ನವ ದೆಹಲಿ: ಬಿಜೆಪಿಯ ರಾಜಸ್ಥಾನ ರಾಜ್ಯ ಘಟಕದ ಅಧ್ಯಕ್ಷ ಮದನ್ ಲಾಲ್ ಸೈನಿ ಅವರ ಹಠಾತ್ ನಿಧನದಿಂದಾಗಿ ಇಂದು (ಮಂಗಳವಾರ) ನಿಗದಿಯಾಗಿದ್ದ ಬಿಜೆಪಿ ಸಂಸದೀಯ ಪಕ್ಷದ ಸಭೆಯು ಮುಂದೂಡಲ್ಪಟ್ಟಿದೆ.
ಎರಡನೇ ಬಾರಿ ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ನೇತೃತ್ವದ ಮೊದಲ ಸಭೆ ಇದಾಗಿತ್ತು. ಸಭೆಯ ಹೊಸ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.
75 ವರ್ಷದ ಬಿಜೆಪಿ ಮುಖಂಡರಾದ ಸೈನಿ ಅವರು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಸೋಮವಾರ ಕೊನೆಯುಸಿರೆಳೆದರು.
ಬಿಜೆಪಿಯ ಮೊದಲ ಸಂಸದೀಯ ಪಕ್ಷದ ಸಭೆ ಮತ್ತು ಕಾರ್ಯನಿರತ ಅಧ್ಯಕ್ಷರಾಗಿ ಜೆಪಿ ನಡ್ಡಾ ಆಯ್ಕೆಯಾದ ನಂತರ ಇಂದು ಬೆಳಿಗ್ಗೆ ಅಧಿವೇಶನ ನಡೆಯಬೇಕಿತ್ತು.