ್ನು ಸೂಚಿಸುತ್ತದೆಯೇ? ಈ ಎರಡೂ ಪ್ರಶ್ನೆಗಳು ಭಾರತದ ವಿದೇಶಾಂಗ ನೀತಿಯ ಮೇಲೆ ನೇರ ಪರಿಣಾಮ ಬೀರುತ್ತವೆ.

ಸಾಂದರ್ಭಿಕ ಚಿತ್ರ
author img

By

Published : Oct 10, 2019, 11:53 AM IST

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) 1971ರ ಡಿಸೆಂಬರ್ 21ರಂದು 'ಭಾರತ-ಪಾಕಿಸ್ತಾನ' ನಡುವಿನ ವ್ಯಾಜ್ಯದ ಪ್ರಶ್ನೆ ಮೊದಲ ಬಾರಿಗೆ ಎದಿತು. 2019ರ ಆಗಸ್ಟ್​​ 16ರಂದು ಚೀನಾ, ದಶಕದಿಂದ ತಣಗಿದ್ದ ಸಮಸ್ಯೆಯನ್ನು ಪುನರುಜ್ಜೀವನಗೊಳಿಸುವ ಮೂಲಕ ಅಂತಾರಾಷ್ಟ್ರೀಯ ಸಮುದಾಯವನ್ನು ಅಚ್ಚರಿಗೆ ತಳಿತು. ವಿಶೇಷವೆಂದರೆ, ಮಂಡಳಿಯ ಇತರೆ 14 ಸದಸ್ಯರಲ್ಲಿ ಯಾರೊಬ್ಬರೂ ಈ ಚರ್ಚೆಯನ್ನು ಸಾರ್ವಜನಿಕ ವಿಷಯದ ವ್ಯಾಪ್ತಿಗೆ ಸೇರಿಸಲು ಒಪ್ಪಲಿಲ್ಲ.

ಚೀನಾದ ಈ ಹೊಸ ಬಹುಪಕ್ಷೀಯ ಕ್ರಿಯಾಶೀಲತೆಯು ನಮ್ಮ ಮುಂದೆ ಎರಡು ಪ್ರಶ್ನೆಗಳನ್ನು ಇರಿಸುತ್ತದೆ. ಮೊದಲನೆಯದಾಗಿ, ಯುಎನ್‌ಎಸ್‌ಸಿ ಕಡತದಲ್ಲಿ ಮರೆಯಾಗಿದ್ದ ಭಾರತ- ಪಾಕಿಸ್ತಾನದ ಪ್ರಶ್ನೆಯನ್ನು ಐದು ದಶಕದ ನಂತರ ಚೀನಾ ಈಗ ಏಕೆ ಆಸಕ್ತಿ ತಳಿಯುತ್ತಿದೆ? ಎರಡನೆಯದಾಗಿ, ಯುಎನ್‌ಎಸ್‌ಸಿಯ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತಾ ವಿಷಯಗಳ ಬಗ್ಗೆ ಚೀನಾ ತೀವ್ರವಾಗಿ ಪ್ರತಿಪಾದಿಸುವ ಕ್ರಮವನ್ನು ಸೂಚಿಸುತ್ತದೆಯೇ? ಈ ಎರಡೂ ಪ್ರಶ್ನೆಗಳು ಭಾರತದ ವಿದೇಶಾಂಗ ನೀತಿಯ ಮೇಲೆ ನೇರ ಪರಿಣಾಮ ಬೀರುತ್ತವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ತನ್ನ ಪ್ರಾದೇಶಿಕ ಸಮಗ್ರತೆಯ ವಿರುದ್ಧ ಪಾಕಿಸ್ತಾನ ಸಶಸ್ತ್ರ ಆಕ್ರಮಣ ಮಾಡುತ್ತಿದೆ ಎಂದು 1948ರ ಜನವರಿ 1ರಂದು ಯುಎನ್‌ಎಸ್‌ಸಿಗೆ ದೂರು ನೀಡಿತ್ತು. 1948 ಜನವರಿ 22ರಂದು ಭಾರತದ ದೂರನ್ನು ವಿಶ್ವಸಂಸ್ಥೆಯ ಖಾಯಂ ಸದಸ್ಯ ಇಂಗ್ಲೆಂಡ್​​, ತನ್ನ ವಿಟೋ ಅಧಿಕಾರ ಬಳಸಿಕೊಂಡು ಇದು 'ಭಾರತ-ಪಾಕಿಸ್ತಾನ ನಡುವಿನ ಪ್ರಶ್ನೆ' ಎಂದು ತಿರಸ್ಕರಿಸಿತು.

