ನೀವು ಎಕ್ಸ್ ವೈ ಝಡ್ ಎಟಿಎಂನಿಂದ 25,000 ರೂಪಾಯಿಗಳನ್ನು ವಿತ್ ಡ್ರಾ ಮಾಡಿದ್ದೀರಿ. ನೀವು ಈ ವಹಿವಾಟನ್ನು ಮಾಡಿರದಿದ್ದರೆ, ತಕ್ಷಣ ಈ ಸಂಖ್ಯೆಗೆ ಕರೆ ಮಾಡಿ! ನಾವು ನಿಮ್ಮ ಬ್ಯಾಂಕ್ ಖಾತೆಗೆ ಮೊತ್ತವನ್ನು ಪುನಃ ಕ್ರೆಡಿಟ್ ಮಾಡುತ್ತೇವೆ ಎಂಬ ಸಂದೇಶ ಬರುತ್ತದೆ. ಹಾಗೊಂದು ವೇಳೆ ನೀವು ಆ ನಂಬರಿಗೆ ಕರೆ ಮಾಡಿದರೆ ಹಳ್ಳಕ್ಕೆ ಬೀಳೋದು ಗ್ಯಾರಂಟಿ.
ಇದೊಂದು ಸೈಬರ್ ಕ್ರಿಮಿನಲ್‍ಗಳ ಹೊಸ ವಂಚನೆಯ ಮಾದರಿಯಾಗಿದ್ದು ಇತ್ತೀಚೆಗೆ ಯೂನಿಯನ್ ಬ್ಯಾಂಕಿನೊಂದಿಗೆ ವಿಲೀನವಾದ ಹಳೆಯ ಆಂಧ್ರ ಬ್ಯಾಂಕ್ ಗ್ರಾಹಕರೇ ಇವರ ಮುಖ್ಯ ಟಾರ್ಗೆಟ್ ಆಗಿದ್ದಾರೆ. ಈ ವಂಚಕರು ಗ್ರಾಹಕರಿಗೆ ದಾರಿ ತಪ್ಪಿಸುವ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಇಂತಹ ವಂಚನೆಗೆ ಮರುಳಾದ ಕೆಲವು ಗ್ರಾಹಕರು ಲಕ್ಷಗಟ್ಟಲೆ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದ ನಂತರ ಅವರಿಗೆ ತಾವು ಮೋಸ ಹೋಗಿರುವುದು ಗಮನಕ್ಕೆ ಬರುತ್ತಿದೆ. ಈಗ ಅವರು ಸಹಾಯಕ್ಕಾಗಿ ಸೈಬರ್ ಕ್ರೈಮ್ ಪೋಲಿಸರ ಮೊರೆ ಹೋಗುತ್ತಿದ್ದಾರೆ.
ಗ್ರಾಹಕರ ಡೇಟಾಬೇಸ್ ಅನ್ನು ಹ್ಯಾಕ್ ಮಾಡಿದ ನಂತರ, ಈ ವಂಚಕರು ಎಂತಹ ಸಂದೇಶಗಳನ್ನು ನಿವೃತ್ತ ಅಧಿಕಾರಿಗಳು ಮತ್ತು ಗೃಹಿಣಿಯರಿಗೆ ಕಳುಹಿಸುತ್ತಾರೆಂದರೆ ಈ ಉದ್ದೇಶಿತ ಗುಂಪುಗಳಿಂದ ತ್ವರಿತ ಪ್ರತಿಕ್ರಿಯೆ ನೀಡುವಂತೆ ಇರುತ್ತವೆ ಎಂದು ಪೊಲೀಸರು ಹೇಳುತ್ತಾರೆ. ಹಣವನ್ನು ಡ್ರಾ ಮಾಡಿದ ಬಗ್ಗೆ ಸಂದೇಶವನ್ನು ಸ್ವೀಕರಿಸಿದ ನಂತರ, ಸಂತ್ರಸ್ತರು ಭಯಭೀತರಾಗುತ್ತಾರೆ ಮತ್ತು ವಂಚಕರನ್ನು ಸಂಪರ್ಕಿಸುತ್ತಾರೆ. ಕರೆಯ ಇನ್ನೊಂದು ತುದಿಯಲ್ಲಿರುವ ವಂಚಕರು ನಿರರ್ಗಳವಾಗಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ ಜೊತೆಗೆ ಗ್ರಾಹಕರ ಹೆಸರು ಮತ್ತು ವಿಳಾಸದ ನಿಖರವಾದ ವಿವರಗಳನ್ನು ನೀಡುತ್ತಾರೆ. ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿ ವಾಸಿಸುತ್ತಿರುವ ಮಾಜಿ ಬ್ಯಾಂಕ್ ಅಧಿಕಾರಿಯೊಬ್ಬರು ಈ ರೀತಿ ಮೋಸ ಹೋಗಿದ್ದಾರೆ. ಅವರಿಂದ ಯುಪಿಐ ಸಂಖ್ಯೆಯನ್ನು ಪಡೆದ ನಂತರ, ವಂಚಕರು ಅವರ ಖಾತೆಯಿಂದ 90,000 ರೂಪಾಯಿಗಳನ್ನು ಡ್ರಾ ಮಾಡಿದ್ದಾರೆ.
