ತೆಲಂಗಾಣ: ಕೊರೊನಾ ಭಯದಿಂದ ಯುವಕನ ಮೃತ ದೇಹವನ್ನು ಜೆಸಿಬಿಯ ಮೂಲಕ ಸ್ಮಶಾನಕ್ಕೆ ಕೊಂಡೊಯ್ದ ಘಟನೆ ನಡೆದಿದೆ. ವಡ್ಡಪಲ್ಲಿ ಮಂಡಲ್ ಜೋಗುಲಂಬಾ ಗಡ್ವಾಲ್ ಜಿಲ್ಲೆಯ ರಾಮಪುರಂ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕೆಲವು ದಿನಗಳ ಹಿಂದೆ ಯುವಕರ ಗುಂಪೊಂದು ತಿರುಪತಿ ದೇವಸ್ಥಾನಕ್ಕೆ ಹೋಗಿತ್ತು. ಅವರು ಹಿಂತಿರುಗುತ್ತಿದ್ದಂತೆ ಗುಂಪಿನ ಒಬ್ಬ ವ್ಯಕ್ತಿಯಲ್ಲಿ ಕೋವಿಡ್ -19 ದೃಢಪಟ್ಟಿತ್ತು.
ಯಾವುದೇ ರೋಗಲಕ್ಷಣಗಳಿಲ್ಲದ ಕಾರಣ ವೈದ್ಯರು ಉಳಿದ ವ್ಯಕ್ತಿಗಳಿಗೆ ಕೊರೊನಾ ಪರೀಕ್ಷೆ ನಡೆಸಿರಲಿಲ್ಲ. ಆದರೆ, ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಮೃತಪಟ್ಟಿದ್ದಾನೆ.
ಕೊರೊನಾ ಶಂಕೆ ಹಿನ್ನೆಲೆ ಮೃತದೇಹವನ್ನು ಸ್ಮಶಾನಕ್ಕೆ ಕರೆದೊಯ್ಯಲು ಯಾರೂ ಮುಂದೆ ಬಂದಿಲ್ಲ. ಹೀಗಾಗಿ ಕುಟುಂಬ ಸದಸ್ಯರು ಜೆಸಿಬಿ ಸಹಾಯದಿಂದ ಅಂತ್ಯಕ್ರಿಯೆ ನಡೆಸಿದ್ದಾರೆ.