ಭಾರತ ನೀಡಿದ ದೂರಿನ ವಿವರಣೆಯ ಆಕ್ರಮಣಶೀಲತೆಯನ್ನು ಇಂಗ್ಲೆಂಡ್​​​​ ದುರ್ಬಲಗೊಳಿಸಿತು. ಬ್ರಿಟಿಷರು ಭಾರತವನ್ನು ವಿಭಜಿಸಿ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಇಂಗ್ಲೆಂಡ್​​ ಪುರಸ್ಕ ರಿಸಿ, ಹಿಂದಿನ ಜಮ್ಮು ಮತ್ತು ಕಾಶ್ಮೀರ ವಿವಾದದ ಬಾಗಿಲು ತೆರೆಯುವಂತೆ ಮಾಡಿತು. ಆಗ ಈ ನಿರ್ಧಾರ ತೆಗೆದುಕೊಳ್ಳುವಾಗ ಭಾರತ ಯುಎನ್‌ಎಸ್‌ಸಿಯಲ್ಲಿ ಇರಲಿಲ್ಲ.

ಯುಎನ್​​ಎಸ್​​ಸಿಯ ಶಾಶ್ವತ ಸದಸ್ಯತ್ವ ಪಡೆದ ಚೀನಾ, 1945ರ ಜೂನ್ 26ರಿಂದ 1971ರ ಅಕ್ಟೋಬರ್ 25ರ ಅವಧಿಯ ನಡುವೆ 'ಭಾರತ-ಪಾಕಿಸ್ತಾನ ಪ್ರಶ್ನೆ' ಕುರಿತು 17 ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಈ ನಿರ್ಣಯಗಳಲ್ಲಿ ಚೀನಾ ಸಕ್ರಿಯವಾದ ಪಾತ್ರ ವಹಿಸಿರಲಿಲ್ಲ.

1971ರ ಡಿಸೆಂಬರ್​ನಲ್ಲಿ ಭಾರತ- ಪಾಕಿಸ್ತಾನ ನಡುವಿನ ಸಂಘರ್ಷ ತಾರಕಕ್ಕೇರಿತ್ತು. ಈ ವೇಳೆ ಯುಎನ್‌ಎಸ್‌ಸಿಯಲ್ಲಿ 'ಭಾರತ-ಪಾಕಿಸ್ತಾನ ಪ್ರಶ್ನೆ'ಯ ಕುರಿತು ಚೀನಾ ಕಾರ್ಯಕರ್ತ ಸ್ಥಾನ ಪಡೆದುಕೊಂಡಿತು. 1971ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ಸ್ವಾತಂತ್ರ್ಯಗೊಂಡ ಪರಿಣಾಮವಾಗಿ ಭಾರತದ 'ಆಕ್ರಮಣಶೀಲತೆ'ಯನ್ನು ಅದು ತೀವ್ರವಾಗಿ ಟೀಕಿಸಿತು. 1972ರ ಆಗಸ್ಟ್ 25ರಂದು ಹೊಸದಾಗಿ ಸ್ವತಂತ್ರಗೊಂಡ ಬಾಂಗ್ಲಾದೇಶವನ್ನು ಯುಎನ್‌ಗೆ ಪ್ರವೇಶಿಸುವುದನ್ನು ವಿರೋಧಿಸಲು ಚೀನಾ ಮೊದಲ ತನ್ನ ವಿಟೋ ಅಧಿಕಾರ ಬಳಸಿಕೊಂಡಿತು.

21 ಡಿಸೆಂಬರ್ 1971 ರಂದು ಯುಎನ್‌ಎಸ್‌ಸಿ (ಪಿಆರ್‌ಸಿ ಸೇರಿದಂತೆ) ತನ್ನ 18 ನೇ (ಮತ್ತು ಕೊನೆಯ) ನಿರ್ಣಯವನ್ನು “ಭಾರತ-ಪಾಕಿಸ್ತಾನ ಪ್ರಶ್ನೆ” ಕುರಿತು ಅಂಗೀಕರಿಸಿತು. ಈ ನಿರ್ಣಯವು ಮೂರು ವಿಷಯಗಳ ಮೇಲೆ ಕೇಂದ್ರೀಕರಿಸಿದೆ - ಬಾಂಗ್ಲಾದೇಶದಲ್ಲಿ ಕದನ ವಿರಾಮ, ಪಾಕಿಸ್ತಾನ ಸೈನಿಕರನ್ನು ಯುದ್ಧ ಕೈದಿಗಳಾಗಿ ಪರಿಗಣಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ರೇಖೆಯ ಉದ್ದಕ್ಕೂ ಸ್ಥಿರತೆ. ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಚರ್ಚೆಗಳ ಮೂಲಕ ಈ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭಾರತವು ಕೌನ್ಸಿಲ್‌ಗೆ ತಿಳಿಸಿತು.

