ETV Bharat / bharat

ವಧುವಿಗೆ ಕೊರೊನಾ ಸೋಂಕು: 35 ಮಂದಿ ವಿರುದ್ಧ ಎಫ್‌ಐಆರ್‌ - ವಧುವಿಗೆ ಕೋವಿಡ್‌-19 ಪಾಸಿವಿಟ್‌

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ವಧುವಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮದುವೆ ಆಯೋಜಿಸಿದ್ದ 35 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

bride found corona positive-fir registered against marriage party in bhopal
ಮಧುವಿಗೆ ಕೊರೊನಾ ಸೋಂಕು; 35 ಮಂದಿ ವಿರುದ್ಧ ಎಫ್‌ಐಆರ್‌
author img

By

Published : May 21, 2020, 11:36 PM IST

Updated : May 22, 2020, 12:02 AM IST

ಭೋಪಾಲ್‌(ಮಧ್ಯಪ್ರದೇಶ): ವಧುವಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮದುವೆ ಆಯೋಜಿಸಿದ್ದ 35 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿರುವ ಘಟನೆ ಭೋಪಾಲ್‌ನಲ್ಲಿ ನಡೆದಿದೆ.

ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ವಧು ಹಾಗೂ ವರನ ಕಡೆಯಿಂದ ಗರಿಷ್ಠ 25 ಸದಸ್ಯರು ಭಾಗವಹಿಸಲು ಅವಕಾಶ ನೀಡಲಾಗಿತ್ತು. ಆದ್ರೆ ನಗರದ ಜಾಟ್ ಕೇರಿಯಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ವಿವಾಹ ಕಾರ್ಯಕ್ರಮದಲ್ಲಿ ಹೆಚ್ಚಿನ ಜನ ಸೇರಿದ್ದ ಹಿನ್ನೆಲೆಯಲ್ಲಿ ಕೇಸ್‌ ದಾಖಲಿಸಲಾಗಿದೆ.

ಮದುವೆ ವೇಳೆ ಮೆರವಣಿಗೆ ನಡೆದಿದ್ದು, ಅಲ್ಲಿ ವಧುವಿಗೆ ಸೋಂಕು ಹರಡಿದೆ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ.

ಕೆೊರೊನಾ ಕುರಿತ ಕೈಗೊಂಡಿರು ಕ್ರಮಗಳ ಬಗ್ಗೆ ಸಿಎಂ ಶಿವರಾಜ್‌ ಸಿಂಗ್ ಚೌಹಾಣ್ ಇಂದು ಸಭೆ ನಡೆಸಿದ್ದಾರೆ. ಗೃಹ, ಆರೋಗ್ಯ ಸಚಿವ ನರೋತ್ತಮ್ ಮಿಶ್ರಾ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ದಿನಗಳಲ್ಲಿ ಜ್ವರ ಚಿಕಿತ್ಸಾಲಯಗಳು ಪ್ರತಿಯೊಂದು ವಾರ್ಡ್ ಮತ್ತು ಪ್ರದೇಶಗಳಲ್ಲಿ ಪ್ರಾರಂಭವಾಗಲಿದ್ದು, ಈ ಚಿಕಿತ್ಸಾಲಯಗಳು ಸರ್ಕಾರಿ ಮತ್ತು ಖಾಸಗಿಯಾಗಿರುತ್ತವೆ. ಜನ ಇಲ್ಲಿ ಆರೋಗ್ಯ ತಪಾಸಣೆಯನ್ನು ಸುಲಭವಾಗಿ ಪಡೆಯಬಹುದು. ಇದಲ್ಲದೇ, ಎಲ್ಲ ಸರ್ಕಾರಿ ಮತ್ತು ಗುತ್ತಿಗೆ ಆಸ್ಪತ್ರೆಗಳಲ್ಲಿ ಉಚಿತ ಪರೀಕ್ಷೆ ಮತ್ತು ಕೊರೊನಾ ಚಿಕಿತ್ಸೆಯ ಸೌಲಭ್ಯ ಮುಂದುವರಿಯುತ್ತದೆ. ಗ್ವಾಲಿಯರ್ ಜಿಲ್ಲೆಯಲ್ಲಿ ಎಲ್ಲ ರೋಗಿಗಳು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.

Last Updated : May 22, 2020, 12:02 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.