ಅಮೀನ್ಪುರ (ತೆಲಂಗಾಣ): ಸಂಗಾರೆಡ್ಡಿ ಜಿಲ್ಲೆಯ ಅಮೀನ್ಪುರ ಬಳಿ ಸೇತುವೆ ದಾಟುವಾಗ ಕೊಚ್ಚಿ ಹೋಗಿದ್ದ ಕಾರು 5 ದಿನಗಳ ಬಳಿಕ ಪತ್ತೆಯಾಗಿದ್ದು, ಚಾಲಕ ಮಾತ್ರ ಪತ್ತೆಯಾಗಿಲ್ಲ.
ಭಾರೀ ಮಳೆ ಪರಿಣಾಮ ಕಳೆದ ಮಂಗಳವಾರ ರಾತ್ರಿ ಸಂಗಾರೆಡ್ಡಿ ಜಿಲ್ಲೆಯ ಅಮೀನ್ಪುರ ಬಳಿ ಇರುವ ಸೇತುವೆ ಮೇಲೆ ನೀರು ಹರಿಯುತ್ತಿತ್ತು. ಈ ವೇಳೆ ಕಾರು ರಸ್ತೆ ದಾಟುವಾಗ ಪ್ರವಾಹದ ಸೆಳೆತಕ್ಕೆ ಕೊಚ್ಚಿ ಹೋಗಿತ್ತು. ಕಳೆದ 5 ದಿನಗಳಿಂದ ಹುಡುಕಾಟ ನಡೆಸುತ್ತಿದ್ದ ಎನ್ಡಿಆರ್ಎಫ್ ಮತ್ತು ಮೀನುಗಾರರ ತಂಡ ಇಂದು ಕಾರನ್ನು ಪತ್ತೆ ಹಚ್ಚಿದೆ.
ಸೇತುವೆಯಿಂದ ಅರ್ಧ ಕಿ.ಮೀ ವ್ಯಾಪ್ತಿ ದೂರದಲ್ಲಿ ಕಾರು ಪತ್ತೆಯಾಗಿದೆ. ಜೆಸಿಬಿ ಸಹಾಯದಿಂದ ಕಾರನ್ನು ಹೊರ ತೆಗೆಯಲಾಗಿದ್ದು, ಚಾಲಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.