1972ರ ಜುಲೈ 2 ರಂದು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಒಪ್ಪಂದಕ್ಕೆ (ಸಿಮ್ಲಾ ಒಪ್ಪಂದ) ಸಹಿ ಹಾಕಿದವು. ಈ ಒಪ್ಪಂದವು ಉಭಯ ರಾಷ್ಟ್ರಗಳ ತಮ್ಮ ವಿವಾದಗಳನ್ನು ದ್ವಿಪಕ್ಷೀಯ ಕಾನೂನುಬದ್ಧ ಕಟ್ಟುಪಾಡು ಮುಖೇನ ಪರಿಹರಿಸಿಕೊಳ್ಳವುದನ್ನು ತಿಳಿಸುತ್ತದೆ. ಈ ಒಪ್ಪಂದ ಇಂದು ಯುಎನ್‌ಎಸ್‌ಸಿಗೆ ಅನ್ವಯವಾಗುವ ನಿಯಮವಾಗಿದ್ದು, ಭಾರತ-ಪಾಕಿಸ್ತಾನ ಪ್ರಶ್ನೆ ಅನಗತ್ಯವಾಗಿದೆ.

ಭಾರತ-ಪಾಕಿಸ್ತಾನ ಸಂಬಂಧಿತ ಪ್ರಶ್ನೆಯ ಮರುಜೀವದ ಹಿಂದೆ ಜಮ್ಮು ಮತ್ತು ಕಾಶ್ಮೀರದ 43,000 ಚ.ಕಿ.ಮೀ. (1963ರಲ್ಲಿ ಪಾಕ್​ ಹಸ್ತಾಂತರಿಸಿದ 5,180 ಚ.ಕಿ.ಮೀ.) ಭೂ ಪ್ರದೇಶ ಆಕ್ರಮಿಸಿಕೊಳ್ಳುವ ಹುನ್ನಾರವಿದೆ. ಈ ಪ್ರದೇಶವು ಡ್ರ್ಯಾಗನ್​ನ 'ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್' (ಸಿಪಿಇಸಿ) ಯೋಜನೆಯ ಅವಿಭಾಜ್ಯ ಅಂಗವಾಗಿದೆ. ಇದು ಚೀನಾವನ್ನು ಅರೇಬಿಯನ್ ಸಮುದ್ರ/ ಪಶ್ಚಿಮ ಇಂಡೋ- ಪೆಸಿಫಿಕ್ ಪ್ರದೇಶಕ್ಕೆ ಸಂಪರ್ಕಿಸಲಿದೆ. ಭಾರತದ ಆತಂರಿಕ ವಿಷಯವಾದ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್​​ 5ರಂದು ಹಿಂಪಡೆದಾಗ, ಚೀನಾ ಕುತೂಹಲದಿಂದ ಎದುರು ನೋಡಿತ್ತು.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ತನ್ನ ಸಂವಿಧಾನಕ್ಕೆ ಅನುಗುಣವಾಗಿ ತೆಗೆದುಕೊಂಡ ನಡೆಗೆ ಚೀನಾ ಗಡಿ ವ್ಯಾಪ್ತಿಯಲ್ಲಿ ತಕರಾರು ತೆಗೆಯುವ ಸಂಭವವಿದೆ. ತನ್ನ ವಿಟೋ ಅಧಿಕಾರದ ಶಕ್ತಿ ತೋರ್ಪಡಿಸಲು ಭಾರತಕ್ಕೆ ಉಪದ್ರವ ಕೊಡಬಹುದು. ಏಷ್ಯಾದ ಏಕೈಕ ಖಾಯಂ ಸದಸ್ಯನಾದ ಚೀನಾ; ಅಫ್ಘಾನಿಸ್ತಾನ, ಇರಾನ್, ಇರಾಕ್, ಪ್ಯಾಲೆಸ್ತೀನ್​, ಯೆಮೆನ್ ಮತ್ತು ಸಿರಿಯಾದಂತಹ ಏಷ್ಯಾದ ರಾಷ್ಟ್ರಗಳಲ್ಲಿ ಯುಎನ್‌ಎಸ್‌ಸಿ ಕಾರ್ಯಸೂಚಿಗೆ ಅನುಗುಣವಾಗಿ ಅಂತಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.

- ಅಶೋಕ್ ಮುಖರ್ಜಿ, ವಿಶ್ವಸಂಸ್ಥೆಯ ಭಾರತದ ಮಾಜಿ ರಾಯಭಾರಿ

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.