ETV Bharat / bharat

ಇನ್ಮುಂದೆ  ಹಳಿ ಮೇಲೆ ಖಾಸಗಿ ರೈಲು... ವಿಮಾನ ನಿಲ್ದಾಣದಂತೆ ಹೈಫೈ ಆಗಲಿವೆ ರೈಲ್ವೆ ಸ್ಟೇಷನ್​​​ಗಳು! - ಖಾಸಗಿ ರೈಲು

ನಿರ್ಮಲಾ ಸೀತಾರಾಮನ್​ ಮಂಡನೆ ಮಾಡಿರುವ ಬಜೆಟ್​ನಲ್ಲಿ ರೈಲ್ವೆ ಇಲಾಖೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇದೇ ಮೊದಲ ಬಾರಿಗೆ ಖಾಸಗಿ ರೈಲು ಸಂಚರಿಸಲು ಅನುಮತಿ ನೀಡುವ ನಿರ್ಧಾರಕ್ಕೆ ಬರಲಾಗಿದೆ.

ರೈಲ್ವೆ ಇಲಾಖೆ
author img

By

Published : Jul 5, 2019, 4:19 PM IST

ನವದೆಹಲಿ: ನಿರ್ಮಲಾ ಸೀತಾರಾಮನ್​ ಮಂಡನೆ ಮಾಡಿರುವ ಚೊಚ್ಚಲ ಬಜೆಟ್​​ನಲ್ಲಿ ರೈಲ್ವೆ ಇಲಾಖೆಗೂ ಹೆಚ್ಚಿನ ಆದ್ಯತೆ ನೀಡಿದ್ದು, ಇದೇ ಮೊದಲ ಬಾರಿಗೆ ಖಾಸಗಿ ಇಲಾಖೆ ರೈಲು ಓಡಾಟ ನಡೆಸಲು ಅನುಮತಿ ನೀಡಲಾಗುವುದು ಎಂದು ಹೇಳಿದ್ದಾರೆ.

ಪ್ರಮುಖವಾಗಿ ಸ್ವಚ್ಛತೆ, ಸುರಕ್ಷೆ ಹಾಗೂ ನಿಗದಿತ ಸಮಯದೊಳಗೆ ರೈಲುಗಳು ಸಂಚಾರ ನಡೆಸುವಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿರುವ ಅವರು, ರೈಲ್ವೆ ಇಲಾಖೆ ಆಧುನೀಕರಣಕ್ಕೆ 1.56 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದರು.

2019 -20ರಲ್ಲಿ ಬರೋಬ್ಬರಿ 300ಕಿಲೋ ಮೀಟರ್​ ಮೆಟ್ರೋ ರೈಲು ಸಂಪರ್ಕ ವಿಸ್ತರಣೆ, ಹಾಗೂ ಇದೇ ವರ್ಷಗಳಲ್ಲಿ 657 ಕಿಲೋ ಮೀಟರ್​ ಹೊಸ ಮೆಟ್ರೋ ನೆಟವರ್ಕ್​ ವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದು, ಸಬ್ ಅರ್ಬನ್ ರೈಲ್ವೆ, ಮೆಟ್ರೋ ರೈಲ್ವೆ ಸಂಪರ್ಕ ವಿಸ್ತರಣೆಗೆ ಒತ್ತು ಕೊಡಲು ಆದ್ಯತೆ ಎಂದರು. ಸರಕು ಸಾಗಣೆ ರೈಲುಗಳಿಗೆ ಪ್ರತ್ಯೇಕ ಹಳಿಗಳ ನಿರ್ಮಾಣ. ಮೆಟ್ರೋ ರೈಲು ಉತ್ತೇಜಿಸಲು ಪಿಪಿಪಿ ಮಾದರಿ ಜಾರಿಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಬಜೆಟ್​ ಭಾಷಣದಲ್ಲಿ ಘೋಷಣೆ ಮಾಡಿದ್ದಾರೆ.

ಖಾಸಗಿ ರೈಲುಗಳ ಸಂಚಾರಕ್ಕೆ ಅನುಮತಿ
ಇದೇ ಮೊದಲ ಬಾರಿಗೆ ಖಾಸಗಿ ರೈಲುಗಳು ದೇಶದಲ್ಲಿ ಓಡಾಟ ನಡೆಸಲು ಅನುಮತಿ ನೀಡಲಾಗುವುದು ಎಂದಿರುವ ಸಚಿವೆ, ಪ್ರವಾಸೋದ್ಯಮ ಮಾರ್ಗಗಳಲ್ಲಿ ಕೆಲ ಆಯ್ದು ರೈಲುಗಳನ್ನ ಖಾಸಗಿ ಪಾಲುದಾರಿಕೆಯೊಂದಿಗೆ ಓಡಿಸಲು ಭಾರತೀಯ ರೈಲ್ವೆ ಇಲಾಖೆ ಪ್ಲಾನ್​ ರೂಪಿಸಿಕೊಂಡಿದೆ ಎಂದು ತಿಳಿಸಿದ್ದಾರೆ. 100 ದಿನಗಳ ಯೋಜನೆಯಡಿ ರೈಲ್ವೆ ಪ್ರಯಾಣಿಕರಿಗೆ ಈ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.

