ETV Bharat / bharat

ವಿಶೇಷ ಅಂಕಣ: ಎಫ್‌ಪಿಒಗಳ ಬಲಪಡಿಸಲು ಕೃಷಿ ಮೂಲಸೌಕರ್ಯ ನಿಧಿ..! - Agriculture Infrastructure Fund

ಎಐಎಫ್‌ನ ಮುಖ್ಯ ಉದ್ದೇಶವು ಕಟಾವಿನ ನಂತರ ದವಸ ಧಾನ್ಯಗಳನ್ನು ಸಂಗ್ರಹಿಸಲು ಮೂಲಸೌಲಭ್ಯವನ್ನು ಒದಗಿಸುವುದಾಗಿದೆ. ಕೃಷಿ ಪೂರೈಕೆ ವಲಯದಲ್ಲಿ ಇದು ಅತ್ಯಂತ ಅಗತ್ಯದ ಮತ್ತು ಹೆಚ್ಚಿನ ಕೊರತೆ ಇರುವ ಸೌಲಭ್ಯವಾಗಿದೆ.

Agriculture Infrastructure Fund to Strengthen FPOs
ಎಫ್‌ಪಿಒಗಳ ಬಲಪಡಿಸಲು ಕೃಷಿ ಮೂಲಸೌಕರ್ಯ ನಿಧಿ
author img

By

Published : Sep 2, 2020, 7:23 PM IST

ಹೈದರಾಬಾದ್: ಕಟಾವು ನಂತರದಲ್ಲಿ ಶೇಖರಣೆ ಮತ್ತು ಸಂಸ್ಕರಣೆ ಘಟಕಗಳನ್ನು ನಿರ್ಮಿಸುವುದಕ್ಕಾಗಿ 1 ಲಕ್ಷ ಕೋಟಿ ರೂ. ಕೃಷಿ ಮೂಲಸೌಕರ್ಯ ನಿಧಿಯನ್ನು (ಎಐಎಫ್‌) ಪ್ರಧಾನಿ ನರೇಂದ್ರ ಮೋದಿ 2020 ಆಗಸ್ಟ್ 9 ರಂದು ಘೋಷಿಸಿದ್ದರು. ಈ ಘಟಕಗಳನ್ನು ಕೃಷಿ ಉತ್ಪಾದಕರ ಸಂಘಟನೆಗಳಲ್ಲಿ (ಎಫ್‌ಪಿಒ) ಸ್ಥಾಪಿಸಲು ಉದ್ದೇಶಿಸಲಾಗಿದೆ. ಎಫ್‌ಪಿಒಗಳು ಮತ್ತು ಇತರ ಉದ್ಯಮಶೀಲರಿಗೆ ಪ್ರಾಥಮಿಕ ಕೃಷಿ ಸಾಲ ಸಮಾಜಗಳ ಮೂಲಕ (ಪಿಎಸಿ) ರಿಯಾಯಿತಿ ದರದಲ್ಲಿ ಸಾಲ ಒದಗಿಸಲೂ ಈ ನಿಧಿಯನ್ನು ಬಳಸಬಹುದಾಗಿದೆ. ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜೊತೆಗೆ ನಬಾರ್ಡ್ ಈ ಉಪಕ್ರಮಕ್ಕೆ ಬೆಂಬಲ ನೀಡಲಿದೆ.

ಕಟಾವು ನಂತರದ ನಿರ್ವಹಣೆಗಾಗಿ ಶೇ. 3 ರ ರಿಯಾಯಿತಿಯಲ್ಲಿ ಟರ್ಮ್ ಲೋನ್‌ಗಳನ್ನು ನೀಡಿ ಕೇಂದ್ರ ಸರ್ಕಾರ ಈ ವೆಚ್ಚವನ್ನು ಭರಿಸುತ್ತದೆ. ಒಂದು ಸಾಲಗಾರರು ಸುಸ್ತಿದಾರರಾದರೆ 2 ಕೋಟಿ ರೂ.ವರೆಗಿನ ಸಾಲಗಳಿಗೆ ಗ್ಯಾರಂಟಿಯನ್ನೂ ಕೇಂದ್ರ ಸರ್ಕಾರವು ಬ್ಯಾಂಕ್‌ಗಳಿಗೆ ನೀಡುತ್ತದೆ. 2 ಕೋಟಿ ರೂ.ವರೆಗಿನ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಮೂಲಕ ಇದನ್ನು ಸಾಧಿಸಲಾಗುತ್ತದೆ. ಈ ಗ್ಯಾರಂಟಿಗೆ ಸರ್ಕಾರ ಶುಲ್ಕ ಪಾವತಿ ಮಾಡುತ್ತದೆ.

