ETV Bharat / bharat

ಈಗ ಹೇಗಿದ್ದಾರೆ ರಜಿನಿಕಾಂತ್.. ವೈದ್ಯರು ಹೇಳಿದ್ದೇನು..?

ಸೂಪರ್​​ ಸ್ಟಾರ್​​ ರಜಿನಿಕಾಂತ್​ ಆರೋಗ್ಯ ಸ್ಥಿತಿಯ ಕುರಿತು ಅಪೋಲೋ ಆಸ್ಪತ್ರೆ ಮಾಹಿತಿ ನೀಡಿದೆ.

Apollo Hospital releases Medical Bulletin on Rajinikanth Health
ಅಪೋಲೋ ಆಸ್ಪತ್ರೆಯಿಂದ ಮೆಡಿಕಲ್ ಬುಲೆಟಿನ್ ಬಿಡುಗಡೆ
author img

By

Published : Dec 25, 2020, 7:22 PM IST

Updated : Dec 25, 2020, 7:48 PM IST

ಹೈದರಾಬಾದ್ : ಸೂಪರ್​ ಸ್ಟಾರ್​ ರಜಿನಿಕಾಂತ್​ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಇಂದು ಅವರು ಆಸ್ಪತ್ರೆಯಲ್ಲೇ ಇರಲಿದ್ದಾರೆ ಎಂದು ಅಪೊಲೋ ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ಕುರಿತು ಮೆಡಿಕಲ್ ಬುಲೆಟಿನ್ ಬಿಡುಗಡೆ ಮಾಡಿರುವ ಆಸ್ಪತ್ರೆ, ರಜಿನಿಕಾಂತ್ ಮೇಲೆ ತೀವ್ರ ನಿಗಾ ಇಡಲಾಗಿದ್ದು, ರಕ್ತದೊತ್ತಡ ನಿಯಂತ್ರಿಸುವ ಔಷಧಗಳನ್ನು ಎಚ್ಚರಿಕೆಯಿಂದ ನೀಡಲಾಗ್ತಿದೆ. ಇಂದು ರಾತ್ರಿ ಅವರು ಆಸ್ಪತ್ರೆಯಲ್ಲೇ ಇರಲಿದ್ದು, ನಾಳೆ ಹೆಚ್ಚಿನ ತಪಾಸಣೆಗೆ ಒಳಗಾಗಲಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಿದೆ.

ಓದಿ : ನಟ ರಜಿನಿಕಾಂತ್ ಹೈದರಾಬಾದ್ ಅಪೊಲೋ ಆಸ್ಪತ್ರೆಗೆ ದಾಖಲು

ಯಾರಿಗೂ ಅವರನ್ನು ಭೇಟಿಯಾಗಲು ಅವಕಾಶ ನೀಡಲಾಗ್ತಿಲ್ಲ. ಹಾಗಾಗಿ, ಯಾರೂ ಕೂಡ ಆಸ್ಪತ್ರೆಗೆ ಬರಬೇಡಿ. ರಜಿನಿಯೊಂದಿಗೆ ಅವರ ಮಗಳು ಇದ್ದಾರೆ ಎಂದು ವೈದ್ಯರು ಮತ್ತು ಕುಟುಂಬಸ್ಥರು ಮನವಿ ಮಾಡಿದ್ದಾರೆ. ತೆಲಂಗಾಣ ರಾಜ್ಯಪಾಲರು ವೈದ್ಯರನ್ನು ಕರೆಸಿಕೊಂಡು ರಜಿನಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದು, ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

Last Updated : Dec 25, 2020, 7:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.