ETV Bharat / bharat

ಮುಂದಿನ ವರ್ಷ ಚಂದ್ರಯಾನ-3 ಉಡಾವಣೆ ಸಾಧ್ಯತೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್

2021ರ ಮೊದಲಾರ್ಧದಲ್ಲಿ ಚಂದ್ರಯಾನ-3 ಉಡಾವಣೆ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

Chandrayaan 3 to be launched in first half of 2021,2021ಕ್ಕೆ ಚಂದ್ರಯಾನ-3
2021ಕ್ಕೆ ಚಂದ್ರಯಾನ-3
author img

By

Published : Mar 4, 2020, 8:11 PM IST

ನವದೆಹಲಿ: 2021ರ ಮೊದಲಾರ್ಧದಲ್ಲಿ ಚಂದ್ರಯಾನ-3 ಉಡಾವಣೆ ಆಗಬಹುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ರು.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತವಾಗಿ ಉತ್ತರಿಸಿರುವ ಅವರು, ಮೈಕ್ರೊಗ್ರ್ಯಾವಿಟಿಗೆ ಸಂಬಂಧಿಸಿದ ನಾಲ್ಕು ಜೈವಿಕ ಮತ್ತು ಎರಡು ಭೌತಿಕ ವಿಜ್ಞಾನ ಪ್ರಯೋಗಗಳನ್ನು ಗಗನಯಾನ ಯೋಜನೆಯ ಸಮಯದಲ್ಲಿ ನಡೆಸಲಾಗುವುದು ಎಂದರು.

ತಾತ್ಕಾಲಿಕವಾಗಿ ಚಂದ್ರಯಾನ-3, ಮುಂದಿನ ವರ್ಷದ ಮೊದಲಾರ್ಧಕ್ಕೆ ಉಡಾವಣೆಯ ನಿರ್ಧಾರ ಮಾಡಲಾಗಿದೆ. ಚಂದ್ರಯಾನ-2 ರಿಂದ ಕಲಿತ ಪಾಠಗಳಿಂದ ಚಂದ್ರಯಾನ-3 ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಚಂದ್ರಯಾನ-2 ಕಳೆದ ವರ್ಷ ಚಂದ್ರನ ಮೇಲ್ಮೈನಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡದ ಕಾರಣ ವಿಫಲವಾಗಿತ್ತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈ ಯೋಜನೆಯನ್ನು ಮತ್ತೆ ಪ್ರಾರಂಭಿಸಲು ನಿರ್ಧರಿಸಿತು. ಈ ವರ್ಷದಂತ್ಯದ ವೇಳೆಗೆ ಯೋಜನೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಹೇಳಿದೆ.

ಇದೇ ವೇಳೆ, ಗಗನಯಾನ ಯೋಜನೆಯ ಪ್ರಗತಿ ವಿವರಿಸಿದ ಸಿಂಗ್, ನಾಲ್ಕು ಗಗನಯಾತ್ರಿಗಳಿಗೆ ಬಾಹ್ಯಾಕಾಶ ಹಾರಾಟದ ತರಭೇತಿ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.