ETV Bharat / bharat

ಕೋಯಿಕ್ಕೋಡ್‌ ವಿಮಾನ ದುರಂತ: ಕಂದ ಬರುವ ಮುನ್ನವೇ ಕಣ್ಮುಚ್ಚಿದ ತಂದೆ - ಫ್ಲೈಟ್ ಐಎಕ್ಸ್ -1344

ಗೋವಿಂದ್ ನಗರದ ಪೊಥುರಾ ಕುಂಡ್ ನಿವಾಸಿ ಅಖಿಲೇಶ್ ಅವರ ಪತ್ನಿ ಮೇಘಾ ತುಂಬು ಗರ್ಭಿಣಿಯಾಗಿದ್ದು, ಕೆಲವೇ ದಿನಗಳಲ್ಲಿ ಪುಟ್ಟ ಕಂದಮ್ಮನಿಗೆ ಜನ್ಮ ನೀಡುತ್ತಿದ್ದರು.

ಫ್ಲೈಟ್ ಐಎಕ್ಸ್ -1344 ರ ಸಹ ಪೈಲಟ್ ಅಖಿಲೇಶ್ ಕುಮಾರ್

author img

By

Published : Aug 8, 2020, 5:27 PM IST

ಮಥುರಾ: ಫ್ಲೈಟ್ ಐಎಕ್ಸ್ -1344 ರ ಸಹ ಪೈಲಟ್ ಅಖಿಲೇಶ್ ಕುಮಾರ್ ಅವರು 2017 ರಲ್ಲಿ ಏರ್ ಇಂಡಿಯಾದಲ್ಲಿ ತಮ್ಮ ವೃತ್ತಿ ಆರಂಭಿಸಿದರು. ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಹವಾಮಾನ ವೈಪರಿತ್ಯದಿಂದ ವಿಮಾನ ಅಪಘಾತಕ್ಕೀಡಾದಾಗ ಮೃತಪಟ್ಟ 19 ಜನರಲ್ಲಿ ಇವರು ಒಬ್ಬರು.

ಸಂಬಂಧಿ ವಾಸುದೇವ ಹೇಳಿಕೆ

ಕುಮಾರ್ ಮಥುರಾ ಮೂಲದವರು ಮತ್ತು ಅವರು 2017 ರಲ್ಲಿ ಮೇಘಾ ಅವರೊಂದಿಗೆ ವಿವಾಹವಾಗಿದ್ದರು. ಲಾಕ್​ಡೌನ್ ವಿಧಿಸುವ ಮೊದಲು ಅವರು ಒಮ್ಮೆ ತಮ್ಮೂರಿಗೆ ಭೇಟಿ ನೀಡಿದ್ದರು. ಕುಮಾರ್ ಅವರ ಹಠಾತ್ ಮತ್ತು ಅನಿರೀಕ್ಷಿತ ನಿಧನದ ಸುದ್ದಿ ಕುಟುಂಬಕ್ಕೆ ಆಘಾತ ತಂದಿದೆ.

ಗೋವಿಂದ್ ನಗರದ ಪೊಥುರಾ ಕುಂಡ್ ನಿವಾಸಿ ಅಖಿಲೇಶ್ ಅವರ ಪತ್ನಿ ಮೇಘಾ ತುಂಬು ಗರ್ಭಿಣಿಯಾಗಿದ್ದು, ಕೆಲವೇ ದಿನಗಳಲ್ಲಿ ಪುಟ್ಟ ಕಂದಮ್ಮನಿಗೆ ಜನ್ಮ ನೀಡುತ್ತಿದ್ದರು. ಇನ್ನು ಕೆಅಕ್ಕ ಮತ್ತು ಇಬ್ಬರು ಕಿರಿಯ ಸಹೋದರರು ಇದ್ದಾರೆ. ಅವರ ಮೃತದೇಹ ಶನಿವಾರ ಮಥುರಾ ತಲುಪುವ ನಿರೀಕ್ಷೆಯಿದ್ದು, ಅವರ ಇಬ್ಬರು ಕುಟುಂಬ ಸದಸ್ಯರು ಕೇರಳಕ್ಕೆ ತೆರಳಿದ್ದಾರೆ ಎಂದು ಅವರ ಸಂಬಂಧಿ ವಾಸುದೇವ ತಿಳಿಸಿದ್ದಾರೆ.

"ಮೃತ ಸಹ ಪೈಲಟ್ ಅಖಿಲೇಶ್ ಕುಮಾರ್ ಅವರ ಕುಟುಂಬವನ್ನು ಈಗಾಗಲೇ ದೆಹಲಿಯಿಂದ ಕೋಯಿಕ್ಕೋಡ್‌ಗೆ ಕರೆದೊಯ್ಯಲಾಗಿದೆ" ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.