ಮುಜಾಫರ್ನಗರ( ಉತ್ತರಪ್ರದೇಶ): ನಾಲ್ವರು ಶಸ್ತ್ರಸಜ್ಜಿತ ಮುಸುಕುದಾರಿಗಳು, ಮುಜಾಫರ್ನಗರದ ಆಭರಣ ಮಳಿಗೆಯೊಂದಕ್ಕೆ ದಾಳಿ ಮಾಡಿ, 25 ಕೆಜಿ ಚಿನ್ನಾಭರಣಗಳನ್ನ ದರೋಡೆ ಮಾಡಿ ಪರಾರಿಯಾಗಿದ್ದಾರೆ.

ಭಾನುವಾರ ಸಂಜೆ ಈ ಘಟನೆ ನಡೆದಿದೆ. ನಾಲ್ವರು ಮುಸುಕುದಾರಿಗಳು ಎರಡು ಮೋಟರ್ಸೈಕಲ್ನಲ್ಲಿ ಬಂದು ಸಿನಿಮೀಯ ರೀತಿಯಲ್ಲಿ, ಆಭರಣ ಮಳಿಗೆಗೆ ನುಗ್ಗಿ 25 ಕೆಜಿ ಚಿನ್ನವನ್ನ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಸುಕುದಾರಿಗಳು ಬಂಗಾರದಂಗಡಿ ಮಾಲೀಕ ಬಾಬ್ಲು ಸೈನಿ ಅವರಿಗೆ ಬಂದೂಕನಿಂದ ಬೆದರಿಸಿ, ಚಿನ್ನವನ್ನ ದೋಚಿದ್ದಾರೆ. ಈ ಸಂಬಂಧ ಪೊಲೀಸರು ದೂರು ಸ್ವೀಕರಿಸಿ ಬರುವಷ್ಟರಲ್ಲಿ ಅವರೆಲ್ಲ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.