Intro:Body:

ದೇಶದಲ್ಲಿ ಓಡಲಿವೆ ಖಾಸಗಿ ರೈಲು... 22 ರೈಲ್ವೆ ಸ್ಟೇಷನ್​ ವಿಮಾನ ನಿಲ್ದಾಣದಂತೆ ಅಭಿವೃದ್ದಿಗೆ ತೀರ್ಮಾನ! 

ನವದೆಹಲಿ: ನಿರ್ಮಲಾ ಸೀತಾರಾಮನ್​ ಮಂಡನೆ ಮಾಡಿರುವ ಚೊಚ್ಚಲ ಬಜೆಟ್​​ನಲ್ಲಿ ರೈಲ್ವೆ ಇಲಾಖೆಗೂ ಹೆಚ್ಚಿನ ಆದ್ಯತೆ ನೀಡಿದ್ದು, ಇದೇ ಮೊದಲ ಬಾರಿಗೆ ಖಾಸಗಿ ಇಲಾಖೆ ರೈಲು ಓಡಾಟ ನಡೆಸಲು ಅನುಮತಿ ನೀಡಲಾಗುವುದು ಎಂದು ಹೇಳಿದ್ದಾರೆ. 

ಪ್ರಮುಖವಾಗಿ ಸ್ವಚ್ಛತೆ,ಸುರಕ್ಷೆ ಹಾಗೂ ನಿಗದಿತ ಸಮಯದೊಳಗೆ ರೈಲುಗಳು ಸಂಚಾರ ನಡೆಸುವಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿರುವ ಅವರು, ರೈಲ್ವೆ ಇಲಾಖೆ ಆಧುನೀಕರಣಕ್ಕೆ 1.56 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದರು. 

2019 -20ರಲ್ಲಿ ಬರೋಬ್ಬರಿ 300ಕಿಲೋ ಮೀಟರ್​ ಮೆಟ್ರೋ ರೈಲು  ಸಂಪರ್ಕ ವಿಸ್ತರಣೆ, ಹಾಗೂ ಇದೇ  ವರ್ಷಗಳಲ್ಲಿ 657 ಕಿಲೋ ಮೀಟರ್​ ಹೊಸ ಮೆಟ್ರೋ ನೆಟವರ್ಕ್​ ವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದು,ಸಬ್ ಅರ್ಬನ್ ರೈಲ್ವೆ, ಮೆಟ್ರೋ ರೈಲ್ವೆ ಸಂಪರ್ಕ ವಿಸ್ತರಣೆಗೆ ಒತ್ತು ಕೊಡಲು ಆದ್ಯತೆ ಎಂದರು.ಸರಕು ಸಾಗಣೆ ರೈಲುಗಳಿಗೆ ಪ್ರತ್ಯೇಕ ಹಳಿಗಳ ನಿರ್ಮಾಣ. ಮೆಟ್ರೋ ರೈಲು ಉತ್ತೇಜಿಸಲು ಪಿಪಿಪಿ ಮಾದರಿ ಜಾರಿಗೊಳಿಸಲು ಆದ್ಯತೆ ನೀಡಲಾಗುವುದು ಎಂದರು. 

ಖಾಸಗಿ ರೈಲುಗಳ ಸಂಚಾರಕ್ಕೆ ಅನುಮತಿ

ಇದೇ ಮೊದಲ ಬಾರಿಗೆ ಖಾಸಗಿ ರೈಲುಗಳು ದೇಶದಲ್ಲಿ ಓಡಾಟ ನಡೆಸಲು ಅನುಮತಿ ನೀಡಲಾಗುವುದು ಎಂದಿರುವ ಸಚಿವೆ, ಪ್ರವಾಸೋದ್ಯಮ ಮಾರ್ಗಗಳಲ್ಲಿ ಕೆಲ ಆಯ್ದು ರೈಲುಗಳನ್ನ ಖಾಸಗಿ ಪಾಲುದಾರಿಕೆಯೊಂದಿಗೆ ಓಡಿಸಲು ಭಾರತೀಯ ರೈಲ್ವೆ ಇಲಾಖೆ ಪ್ಲಾನ್​ ರೂಪಿಸಿಕೊಂಡಿದೆ ಎಂದು ತಿಳಿಸಿದ್ದಾರೆ. 100 ದಿನಗಳ ಯೋಜನೆಯಡಿ ರೈಲ್ವೆ ಪ್ರಯಾಣಿಕರಿಗೆ ಈ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.