ಎಐಎಫ್‌ನ ಮುಖ್ಯ ಉದ್ದೇಶವು ಕಟಾವಿನ ನಂತರ ದವಸ ಧಾನ್ಯಗಳನ್ನು ಸಂಗ್ರಹಿಸಲು ಮೂಲಸೌಲಭ್ಯವನ್ನು ಒದಗಿಸುವುದಾಗಿದೆ. ಕೃಷಿ ಪೂರೈಕೆ ವಲಯದಲ್ಲಿ ಇದು ಅತ್ಯಂತ ಅಗತ್ಯದ ಮತ್ತು ಹೆಚ್ಚಿನ ಕೊರತೆ ಇರುವ ಸೌಲಭ್ಯವಾಗಿದೆ. ಹೀಗಾಗಿ, ಗೋದಾಮುಗಳು, ಸಿಲೋಸ್‌, ಪ್ಯಾಕ್ ಹೌಸ್‌ಗಳು, ಆಯೋಜಿಸುವುದು ಮತ್ತು ಗ್ರೇಡ್ ಮಾಡುವ ಘಟಕಗಳು, ಕೋಲ್ಡ್‌ ಚೈನ್‌ ಪ್ರಾಜೆಕ್ಟ್‌ಗಳು, ಹಣ್ಣು ಮಾಡುವ ಚೇಂಬರ್‌ಗಳು, ಇ-ಮಾರ್ಕೆಟಿಂಗ್ ಪ್ಲಾಟ್‌ಫಾರಂಗಳು ಇತ್ಯಾದಿಗೆ ಶೇ. 3 ರ ಬಡ್ಡಿ ರಿಯಾಯಿತಿ ಲಭ್ಯವಿರುತ್ತದೆ.

ಕೃಷಿ ಮಾರುಕಟ್ಟೆಯಲ್ಲಿ ಉತ್ತೇಜನ ನೀಡುವುದಕ್ಕಾಗಿ ಈ ನಿಧಿ ಅತ್ಯಂತ ಪ್ರಮುಖವಾದದ್ದಾಗಿದೆ. ಈ ಹಿಂದೆ ಕೇಂದ್ರ ಸರ್ಕಾರವು ಕೃಷಿ ಮಾರುಕಟ್ಟೆಗಳಿಗೆ ಸಂಬಂಧಿಸಿದಂತೆ ಮೂರು ಸುಗ್ರೀವಾಜ್ಞೆಗಳನ್ನು ಹೊರಡಿಸಿದೆ. ಇವು ಒಂದಷ್ಟು ಮಟ್ಟಿನ ಉದಾರೀಕರಣವನ್ನು ಈ ವಲಯಕ್ಕೆ ಒದಗಿಸಿವೆ. ಅಗತ್ಯ ಸಾಮಗ್ರಿಗಳ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗಿದ್ದು, ಎಪಿಎಂಸಿ ಮಂಡಿಗಳ ಹೊರಗೂ ತಮ್ಮ ಉತ್ಪನ್ನಗಳನ್ನು ರೈತರು ಮಾರಬಹುದಾಗಿದೆ. ಅಲ್ಲದೆ, ಸಂಸ್ಕರಣೆ ಮಾಡುವವರು, ರಫ್ತು ಮಾಡುವವರು ಮತ್ತು ಚಿಲ್ಲರೆ ಮಾರಾಟಗಾರರ ಜೊತೆಗೆ ರೈತರು ಒಪ್ಪಂದ ಮಾಡಿಕೊಳ್ಳಲು ಇದು ಅವಕಾಶ ನೀಡಿದೆ.