ಬ್ಯಾಂಕಿನ ಗ್ರಾಹಕರ ನೆಟ್ ಬ್ಯಾಂಕಿಂಗ್ ಕ್ರೆಡೆನ್ಷಿಯಲ್ ವಿವರಗಳನ್ನು ವಂಚಕರು ಹ್ಯಾಕ್ ಮಾಡುತ್ತಿದ್ದಾರೆ. ಅವರು ಪ್ರತಿ ದಿನ ನೂರರಿಂದ ಇನ್ನೂರು ಗ್ರಾಹಕರಿಗೆ ಸಂದೇಶ ಕಳಿಸುತ್ತಿದ್ದು ಈ ಸಂದೇಶಗಳು ಆಂಧ್ರ ಭ್ಯಾಂಕ್ ಕಳಿಸುವ ಬ್ಯಾಂಕಿಂಗ್ ಸಂದೇಶಗಳಂತೆಯೇ ಇರುತ್ತದೆ. ಅವರು ಕಳಿಸುವ ಸಂದೇಶಗಳು ಸಾಮಾನ್ಯವಾಗಿ ಈ ಮಾದರಿಯಲ್ಲಿರುತ್ತವೆ – ನೀವು ಆಂಧ್ರ ಬ್ಯಾಂಕ್ ಎಟಿಎಮ್‍ನಿಂದ 25,000 ಸಾವಿರ ರೂಪಾಯಿಯನ್ನು ವಿತ್ ಡ್ರಾ ಮಾಡಿದ್ದೀರಿ. ಒಂದು ವೇಳೆ ಈ ವಹಿವಾಟನ್ನು ನೀವು ನಡೆಸಿಲ್ಲವಾದರೆ 9298112345 ನಂಬರಿಗೆ ಎಸ್ಸೆಮ್ಮೆಸ್ ಮಾಡಿ. ನಿಮ್ಮ ಕಾರ್ಡನ್ನು ಬ್ಲಾಕ್ ಮಾಡಲು ಕೂಡಲೇ ಬ್ಲಾಕ್ ಮಾಡಲು 18004251515 ನಂಬರಿಗೆ ಈಗಲೇ ಕರೆ ಮಾಡಿ. - ಆಂಧ್ರ ಬ್ಯಾಂಕ್. ಎಂದಿರುತ್ತದೆ. ಗ್ರಾಹಕರು ಕರೆ ಮಾಡಿದಾಗ ವಂಚಕರು ಬ್ಯಾಂಕ್ ಅಧಿಕಾರಿಗಳಂತೆ ನಟಿಸಿ ಹಣವನನ್ನು ಅಕೌಂಟಿಗೆ ಕ್ರೆಡಿಟ್ ಮಾಡುವುದಾಗಿ ಭರವಸೆ ನೀಡುತ್ತಾರೆ. ಅವರು ಆಗ ಗ್ರಾಹಕರ ಫೋನಿಗೆ ಒಂದು ಲಿಂಕ್ ಕಳಿಸಿ ಅದನ್ನು ಕ್ಲಿಕ್ ಮಾಡುವಂತೆ ಕೇಳಿಕೊಳ್ಳುತ್ತಾರೆ.
ಸಂತ್ರಸ್ತರು ಈ ಲಿಂಕ್ ಅನ್ನು ಕ್ಲಿಕ್ ಮಾಡುತ್ತಾರೆ, ಹಾಗೆ ಮಾಡಿದಾಗ ಅವರ ಯುಪಿಐ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ವಿವರಗಳಿಗೆ ಎರಡನೇ ಆಲೋಚನೆಯಿಲ್ಲದೆ ಪ್ರವೇಶವನ್ನು ಕೇಳುತ್ತದೆ. ಈ ಯುಪಿಐ ವಿವರಗಳ ಸಹಾಯದಿಂದ, ವಂಚಕರು ಗ್ರಾಹಕರ ಖಾತೆಗಳಿಂದ ಹಣವನ್ನು ಹಿಂಪಡೆಯುತ್ತಿದ್ದಾರೆ. ಸಂತ್ರಸ್ತರು ತಾವು ವಂಚನೆಗೀಡಾಗಿದ್ದೇವೆಂದು ತಿಳಿಯುವ ಹೊತ್ತಿಗೆ, ಸೈಬರ್ ಅಪರಾಧಿಗಳು ಕರೆಯನ್ನು ಕಡಿತಗೊಳಿಸಿರುತ್ತಾರೆ ಮತ್ತು ಅವರ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿರುತ್ತಾರೆ.