ETV Bharat / bharat

ರಫೇಲ್​ ಡೀಲ್​: ಕೇಂದ್ರದಿಂದ ಸುಪ್ರೀಮ್‌ಕೋರ್ಟ್​ಗೆ ಮರು ಪರಿಶೀಲನಾ ಅರ್ಜಿ

ರಫೇಲ್​ ​ಡೀಲ್​ ಸಂಬಂಧಿಸಿದಂತೆ ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ವೇಳೆ ಕೆಲ ಸ್ಪೆಲ್ಲಿಂಗ್​ ಮಿಸ್ಟೇಕ್​ನಿಂದಾಗಿ ಆದ ಅಪಾರ್ಥ ಸರಿಪಡಿಸುವ ಸಂಬಂಧ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಕೆ ಮಾಡಿತ್ತು. ಈ ಸಂಬಂಧ ಕೇಂದ್ರ ಇಂದು ಹೊಸದಾಗಿ ಅಫಿಡವಿಟ್​ ಸಲ್ಲಿಕೆ ಮಾಡಿದೆ.

author img

By

Published : May 4, 2019, 12:18 PM IST

Updated : May 4, 2019, 1:23 PM IST

ಕೇಂದ್ರ ಸರ್ಕಾರದಿಂದ ಸುಪ್ರೀಮ್​ ಕೋರ್ಟ್​ಗೆ ಮರು ಪರಿಶೀಲನಾ ಅರ್ಜಿ

ನವದೆಹಲಿ: ರಫೇಲ್​ ​ಡೀಲ್ ಕುರಿತಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಈಗ ಮರು ಪರಿಶೀಲನಾ ಅರ್ಜಿಯೊಂದನ್ನ ಸಲ್ಲಿಸಿದೆ.

ಮರು ಪರಿಶೀಲನಾ ಅರ್ಜಿಯಲ್ಲಿ, ಡಿಸೆಂಬರ್ 14, 2018ರಂದು 36 ರಫೇಲ್​ ಜೆಟ್ಸ್​ ಡೀಲ್ ​ಸಂಬಂಧ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದ ತೀರ್ಪು ಸರಿಯಾಗಿದೆ. ಜೊತೆಗೆ ಮಾಧ್ಯಮಗಳು ನೀಡಿದ ವರದಿಗಳು ಸಮರ್ಥನೀಯವಾಗಿದೆ. ಆದರೆ, ಇವು ರಕ್ಷಣಾ ಸಂಬಂಧಿ ವಿಚಾರಗಳಾಗಿರುವುದರಿಂದ ಬಹಿರಂಗಪಡಿಸಲಾಗುವುದಿಲ್ಲ ಎಂದು ಇವತ್ತು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಹೊಸ ಅಫಿಡೆವಿಟ್‌ ಸಲ್ಲಿಸಿದೆ.

ಇದಕ್ಕೂ ಮೊದಲು ಕೇಂದ್ರ ಸರ್ಕಾರವು ಮರುಪರಿಶೀಲನಾ ಅರ್ಜಿ ಸಲ್ಲಿಸಲು ಕಾಲಾವಕಾಶ ಕೇಳಿಕೊಂಡಿತ್ತು. ಕೇಂದ್ರೀಯ ಸರಕಾರದ ವಕೀಲರು, ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್, ನ್ಯಾಯಮೂರ್ತಿ ದೀಪಕ್ ಗುಪ್ತಾ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಪೀಠದ ಮುಂದೆ ಸಂಬಂಧಪಟ್ಟ ಪತ್ರಗಳನ್ನು ಸಲ್ಲಿಸಲು ಅನುಮತಿ ಕೇಳಿದ್ದರು. ಅದಕ್ಕೆ ಸುಪ್ರೀಮ್​ ಕೋರ್ಟ್​ ಕೂಡ ಅನುಮತಿ ನೀಡಿ, ಕಾಲಾವಕಾಶ ನೀಡಿತ್ತು.

ಡಿಸೆಂಬರ್ 14, 2018 ರಂದು ರಾಫೆಲ್ ಒಪ್ಪಂದದ ಬಗ್ಗೆ ಮಾಜಿ ಕೇಂದ್ರ ಸಚಿವ ಯಶವಂತ್ ಸಿಂಗ್ ​ಮತ್ತು ಅರುಣ್ ಶೌರಿ ಹಾಗೂ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರು. ಇವರ ಹೊರತಾಗಿ ಮತ್ತೊಬ್ಬ ವಕೀಲ ಮನೋಹರ್ ಲಾಲ್ ಶರ್ಮಾ ಸುಪ್ರೀಂ ಕೋರ್ಟ್​ಗೆ ಇದೇ ವಿಚಾರವಾಗಿ ಪರಾಮರ್ಶೆ ಅರ್ಜಿಯನ್ನು ಸಲ್ಲಿಸಿದ್ದರು.

Intro:Body:

1 rafel deal.txt   

close

Conclusion:
Last Updated : May 4, 2019, 1:23 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.