ETV Bharat / bharat

ಹುಲಿಗೆ ರೇಡಿಯೋ ಕಾಲರ್ ಹಾಕಿ ಸುಂದರ್​ಬನ್​​ಗೆ ಬಿಟ್ಟ ಬಂಗಾಳ ಅರಣ್ಯ ಇಲಾಖೆ - ಪಶ್ಚಿಮ ಬಂಗಾಳ ಅರಣ್ಯ ಇಲಾಖೆ

ಪಶ್ಚಿಮ ಬಂಗಾಳ ಅರಣ್ಯ ಇಲಾಖೆ ಗಂಡು ಹುಲಿಗೆ ರೇಡಿಯೋ ಕಾಲರ್ ಹಾಕಿ ಸುಂದರ್‌ಬನ್ ಟೈಗರ್ ರಿಸರ್ವ್​‌ ಫಾರೆಸ್ಟ್​​ಗೆ ಬಿಟ್ಟಿದೆ. 'ಸೇಫ್ ‌ಗಾರ್ಡ್ ಟೈಗರ್' ಅಭಿಯಾನದ ಭಾಗವಾಗಿರುವ ಈ ಉಪಕ್ರಮವು ಹುಲಿಗಳ ನಡವಳಿಕೆ, ಆವಾಸ ಸ್ಥಾನವನ್ನು ಅರ್ಥ ಗುರುತಿಸಲು ಸಹಾಯ ಮಾಡುತ್ತದೆ ಎಂದು ಮುಖ್ಯ ವನ್ಯಜೀವಿ ವಾರ್ಡನ್ ವಿ.ಕೆ.ಯಾದವ್ ಹೇಳಿದ್ದಾರೆ.

Bengal Forest Dept radio collars tiger in Sunderban Tiger Reserve
ಹುಲಿಗೆ ರೇಡಿಯೋ ಕಾಲರ್ ತೊಡಿಸಿ ಸುಂದರ್​ಬನ್ ಗೆ ಬಿಟ್ಟ ಬಂಗಾಳ ಅರಣ್ಯ ಇಲಾಖೆ
author img

By

Published : Dec 28, 2020, 3:52 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳ ಅರಣ್ಯ ಇಲಾಖೆ ಗಂಡು ಹುಲಿಗೆ ರೇಡಿಯೋ ಕಾಲರ್ ಹಾಕಿ ಸುಂದರ್‌ಬನ್ ಟೈಗರ್ ರಿಸರ್ವ್‌ ಫಾರೆಸ್ಟ್​​​ಗೆ ಬಿಟ್ಟಿದೆ ಎಂದು ಅರಣ್ಯದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಸೇಫ್‌ ಗಾರ್ಡ್ ಟೈಗರ್' ಅಭಿಯಾನದ ಭಾಗವಾಗಿರುವ ಈ ಉಪಕ್ರಮವು ಹುಲಿಗಳ ನಡವಳಿಕೆ, ಆವಾಸ ಸ್ಥಾನವನ್ನು ಗುರುತಿಸಲು ಸಹಾಯ ಮಾಡುತ್ತದೆ ಎಂದು ಮುಖ್ಯ ವನ್ಯಜೀವಿ ವಾರ್ಡನ್ ವಿ.ಕೆ.ಯಾದವ್ ಹೇಳಿದ್ದಾರೆ.

"ಡಿಸೆಂಬರ್ 26-27ರ ಅವಧಿಯಲ್ಲಿ ಗಂಡು ಹುಲಿಗೆ ಕಾಲರ್ ರೇಡಿಯೋ ಹಾಕಲಾಗಿದೆ. ಅದರಲ್ಲಿ ರೆಕಾರ್ಡ್​ ಆಗುವ ರೇಡಿಯೋ-ಟೆಲಿಮೆಟ್ರಿ ಮೂಲಕ ಹುಲಿ-ಮಾನವ ಸಂವಹನಗಳನ್ನು ನಿರ್ಣಯಿಸಲು ಹುಲಿಯನ್ನು ಸುಂದರ್‌ಬನ್ ಟೈಗರ್ ರಿಸರ್ವ್‌ನಲ್ಲಿ ಬಿಡಲಾಯಿತು" ಎಂದು ಅವರು ಹೇಳಿದ್ದಾರೆ.

"ಸುಂದರ್‌ಬನ್ ಟೈಗರ್ ರಿಸರ್ವ್‌ನ ಬಶಿರಾತ್ ವ್ಯಾಪ್ತಿಯಲ್ಲಿ ಬರುವ ಹರಿಖಾಲಿ ಬೀಟ್‌ನಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ನಾವು ಇದನ್ನು ಉಪಗ್ರಹ ದತ್ತಾಂಶಗಳ ಮೂಲಕ ಮೇಲ್ವಿಚಾರಣೆ ಮಾಡಲಿದ್ದೇವೆ ಮತ್ತು ಡಬ್ಲ್ಯುಡಬ್ಲ್ಯುಎಫ್(ವಿಶ್ವ ವನ್ಯಜೀವಿ ನಿಧಿ) ಸಹ ಮೇಲ್ವಿಚಾರಣೆಯಲ್ಲಿ ತೊಡಗಿದೆ" ಎಂದು ಯಾದವ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.