ಪಾಟ್ನಾ : ವಿಧಾನಸಭಾ ಚುನಾವಣಾ ಫಲಿತಾಂಶ ಬಹಿರಂಗಗೊಳ್ಳುತ್ತಿರುವ ಬೆನ್ನಲ್ಲೇ ಮಹಾಘಟ ಬಂಧನ್ನ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ನಿವಾಸದ ಮುಂದೆ ವ್ಯಾಪಾರ, ವಹಿವಾಟು ಜೋರಾಗಿ ನಡೆಯುತ್ತಿದೆ.
ಚುನಾವಣೋತ್ತರ ಫಲಿತಾಂಶ ಮಹಾಘಟಬಂಧನ್ ಪರವಾಗಿ ಅಂಕಿ ಅಂಶಗಳನ್ನು ನೀಡದ ಬೆನ್ನಲ್ಲೇ ತೇಜಸ್ವಿ ನಿವಾಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬರುತ್ತಿರುವುದರಿಂದ ವಿವಿಧ ವ್ಯಾಪಾರಿಗಳು ಸ್ಥಳದಲ್ಲಿ ಬಿಡಾರ ಹೂಡಿದ್ದಾರೆ.
ಐಸ್ ಕ್ರೀಮ್ ಹಾಗೂ ಕಬ್ಬಿನ ಹಾಲು ಮಾರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮೀಪದಲ್ಲಿರುವ ಮೊಬೈಲ್ ಅಂಗಡಿಗಳಲ್ಲಿಯೂ ಕೂಡ ವ್ಯಾಪಾರ-ವಹಿವಾಟು ಜೋರಾಗಿದೆ. ಮತ ಎಣಿಕೆ ಶುರುವಾಗಿ ಸಂಜೆಯಾಗುತ್ತಿದ್ದಂತೆ ವ್ಯಾಪಾರಿಗಳ ಸಂಖ್ಯೆ ಕೂಡ ಇಳಿಮುಖವಾಗಿದೆ.
ಈಗ ಸದ್ಯಕ್ಕೆ ಚುನಾವಣೋತ್ತರ ಸಮೀಕ್ಷೆಯ ಅಂಕಿ-ಅಂಶಗಳು ತಲೆಕೆಳಗಾಗುವಂತೆ ಎನ್ಡಿಎ ಮುನ್ನಡೆಯಲ್ಲಿದ್ದು, ತೇಜಸ್ವಿ ನೇತೃತ್ವದ ಮಹಾಘಟಬಂಧನ್‌ಗೆ ಹಿನ್ನಡೆ ಆಗುವ ಸಾಧ್ಯತೆ ಕಾಣುತ್ತಿದೆ.