ಕಾನೂನು ಬದಲಾವಣೆ ಮಾಡುವುದು ಅಗತ್ಯದ್ದಾದರೂ, ಅದಷ್ಟೇ ಸಾಲದು. ಕಾನೂನು ಬದಲಾವಣೆ ಮಾಡಿದಷ್ಟೇ ಪ್ರಮುಖವಾದ ಕೆಲಸ ಮೂಲಸೌರ್ಯದಲ್ಲಿ ಮಾಡುವುದೂ ಅಗತ್ಯದ್ದಾಗಿದೆ. ಈ ಅಂತರವನ್ನು ಪೂರೈಸಲು ಎಐಎಫ್‌ ನೆರವಾಗುತ್ತದೆ. ಇದರ ಪರಿಣಾಮ ಕಾಲಾನಂತರದಲ್ಲಿ ಕಾಣಿಸಿಕೊಳ್ಳುತ್ತದೆ. ರಾಜ್ಯಗಳು, ಎಫ್‌ಪಿಒಗಳು ಮತ್ತು ಉದ್ಯಮಶೀಲರು ಕೇಂದ್ರ ಸರ್ಕಾರದ ಈ ಸುಧಾರಣೆ ಕ್ರಮಗಳನ್ನು ಎಷ್ಟು ಬೇಗ ಮತ್ತು ಸರಿಯಾಗಿ ಬಳಸಿಕೊಳ್ಳುತ್ತಾರೆ ಎಂಬುದನ್ನು ಆಧರಿಸಿ ಇದರ ಪರಿಣಾಮ ಕಾಣಿಸಿಕೊಳ್ಳುತ್ತದೆ.

ನಬಾರ್ಡ್ ಕೂಡ 10 ಸಾವಿರ ಎಫ್‌ಪಿಒಗಳನ್ನು ರಚಿಸಲು ಜವಾಬ್ದಾರನಾಗಿರುವುದರಿಂದ, ಇದು ಉತ್ತಮವಾದ ಪ್ಯಾಕೇಜ್ ಅನ್ನು ರೂಪಿಸಬೇಕಾಗಿದೆ. ಇದರಲ್ಲಿ ಕೆಲವು ಕೊಂಡಿಗಳು ಕಳಚಿದ್ದನ್ನು ನಾವು ನೋಡಬಹುದು. ಹೆಚ್ಚಿನ ಸಂಖ್ಯೆಯ ಮತ್ತು ಉತ್ತಮವಾದ ಶೇಖರಣಾ ಸೌಲಭ್ಯಗಳು ರೈತರಿಗೆ ಸಹಾಯವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಸಣ್ಣ ರೈತರು ದೀರ್ಘಕಾಲದವರೆಗೆ ತಮ್ಮ ದವಸ ಧಾನ್ಯಗಳನ್ನು ಸಂಗ್ರಹಿಸಿಟ್ಟುಕೊಳ್ಳಲಾರರು. ಯಾಕೆಂದರೆ, ಅವರ ವೆಚ್ಚಗಳನ್ನು ನಿರ್ವಹಿಸಲು ಹಣದ ಅಗತ್ಯ ಅವರಿಗೆ ಇರುತ್ತದೆ. ಭಾರತದಲ್ಲಿ 126 ಮಿಲಿಯನ್‌ ಮಧ್ಯಮ ಮತ್ತು ಸಣ್ಣ ರೈತರು 74 ಮಿಲಿಯನ್ ಹೆಕ್ಟೇರ್ ಕೃಷಿ ಭೂಮಿಯನ್ನು ಹೊಮದಿದ್ದಾರೆ. ಸರಾಸರಿ 0.58 ಹೆಕ್ಟೇರ್‌ ಭೂಮಿಯನ್ನು ಇವರು ಹೊಂದಿದ್ದಾರೆ. ಭೂಮಿಯ ಪ್ರಮಾಣದಲ್ಲಿ ಸಣ್ಣ ಹಿಡುವಳಿದಾರರಾಗಿರುವುದರಿಂದ, ಮಾರುಕಟ್ಟೆ ಮತ್ತು ಹಣಕಾಸಿನ ವ್ಯವಸ್ಥೆ ಇವರಿಗೆ ಸೂಕ್ತವಾಗಿ ಲಭ್ಯವಾಗುವುದಿಲ್ಲ.

