ಶ್ರೀನಗರ (ಜಮ್ಮು ಕಾಶ್ಮೀರ): ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣದ ನಡುವೆಯೇ ಭಾರತೀಯ ವಾಯುಪಡೆ ದಕ್ಷಿಣ ಕಾಶ್ಮೀರದಲ್ಲಿ ತುರ್ತು ರನ್ವೇ ನಿರ್ಮಿಸಲು ಮುಂದಾಗಿದೆ.
ಮೂರು ಕಿಲೋಮೀಟರ್ ಉದ್ದವಿರುವ ಈ ರನ್ವೇ ಅನಂತ್ನಾಗ್ ಜಿಲ್ಲೆಯ ಬಿಜ್ಬೆಹರಾ ಪ್ರದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿ 44ಕ್ಕೆ ಸಮೀಪದಲ್ಲಿದೆ. ರನ್ವೇ ನಿರ್ಮಿಸುವ ಕಾರ್ಯ ಎರಡು ದಿನಗಳ ಹಿಂದೆ ಆರಂಭಗೊಂಡಿದೆ ಎಂದಿರುವ ಅಧಿಕಾರಿಗಳು ಈ ರನ್ವೇಯನ್ನು ಫೈಟರ್ ಜೆಟ್ಗಳನ್ನು ಇಳಿಸಲು ಬಳಸಿಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅನಂತ್ನಾಗ್ ಜಿಲ್ಲಾಡಳಿತದಿಂದ ರನ್ವೇ ಕಾಮಗಾರಿಗೆ ಕಾರ್ಮಿಕರು ಹಾಗೂ ಟ್ರಕ್ಗಳನ್ನು ನೀಡಲಾಗಿದೆ.