ETV Bharat / bharat

ಮೂರು ಹೋಳಾಗಿರುವ ಮಧ್ಯ ಪ್ರದೇಶ ಬಿಜೆಪಿ; ಶತ್ರುಘ್ನ ಸಿನ್ಹಾ - ಮಧ್ಯಪ್ರದೇಶದ ಬಿಜೆಪಿ

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾತ್ರವಲ್ಲದೇ ಜ್ಯೋತಿರಾದಿತ್ಯ ಸಿಂಧಿಯಾ ಅವರೂ ಸಿನ್ಹಾ ಟೀಕೆಗೆ ಗುರಿಯಾಗಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ 22 ಜನ ಶಾಸಕರೊಂದಿಗೆ ಬಿಜೆಪಿಗೆ ಸೇರಿದ ನಂತರ ಕಮಲ್ ನಾಥ್ ನೇತೃತ್ವದ ಸರ್ಕಾರ ಬಿದ್ದು ಹೋಗಿತ್ತು.

ಶತ್ರುಘನ್ ಸಿನ್ಹಾ
ಶತ್ರುಘನ್ ಸಿನ್ಹಾ
author img

By

Published : Jul 9, 2020, 12:29 AM IST

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆಯ ನಂತರ ಭುಗಿಲೆದ್ದಿರುವ ಅಸಮಾಧಾನ ಕುರಿತು ಮಾಜಿ ಸಂಸದ ಶತ್ರುಘ್ನ ಸಿನ್ಹಾ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ಸದ್ಯ ಮಧ್ಯ ಪ್ರದೇಶದಲ್ಲಿ ಬಿಜೆಪಿಯು ಮಹಾರಾಜ್, ಅತೃಪ್ತರು ಹಾಗೂ ಶಿವರಾಜ್ ಎಂಬ ಮೂರು ಬಣಗಳಾಗಿವೆ ಎಂದು ಶತ್ರುಘ್ನ ಸಿನ್ಹಾ ಸರ್ಕಾರವನ್ನು ತಿವಿದಿದ್ದಾರೆ.

ಹೊಸದಾಗಿ ರಚನೆಯಾದ ಸಂಪುಟದಲ್ಲಿ ಸ್ಥಾನ ಪಡೆಯಲಾಗದೇ ಒದ್ದಾಡುತ್ತಿರುವ ಹಿರಿಯ ಬಿಜೆಪಿ ನಾಯಕರನ್ನು ಅತೃಪ್ತ (ನಾರಾಜ್) ಬಣದವರೆಂದು ಅವರು ಬಣ್ಣಿಸಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾತ್ರವಲ್ಲದೇ ಜ್ಯೋತಿರಾದಿತ್ಯ ಸಿಂಧಿಯಾ ಅವರೂ ಸಿನ್ಹಾ ಟೀಕೆಗೆ ಗುರಿಯಾಗಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ 22 ಜನ ಶಾಸಕರೊಂದಿಗೆ ಬಿಜೆಪಿಗೆ ಸೇರಿದ ನಂತರ ಕಮಲ್ ನಾಥ್ ನೇತೃತ್ವದ ಸರ್ಕಾರ ಬಿದ್ದು ಹೋಗಿತ್ತು.

ಈಗ ಶಿವರಾಜ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಹೊಸದಾಗಿ 28 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಪ್ರಮಾಣ ವಚನ ಸ್ವೀಕರಿಸಿ ಆರು ದಿನಗಳಾದರೂ ಈ ಸಚಿವರಿಗೆ ಖಾತೆ ಹಂಚಿಕೆ ಮಾಡಲು ಸಿಎಂ ಚೌಹಾಣ್​ಗೆ ಸಾಧ್ಯವಾಗಿಲ್ಲ. ಇದೇ ಕಾರಣದಿಂದ ಮಧ್ಯ ಪ್ರದೇಶ ಬಿಜೆಪಿ ಮೂರು ಗುಂಪುಗಳಾಗಿ ವಿಭಜನೆಯಾಗಿದೆ ಎಂದು ಶತ್ರುಘ್ನ ಸಿನ್ಹಾ ಟೀಕೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.