ಪಾಟ್ನಾ: ಬಿಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ಸೋಮವಾರ ನಡೆದಿದೆ.
ಪಾಟ್ನಾದ ಮಾಲ್ ಒಂದರ ಪಾರ್ಕಿಂಗ್ ಜಾಗದಲ್ಲಿ ಯುವತಿಯನ್ನು ಅಪಹಹಣ ಮಾಡಲಾಗಿದ್ದು, ಎಸ್.ಕೆ.ಪುರಿ ಪ್ರದೇಶದಲ್ಲಿ ಕೃತ್ಯ ಎಸಗಲಾಗಿದೆ. ಅಷ್ಟೇ ಅಲ್ಲದೆ ಅತ್ಯಾಚಾರದ ದೃಶ್ಯವನ್ನು ವಿಡಿಯೋ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಡುವುದಾಗಿ ಸಂತ್ರಸ್ತ ವಿದ್ಯಾರ್ಥಿನಿಗೆ ಬ್ಲಾಕ್ಮೇಲ್ ಕೂಡ ಮಾಡಲಾಗುತ್ತಿದೆ.
ಆತ್ಯಾಚಾರ ಮಾಡಿದವರಲ್ಲಿ ವಿನಾಯಕ್ ಸಿಂಗ್ ಎಂಬಾತನನ್ನು ಹಾಗೂ ಬ್ಲಾಕ್ಮೇಲ್ ಮಾಡುತ್ತಿರುವ ಸಂದೀಪ್ ಸಿಂಗ್ ಎಂಬ ಆರೋಪಿಯನ್ನು ಯುವತಿ ಗುರುತಿಸಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಗರ್ದಾನಿಬಾಗ್ನ ಮಹಿಳಾ ಪೊಲೀಸ್ ಠಾಣೆಯ ಎಸ್ಹೆಚ್ಒ (ಸ್ಟೇಷನ್ ಹೌಸ್ ಆಫಿಸರ್) ಆರತಿ ಕುಮಾರಿ ಜೈಸ್ವಾಲ್ ತಿಳಿಸಿದ್ದಾರೆ.