ETV Bharat / bharat

ಚಂಬಲ್​ ದೋಣಿ ದುರಂತ: 12 ಮಂದಿ ಸಾವು, 20ಕ್ಕೂ ಅಧಿಕ ಜನರ ರಕ್ಷಣೆ

ಸರಕು ಮತ್ತು ವಾಹನಗಳು ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ಸಾಗಿಸುತ್ತಿದ್ದ ದೋಣಿ ಮಗುಚಿರುವ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯ ಖಟೋಲಿ ಪ್ರದೇಶದ ಗೋಥಾಕಲಾ ಗ್ರಾಮದ ಬಳಿಯ ಚಂಬಲ್​ ನದಿಯಲ್ಲಿ ನಡೆದಿದೆ.

ಚಂಬಲ್​ ನದಿಯಲ್ಲಿ ಮುಳುಗಿದ  ದೋಣಿ
ಚಂಬಲ್​ ನದಿಯಲ್ಲಿ ಮುಳುಗಿದ ದೋಣಿ
author img

By

Published : Sep 16, 2020, 10:58 AM IST

Updated : Sep 16, 2020, 2:30 PM IST

ಕೋಟಾ(ರಾಜಸ್ಥಾನ): ಸರಕು ಮತ್ತು ವಾಹನಗಳು ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ಸಾಗಿಸುತ್ತಿದ್ದ ದೋಣಿ ಮಗುಚಿರುವ ಘಟನೆ ಜಿಲ್ಲೆಯ ಖಟೋಲಿ ಪ್ರದೇಶದ ಗೋಥಾಕಲಾ ಗ್ರಾಮದ ಬಳಿಯ ಚಂಬಲ್​ ನದಿಯಲ್ಲಿ ನಡೆದಿದೆ.

ಚಂಬಲ್​ ನದಿಯಲ್ಲಿ ಮುಳುಗಿದ ದೋಣಿ

ಜನರು ದೋಣಿ ಮೂಲಕ ಕಮಲೇಶ್ವರ ಧಾಮ್ ಬುಂಡಿ ಪ್ರದೇಶಕ್ಕೆ ತೆರಳುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ದೋಣಿ ಮಗುಚಿದ್ದು, ಜನರೆಲ್ಲರೂ ನೀರಿಗೆ ಬಿದ್ದಿದ್ದಾರೆ. ಘಟನೆಯಲ್ಲಿ ಅಸುನೀಗಿರುವ 12 ಜನರ ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, 20ಕ್ಕೂ ಅಧಿಕ ಜನರನ್ನು ರಕ್ಷಣೆ ಮಾಡಲಾಗಿದೆ.

ಈ ಘಟನೆ ಬೆಳಗ್ಗೆ 8 ಗಂಟೆ ಸುಮಾರಿಗೆ ಸಂಭವಿಸಿದೆ. ಘಟನೆಯ ಬಗ್ಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಜಿಲ್ಲಾಡಳಿತವನ್ನು ಸಂಪರ್ಕಿಸಿ ಮಾಹಿತಿ ಕಲೆಹಾಕಿದ್ದಾರೆ. ಎಸ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.

ಘಟನೆಯ ಕುರಿತು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಈ ಸ್ಥಳದಲ್ಲಿ ಕಾನೂನು ಬಾಹಿರವಾಗಿ ದೋಣಿಗಳನ್ನು ಚಲಾಯಿಸಲಾಗುತ್ತಿದೆ. ಅವಘಡಗಳು ಸಂಭವಿಸಿದರೂ ಇಲ್ಲಿ ಸುರಕ್ಷತಾ ಸಾಧನಗಳು ಇಲ್ಲ ಎಂದು ಆರೋಪಿಸಿದ್ದಾರೆ.

Last Updated : Sep 16, 2020, 2:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.