ETV Bharat / bharat

ರಸ್ತೆ ಸೌಲಭ್ಯವಿಲ್ಲದೆ ಗರ್ಭಿಣಿಯನ್ನು 5 ಕಿ.ಮೀ. ಹೊತ್ತು ಸಾಗಿದ ಗ್ರಾಮಸ್ಥರು! - ಜಶ್ಪುರ

ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಆಂಬುಲೆನ್ಸ್ ಸೌಲಭ್ಯ ಪಡೆಯಲು ಛತ್ತೀಸ್​ಘಡದ ಜಶ್ಪುರದ ಜಬ್ಲಾ ಗ್ರಾಮದ ಸ್ಥಳೀಯರು ಗರ್ಭಿಣಿಯನ್ನು ಹೊತ್ತುಕೊಂಡು ಸುಮಾರು ಐದು ಕಿಲೋ ಮೀಟರ್ ದೂರ ಸಾಗಿದ್ದಾರೆ.

ಗರ್ಭಿಣಿಯನ್ನು 5 ಕಿ.ಮೀ ಹೊತ್ತು ಸಾಗಿದ ಗ್ರಾಮಸ್ಥರು

author img

By

Published : Sep 2, 2020, 1:11 PM IST

ಛತ್ತೀಸ್​ಘಡ: ಆಂಬುಲೆನ್ಸ್ ಸೌಲಭ್ಯ ಪಡೆಯಲು ಜಶ್ಪುರದ ಜಬ್ಲಾ ಗ್ರಾಮದ ಸ್ಥಳೀಯರು ಗರ್ಭಿಣಿಯನ್ನು ಹೊತ್ತುಕೊಂಡು ಸುಮಾರು ಐದು ಕಿಲೋ ಮೀಟರ್ ದೂರ ಸಾಗಿದ್ದಾರೆ. ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲದೆ ಈ ಅವಾಂತರ ಸೃಷ್ಟಿಯಾಗಿದೆ.

"ನಮ್ಮ ಗ್ರಾಮಕ್ಕೆ ವಾಹನಗಳು ಪ್ರವೇಶಿಸಲು ಸಾಧ್ಯವಿಲ್ಲ. ಏಕೆಂದರೆ ರಸ್ತೆಗಳಿಲ್ಲದ ಕಾರಣ ನಾವು ರೋಗಿಗಳನ್ನು ಮುಖ್ಯ ರಸ್ತೆಗೆ ಕರೆದೊಯ್ಯಬೇಕು. ಅಲ್ಲಿಂದ ಆಂಬ್ಯುಲೆನ್ಸ್ ಸೌಲಭ್ಯ ಪಡೆದುಕೊಳ್ಳಬಹುದು. ಈಗಲೂ ಸಮಸ್ಯೆ ಎದುರಿಸುತ್ತಿದ್ದು, ಗರ್ಭಿಣಿಯನ್ನು ಹೆರಿಗೆ ನೋವಿನಲ್ಲೇ 5 ಕಿಲೋ ಮೀಟರ್​ ದೂರ ಹೊತ್ತುಕೊಂಡೇ ಸಾಗಿಸಲಾಗಿದೆ. ಬಳಿಕ ಅಲ್ಲಿಂದ ಖಾಸಗಿ ವಾಹನ ಮೂಲಕ ಕರೆದೊಯ್ದಿದ್ದೇವೆ” ಎಂದು ಸ್ಥಳೀಯರು ತಿಳಿಸಿದ್ದಾರೆ.

ಬಾಗಿಚಾ ಜನಪಾದ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನೋದ್ ಸಿಂಗ್ ಮಾತನಾಡಿ, ಈ ವರ್ಷದ ಅಂತ್ಯದೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಹಿಂದೆ ಇಂತಹ ಘಟನೆಗಳು ಇಲ್ಲಿ ನಡೆದಿವೆ ಮತ್ತು ನಾವು ಅದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇವೆ ಎಂದು ತಿಳಿಸಿದ್ದಾರೆ.

ದೂರುಗಳು ನೀಡಿದ್ದರೂ ಸಹ ಗ್ರಾಮದಲ್ಲಿ ಸರಿಯಾದ ರಸ್ತೆಗಳನ್ನು ನಿರ್ಮಿಸುವ ಬೇಡಿಕೆಗಳ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಿಲ್ಲ ಎಂದು ಗ್ರಾಮಗಳ ನಿವಾಸಿಗಳು ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.