ನವದೆಹಲಿ: ಪುಲ್ವಾಮದಲ್ಲಿ ರಕ್ಕಸ ದಾಳಿ ನಡೆದು, 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದು ದೇಶದ ಕರಾಳ ಇತಿಹಾಸ. ಇದೀಗ ಮತ್ತೆ ಪುಲ್ವಾಮದಲ್ಲಿ ನಡೆದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ಇದರ ಬೆನ್ನಲ್ಲೆ, ನಿನ್ನೆ ಅನಂತ್ನಾಗ್ನಲ್ಲಿ ನಡೆದ ಎನ್ಕೌಂಟರ್ ವೇಳೆ ಮೇಜರ್ ಕೇತಾನ್ ಶರ್ಮ ಹುತಾತ್ಮರಾಗಿದ್ದಾರೆ. ಮೀರತ್ನಲ್ಲಿರುವ ಅವರ ಮನೆಯಲ್ಲಿ ಶೋಕ ಮಡುಗಟ್ಟಿದೆ. ಮನೆಗೆ ಆಸರೆಯಾಗಿದ್ದ ಮಗ ಇನ್ನಿಲ್ಲ ಎಂಬುದು ಅವರ ಪೋಷಕರನ್ನು ಅತೀವ ದುಃಖಕ್ಕೀಡುಮಾಡಿದೆ. ಮಗನ ನೆನಪಿನಲ್ಲಿ ಕಣ್ಣೀರಿಡುತ್ತಿರುವ ಕೇತಾನ್ ತಾಯಿ, ಸಿಂಹದಂತಿದ್ದ ನಮ್ಮ ಮಗ ಎಲ್ಲಿ ಹೋದ? ಅವನನ್ನು ಕರೆಯಿಸಿ. ಅವನಿಲ್ಲದೇ ನಾನು ಹೇಗೆ ಬಾಳಲಿ ಎಂದು ಅಳುತ್ತಿರುವ ದೃಶ್ಯಗಳು ಕರುಳು ಹಿಂಡುವಂತಿವೆ. ಸೇನೆಯ ಅಧಿಕಾರಿಗಳು ಪೋಷಕರನ್ನು ಸಮಾಧಾನ ಮಾಡುತ್ತಿರುವ ದೃಶ್ಯಗಳು ಎಲ್ಲೆಡೆ ಹರಿದಾಡುತ್ತಿವೆ.
-
Indian Army: Havildar Amarjeet Kumar (pic 1) & Naik Ajit Kumar Sahoo (pic 2) who were injured in an IED blast at Arihal, Pulwama yesterday, succumbed to their injuries, today. pic.twitter.com/96wWS7tOc3
— ANI (@ANI) June 18, 2019 " class="align-text-top noRightClick twitterSection" data="
">Indian Army: Havildar Amarjeet Kumar (pic 1) & Naik Ajit Kumar Sahoo (pic 2) who were injured in an IED blast at Arihal, Pulwama yesterday, succumbed to their injuries, today. pic.twitter.com/96wWS7tOc3
— ANI (@ANI) June 18, 2019Indian Army: Havildar Amarjeet Kumar (pic 1) & Naik Ajit Kumar Sahoo (pic 2) who were injured in an IED blast at Arihal, Pulwama yesterday, succumbed to their injuries, today. pic.twitter.com/96wWS7tOc3
— ANI (@ANI) June 18, 2019
ನಿನ್ನೆ ಪುಲ್ವಾಮದ ಅರಿಹಾಲ್ ಎಂಬಲ್ಲಿ ಸಾಗುತ್ತಿದ್ದ ಗಸ್ತು ವಾಹನ 44 ಆರ್ಆರ್ ಮೇಲೆ ಉಗ್ರರು ಐಇಡಿ ದಾಳಿ ನಡೆಸಿದ್ದರು. ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರು ಯೋಧರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ, ಇಂದು ಚಿಕಿತ್ಸೆ ಫಲಿಸದೇ ಕಣ್ಮುಚ್ಚಿದ್ದಾರೆ ಎಂದು ಭಾರತೀಯ ಸೇನೆ ಹೇಳಿದೆ. ಹುತಾತ್ಮರಾದ ಯೋಧರು ಹವಿಲ್ದಾರ್ ಅಮರ್ಜೀತ್ ಕುಮಾರ್ ಹಾಗೂ ನಾಯಕ್ ಅಜಿತ್ ಕುಮಾರ್ ಸಾಹೋ ಎಂದು ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ 9 ಯೋಧರು ಗಾಯಗೊಂಡಿದ್ದರು.