ETV Bharat / bharat

ಗ್ರಾಹಕರೇ ಇಲ್ಲದ 'ಬಾಬಾ ಕಾ ಢಾಬಾ' ಮುಂದೆ ದಿಢೀರ್​ ಆಗಿ ಇಷ್ಟೊಂದು ಜನ ಸೇರಿದ್ಯಾಕೆ...!? - Baba Ka Dhaba get support form Bollywood celebrities

ವ್ಯಾಪಾರವಿಲ್ಲದೆ ಕಣ್ಣೀರು ಹಾಕಿದ್ದ ವೃದ್ಧ ದಂಪತಿಗೆ ಇದೀಗ ಸಹಾಯಹಸ್ತ ಹರಿದು ಬಂದಿದ್ದು, ಅವರ ಖುಷಿಗೆ ಪಾರವೇ ಇಲ್ಲದಾಗಿದೆ.

Baba Ka Dhaba
Baba Ka Dhaba
author img

By

Published : Oct 8, 2020, 4:28 PM IST

Updated : Oct 8, 2020, 6:09 PM IST

ನವದೆಹಲಿ: ಅನೇಕ ಸಂದರ್ಭಗಳಲ್ಲಿ ಜನರ ಸಂಕಷ್ಟ ದೇಶದ ಮುಂದೆ ತೆರೆದಿಡಲು ಸಾಮಾಜಿಕ ಜಾಲತಾಣ ಮಹತ್ವದ ಕಾರ್ಯ ನಿರ್ವಹಿಸುತ್ತಿದೆ ಎಂಬುದು ಈ ಹಿಂದಿನಿಂದಲೂ ಸಾಭೀತಾಗಿದೆ. ಸದ್ಯ ಅಂತಹ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ವ್ಯಾಪಾರವಿಲ್ಲದೇ ಕಣ್ಣೀರು ಹಾಕಿದ ವೃದ್ಧ ದಂಪತಿಗೆ ಸಹಾಯ

ಮಹಾಮಾರಿ ಕೊರೊನಾ ವೈರಸ್​ನಿಂದಾಗಿ ವ್ಯಾಪಾರವಿಲ್ಲದೆ ಕಣ್ಣೀರು ಹಾಕಿದ್ದ ವೃದ್ಧ ದಂಪತಿಗೆ ಇದೀಗ ಎಲ್ಲೆಡೆಯಿಂದ ಸಹಾಯಹಸ್ತ ಹರಿದು ಬರುತ್ತಿದೆ. ದೆಹಲಿಯ ಮಾಳ್ವಿಯಾ ನಗರದಲ್ಲಿ 'ಬಾಬಾ ಕಾ ಢಾಬಾ' ಎಂಬ ಹೆಸರಿನಲ್ಲಿ ರಸ್ತೆ ಪಕ್ಕದಲ್ಲಿ ತಳ್ಳುವ ಗಾಡಿಯಲ್ಲಿ ವೃದ್ಧ ದಂಪತಿ ಹೋಟೆಲ್​ ನಡೆಸುತ್ತಿದ್ದರು. ಏಕಾಏಕಿ ಕೊರೊನಾ ಹಾವಳಿ ಹೆಚ್ಚಾದ ಕಾರಣ ಇವರ ಅಂಗಡಿಯತ್ತ ಬರುವ ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಹೀಗಾಗಿ ಅಂಗಡಿ ಸಂಪೂರ್ಣವಾಗಿ ಕೆಲ ತಿಂಗಳ ಕಾಲ ಬಂದ್​ ಮಾಡಿದ್ದ ವೃದ್ಧ ದಂಪತಿ ಇದೀಗ ಲಾಕ್​ಡೌನ್​ ಸಡಿಲಗೊಂಡಿರುವ ಕಾರಣ ಮತ್ತೊಮ್ಮೆ ಅದನ್ನ ರೀ ಓಪನ್ ಮಾಡಿದ್ದಾರೆ.

  • Delhi: People queue up at #BabaKaDhabha in Malviya Nagar after video of the octogenarian owner couple went viral on social media.

    “There was no sale during COVID19 lockdown but now it feels like whole India is with us,” says owner Kanta Prasad, who's running the stall since 1990 pic.twitter.com/Tper7CUVSp

    — ANI (@ANI) October 8, 2020 " class="align-text-top noRightClick twitterSection" data=" ">

ಅಂಗಡಿ ಓಪನ್ ಆಗಿದ್ದರೂ, ಗ್ರಾಹಕರು ಬರದ ಕಾರಣ ತಾವು ತಯಾರಿಸುತ್ತಿರುವ ಆಹಾರ ಮಾರಾಟವಾಗುತ್ತಿಲ್ಲ. ಹಾಗೂ ತಮಗೆ ಆರ್ಥಿಕವಾಗಿ ತೊಂದರೆಯಾಗುತ್ತಿದೆ ಎಂದು ಕಳೆದ ಮೂರು ದಿನಗಳ ಹಿಂದೆ ವೃದ್ಧ ದಂಪತಿ ತಮ್ಮ ಅಳಲು ತೊಡಿಕೊಂಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣ ಸೇರಿ ಎಲ್ಲೆಡೆ ವೈರಲ್ ಆಗಿತ್ತು.

ಅವರ ವಿಡಿಯೋ ವೈರಲ್​ ಆಗುತ್ತಿದ್ದಂತೆ ಬಾಲಿವುಡ್ ಸೆಲೆಬ್ರೆಟಿ, ಕ್ರಿಕೆಟರ್ಸ್​, ಎಎಪಿ ಶಾಸಕ ಹಾಗೂ ಸಾರ್ವಜನಿಕರು ಸಹಾಯಹಸ್ತ ಚಾಚಿದ್ದಾರೆ. ಜತೆಗೆ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಇದೀಗ 'ಬಾಬಾ ಕಾ ಢಾಬಾ' ಕಡೆ ಮುಖ ಮಾಡಿದ್ದಾರೆ. ಇದರಿಂದ ಸಂತೋಷಗೊಂಡಿರುವ ವೃದ್ಧ ದಂಪತಿ ದೇಶವೇ ನಮ್ಮೊಂದಿಗಿದೆ ಎಂದು ಸಂತಸಪಟ್ಟಿದ್ದಾರೆ. 1990ರಿಂದಲೂ ಈ ವೃದ್ಧ ದಂಪತಿ ಈ ಢಾಬಾ ನಡೆಸುತ್ತಿರುವುದು ವಿಶೇಷ.

Last Updated : Oct 8, 2020, 6:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.