ETV Bharat / bharat

ರಾಷ್ಟ್ರೀಯ ಭದ್ರತೆ ಕುರಿತು ವಿದ್ಯಾರ್ಥಿಗಳು ಬರೆದ ಪುಸ್ತಕ ಬಿಡುಗಡೆ ಮಾಡಿದ ಭೂಸೇನಾ ಮುಖ್ಯಸ್ಥ

author img

By

Published : Aug 27, 2020, 5:51 PM IST

'ರಾಷ್ಟ್ರೀಯ ಭದ್ರತಾ ಸವಾಲುಗಳು: ಯುವ ವಿದ್ವಾಂಸರ ದೃಷ್ಟಿಕೋನ' ಎಂಬ ಪುಸ್ತಕವನ್ನು ಭೂಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ಬಿಡುಗಡೆ ಮಾಡಿದರು.

ಎಂ.ಎಂ.ನಾರವಾನೆ
ಎಂ.ಎಂ.ನಾರವಾನೆ

ನವದೆಹಲಿ: ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಬರೆದಿರುವ ‘ರಾಷ್ಟ್ರೀಯ ಭದ್ರತಾ ಸವಾಲುಗಳು: ಯುವ ವಿದ್ವಾಂಸರ ದೃಷ್ಟಿಕೋನ’ ಎಂಬ ಪುಸ್ತಕವನ್ನು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ಬಿಡುಗಡೆ ಮಾಡಿದರು.

ಆಗಸ್ಟ್ 17 ರಂದು ಆರ್ಮಿ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಲ್ಯಾಂಡ್ ವಾರ್ಫೇರ್ ಸ್ಟಡೀಸ್ (ಸಿಎಲ್‌ಎಡಬ್ಲ್ಯುಎಸ್) ಈ ಪುಸ್ತಕವನ್ನು ಪ್ರಕಟಿಸಿದೆ.

ವಿವಿಧ ವಿಶ್ವವಿದ್ಯಾಲಯದ ಪದವಿಪೂರ್ವ ಹಂತದಿಂದ ಹಿಡಿದು ಡಾಕ್ಟರೇಟ್ ಮಾಡುತ್ತಿರುವ ವಿದ್ಯಾರ್ಥಿಗಳು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಈ ಪುಸ್ತಕದಲ್ಲಿ ಬರೆದಿದ್ದಾರೆ. 1971 ರಲ್ಲಿ ನಡೆದ ಇಂಡೋ-ಪಾಕಿಸ್ತಾನ ಯುದ್ಧದಿಂದ ಬಾಂಗ್ಲಾದೇಶ ವಿಮೋಚನೆಗೆ ಕಾರಣರಾದ ಶ್ರೇಷ್ಠ ನಾಯಕ ಫೀಲ್ಡ್ ಮಾರ್ಷಲ್ ಮಾಣೆಕ್‌ ಶಾ ಅವರಿಗೆ ಈ ಪುಸ್ತಕವನ್ನು ಅರ್ಫಿಸಲಾಗಿದೆ.

ದೇಶದ ಐಐಟಿಗಳು, ಐಐಎಂ, ಎನ್‌ಎಲ್‌ಯುಗಳು ಮತ್ತು ಬಿಸಿನೆಸ್ ಶಾಲೆಗಳ ಜೊತೆಗೆ ವಿಶ್ವವಿದ್ಯಾಲಯಗಳಿಗೆ (ಕೇಂದ್ರ, ರಾಜ್ಯ, ಖಾಸಗಿ) ಪುಸ್ತಕದ ಪೂರಕ ಪ್ರತಿಯನ್ನು ಕಳುಹಿಸಲು ಭಾರತೀಯ ಸೇನೆ ಮತ್ತು ಸಿಎಲ್‌ಡಬ್ಲ್ಯೂಎಸ್ ನಿರ್ಧರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.