ಛತ್ತೀಸ್ಗಡ: ಸುಕ್ಮಾದ ದಟ್ಟ ಅರಣ್ಯದಲ್ಲಿ ಅವಿತು ಕುಳಿತಿದ್ದ ನಕ್ಸಲರ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರು ನಕ್ಸಲರನ್ನು ಬಲಿ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ನಕ್ಸಲರ ಮೇಲೆ ಗುಂಡಿನ ದಾಳಿ ನಡೆಸಿ ಇಬ್ಬರನ್ನು ಹೊಡೆದುರುಳಿಸಿದ್ದಾರೆ. ಪೊಲೀಸರನ್ನು ನೋಡುತ್ತಿದ್ದಂತೆ ದಂಗಾದ ನಕ್ಸಲರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಅಲ್ಲದೆ ಇಂದು ನಡೆದ ಗುಂಡಿನ ಚಕಮಕಿಯಲ್ಲಿ ಹತರಾದ ನಕ್ಸಲರ ತಲೆಗೆ ಈ ಹಿಂದೆ ಬಹುಮಾನ ಘೋಷಿಸಲಾಗಿತ್ತು.