ETV Bharat / bharat

ಕೋವಿಡ್ ಹಾಟ್​​ಸ್ಪಾಟ್​ ಆದ ಚೆನ್ನೈ ಐಷಾರಾಮಿ ಹೋಟೆಲ್​ : 85 ಮಂದಿಗೆ ಸೋಂಕು

author img

By

Published : Jan 3, 2021, 1:22 AM IST

ಚೆನ್ನೈನ ಐಷಾರಾಮಿ ಹೋಟೆಲ್​ನಲ್ಲಿ ಡಿಸೆಂಬರ್ 15ರಿಂದ ಇಲ್ಲಿಯವರೆಗೆ 85 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Chennai luxury hotel turns COVID hotspot;
ಕೋವಿಡ್ ಹಾಟ್​​ಸ್ಪಾಟ್​ ಆದ ಚೆನ್ನೈ ಐಷಾರಾಮಿ ಹೋಟೆಲ್

ಚೆನ್ನೈ (ತಮಿಳುನಾಡು): ಚೆನ್ನೈ ನಗರದಲ್ಲಿರುವ ಐಟಿಸಿ ಗ್ರ್ಯಾಂಡ್ ಚೋಳ ಹೋಟೆಲ್​​ನಲ್ಲಿ ಅಲ್ಲಿನ ಸಿಬ್ಬಂದಿ ಸೇರಿದಂತೆ ಸುಮಾರು 85 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್ 15ರಿಂದ ಸುಮಾರು 609 ಮಂದಿಗೆ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಇವರಲ್ಲಿ 85 ಮಂದಿಗೆ ಸೋಂಕು ದೃಢಪಟ್ಟಿದೆ. ಹೋಟೆಲ್​ನಲ್ಲಿನ ಎಲ್ಲಾ ಅತಿಥಿಗಳ ತಪಾಸಣೆ ನಡೆಸಬೇಕೆಂದು ಗ್ರೇಟರ್​ ಚೆನ್ನೈ ನಿಗಮಕ್ಕೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ಜೆ.ರಾಧಾಕೃಷ್ಣನ್ ತಿಳಿಸಿದ್ದಾರೆ.

ಈ ಬಗ್ಗೆ ಈಗಾಗಲೇ ಐಟಿಸಿ ಗ್ರ್ಯಾಂಡ್ ಚೋಳ ಪ್ರತಿಕ್ರಿಯೆ ನೀಡಿದ್ದು, ಹೋಟೆಲ್​ನಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಲಾಗಿದೆ. ಸಾಮಾಜಿಕ ಅಂತರ ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದಿದೆ.

ಇದನ್ನೂ ಓದಿ: ಕೋವಿಡ್​ ಲಸಿಕೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ: ಅಖಿಲೇಶ್ ಹೇಳಿಕೆಗೆ ಓಮರ್ ಅಬ್ದುಲ್ಲಾ ಪ್ರತಿಕ್ರಿಯೆ!

ಡಿಸೆಂಬರ್ 15ರಲ್ಲಿ ಹೋಟೆಲ್​ನ ಓರ್ವ ಬಾಣಸಿಗನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇದಾದ ನಂತರ ಸೋಂಕು ಪರೀಕ್ಷೆಗಳನ್ನು ನಡೆಸಲಾಗಿದ್ದು, ಕೆಲವು ಪ್ರಕರಣಗಳು ಪತ್ತೆಯಾಗಿವೆ. ಡಿಸೆಂಬರ್ 31ರಂದು 16 ಮತ್ತು ಜನವರಿ 1ರಂದು 13 ಸೋಂಕು ಪ್ರಕರಣಗಳು ಕಂಡು ಬಂದಿವೆ.

ಹೋಟೆಲ್​ ಸಿಬ್ಬಂದಿ ಮಾತ್ರವಲ್ಲದೇ, ಸಿಬ್ಬಂದಿಯ ಸುತ್ತಮುತ್ತಲಿನ ನಿವಾಸಗಳಲ್ಲೂ ಕೂಡಾ ಕೋವಿಡ್ ಕಂಡುಬಂದಿದೆ. ಬಹುತೇಕ ಮಂದಿಗೆ ಕಡಿಮೆ ರೋಗ ಲಕ್ಷಣಗಳು ಕಂಡುಬಂದಿದ್ದು, ಅವರಿಗೆ ಚಿಕಿತ್ಸೆಯ ನಂತರ ಮನೆಗೆ ಕಳುಹಿಸಲಾಗಿದೆ ಎಂದು ರಾಧಾಕೃಷ್ಣನ್ ಹೇಳಿದ್ದಾರೆ.

ಈಗಾಗಲೇ ಹೋಟೆಲ್​ಗೆ ಬಂದಿದ್ದ ಹಾಗೂ ಅಲ್ಲಿನ ಸಿಬ್ಬಂದಿಗೆ ಸಂಪರ್ಕದಲ್ಲಿರುವ ಎಲ್ಲರಿಗೂ ಕೂಡಾ ಸೋಂಕು ಪರೀಕ್ಷೆಗೆ ಒಳಗಾಗುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಚೆನ್ನೈ ನಗರದ ಎಲ್ಲಾ ಹೋಟಲ್​ಗಳಲ್ಲಿ ಮುಂಜಾಗ್ರತೆ ವಹಿಸಿಕೊಳ್ಳಲು ಸೂಚನೆ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.