ETV Bharat / bharat

ವೈಬ್ರಂಟ್​ ಗುಜರಾತ್​ ಜಾಹೀರಾತು ಇರುವ ಬೋರ್ಡಿಂಗ್​ ಪಾಸ್​ ​ ರದ್ದುಗೊಳಿಸಿದ ಏರ್​ ಇಂಡಿಯಾ?

ವೈಬ್ರಂಟ್​ ಗುಜರಾತ್​ ಜಾಹೀರಾತುಗಳನ್ನೊಳಗೊಂಡ ಬೋರ್ಡಿಂಗ್ ಪಾಸ್​ ರದ್ದು. ಮಾಜಿ ಪೊಲೀಸ್ ಮಹಾನಿರ್ದೇಶಕರ ದೂರಿನ ನಂತರ ಎಚ್ಚೆತ್ತುಕೊಂಡ ಏರ್​ ಇಂಡಿಯಾ.

author img

By

Published : Mar 25, 2019, 6:02 PM IST

Updated : Mar 25, 2019, 6:07 PM IST

ಏರ್​ ಇಂಡಿಯಾದ ಬೋರ್ಡಿಂಗ್ ಪಾಸ್

ನವದೆಹಲಿ: ವೈಬ್ರಂಟ್​ ಗುಜರಾತ್​ ಜಾಹೀರಾತುಗಳನ್ನೊಳಗೊಂಡ ಬೋರ್ಡಿಂಗ್ ಪಾಸ್​ಗಳನ್ನು ರದ್ದುಗೊಳಿಸಲು ಸರ್ಕಾರಿ ಮಾಲಿಕತ್ವದ ಏರ್​ ಇಂಡಿಯಾ ತೀರ್ಮಾನಿಸಿದೆ.

ಏರ್​ ಇಂಡಿಯಾ ವಿಮಾನ ಸಂಸ್ಥೆಯು ಮಾದರಿ ನೀತಿ ಸಂಹಿತೆ ಜಾರಿ ನಂತರವೂ ಪ್ರಧಾನಿ ನರೇಂದ್ರ ಮೋದಿ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ವೈಬ್ರಂಟ್ ಗುಜರಾತ್ ಅಭಿಯಾನದ ಜಾಹೀರಾತುಗಳನ್ನೊಳಗೊಂಡ ಬೋರ್ಡಿಂಗ್ ಪಾಸ್​ಗಳನ್ನು ಸ್ವೀಕರಿಸುತ್ತಿದೆ ಎಂದು ಮಾಜಿ ಪೊಲೀಸ್ ಮಹಾನಿರ್ದೇಶಕ ಶಶಿ ಕಾಂತ್​ ದೂರು ನೀಡಿದ್ದರು. ಅಲ್ಲದೇ "ನಾವೇಕೆ ಹೀಗೆ ಇವುಗಳ ಮೇಲೆ ಸಾರ್ವಜನಿಕ ಹಣವನ್ನು ವ್ಯಯ ಮಾಡುತ್ತಿದ್ದೇವೆ ಎಂದು ಆಶ್ಚರ್ಯವಾಗುತ್ತಿದೆ" ಎಂದು ಶಶಿ ಕಾಂತ್ ತಮ್ಮ ಟ್ವಟರ್​ನಲ್ಲಿ ಹೇಳಿದ್ದರು.

ಜನವರಿಯಲ್ಲಿ ನಡೆದ ವೈಬ್ರಂಟ್​ ಗುಜರಾತ್ ಶೃಂಗಸಭೆಯಲ್ಲಿ ಈ ಬೋರ್ಡಿಂಗ್ ಪಾಸ್​ಗಳನ್ನು ಮುದ್ರಿಸಲಾಗಿತ್ತು. ಇದೀಗ ಎಚ್ಚೆತ್ತುಕೊಂಡ ಏರ್​ ಇಂಡಿಯಾ, ವೈಬ್ರಂಟ್​ ಗುಜರಾತ್​ ಜಾಹೀರಾತುಗಳನ್ನೊಳಗೊಂಡ ಬೋರ್ಡಿಂಗ್ ಪಾಸ್​ಗಳನ್ನು ರದ್ದುಗೊಳಿಸಿದೆ.

Intro:Body:

2 Air_India_2.jpg   

close

Conclusion:
Last Updated : Mar 25, 2019, 6:07 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.