ಎಫ್‌ಪಿಒ ಮಟ್ಟದಲ್ಲಿ ಶೇಖರಣೆ ಸೌಲಭ್ಯದ ಮೌಲ್ಯವನ್ನು ಗಮನಾರ್ಹ ಪ್ರಮಾಣದಲ್ಲಿ ಏರಿಕೆ ಮಾಡಬಹುದು. ಎಫ್‌ಪಿಒಗಳು ರೈತರಿಗೆ ಮುಂಗಡ ನೀಡಬಹುದು. ಉದಾಹರಣೆಗೆ, ಪ್ರಸ್ತುತ ಮಾರುಕಟ್ಟೆ ದರದಲ್ಲಿ ಉತ್ಪನ್ನಗಳ ಮೌಲ್ಯದ ಮೇಲೆ ಶೇ. 75-80 ರಷ್ಟನ್ನು ಅವರು ಒದಗಿಸಬಹುದಾಗಿದೆ. ಆದರೆ, ಎಫ್‌ಪಿಒಗಳು ರೈತರಿಗೆ ಮುಂಗಡ ನೀಡಲು ಭಾರಿ ಪ್ರಮಾಣದ ಬಂಡವಾಳವನ್ನು ಹೊಂದಿರಬೇಕಾಗುತ್ತದೆ. ಎಫ್‌ಪಿಒಗಳಿಗೆ 4 ರಿಂದ 7 ಶೇ. ದರದಲ್ಲಿ ಕಾರ್ಯನಿರ್ವಹಣೆ ಬಂಡವಾಳ ಒದಗಿಸುವ ಭರವಸೆಯನ್ನು ನಬಾರ್ಡ್ ನೀಡದಿದ್ದರೆ, ಕೇವಲ ಸೌಲಭ್ಯವನ್ನು ನಿರ್ಮಾಣ ಮಾಡಿದರೆ ಸಾಲುವುದಿಲ್ಲ. ಸದ್ಯ, ವಾರ್ಷಿಕ ಶೇ. 18-22 ದರದಲ್ಲಿ ಸಣ್ಣ ಹಣಕಾಸು ಸಂಸ್ಥೆಗಳು ಕಾರ್ಯನಿರ್ವಹಣೆ ಬಂಡವಾಳಕ್ಕಾಗಿ ಸಾಲವನ್ನು ನೀಡುತ್ತಿವೆ. ಇವುಗಳನ್ನು ಬಹುತೇಕ ಎಫ್‌ಪಿಒಗಳು ಪಡೆಯುತ್ತಿವೆ. ಇಂತಹ ದರದಲ್ಲಿ, ಧಾನ್ಯವನ್ನು ಸಂಗ್ರಹಿಸುವುದು ಸೂಕ್ತವಲ್ಲ. ಕಟಾವು ಸಮಯಕ್ಕೆ ಹೋಲಿಸಿದರೆ ಬೇರೆ ಕಾಲದಲ್ಲಿ ಬೆಲೆ ಗಮನಾರ್ಹವಾಗಿ ಹೆಚ್ಚಳವಾದಲ್ಲಿ ಮಾತ್ರ ಈ ಬಡ್ಡಿ ದರದಲ್ಲಿ ಸಾಲ ಪಡೆದು ಎಫ್‌ಪಿಒಗಳು ಕಾರ್ಯನಿರ್ವಹಣೆ ಬಂಡವಾಳವನ್ನು ನಿರ್ವಹಿಸಬಹುದು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಸಚಿವಾಲಯವು 2020 ಆಗಸ್ಟ್ 17 ರಂದು ಫಾರ್ಮ್‌ನಿಂದ ಅಡುಗೆ ಮನೆಯವರೆಗೆ ಉತ್ಪನ್ನವನ್ನು ಸಾಗಿಸುವ ಆನ್‌ಲೈನ್ ಸೌಲಭ್ಯ VedKrishi.com ಅನ್ನು ನಾಗ್ಪುರ ಮೂಲದ ಎಫ್‌ಪಿಒ ನೆರವಿನಲ್ಲಿ ಸ್ಥಾಪಿಸಿದೆ. ಇದು ಹಾಲು ಉತ್ಪನ್ನಗಳು, ತರಕಾರಿ, ಧಾನ್ಯ ಮತ್ತು ಬೇಲೆ ಕಾಳುಗಳು, ಉಪ್ಪಿನಕಾಯಿ, ಜ್ಯೂಸ್, ಸಾಸ್‌ ಇತ್ಯಾದಿಯನ್ನು ಮನೆಗೆ ಡೆಲಿವರಿ ಮಾಡುತ್ತದೆ. ಎಫ್‌ಪಿಒಗಳು ನೇರವಾಗಿ ರೈತರನ್ನು ಮತ್ತು ಗ್ರಾಹಕರನ್ನು ಈ ಪ್ಲಾಟ್‌ಫಾರಂ ಮೂಲಕ ಸಂಪರ್ಕಿಸುತ್ತವೆ. ಒಂದು ವರ್ಷ ಮೊದಲೇ ನೋಂದಾಯಿತ ಗ್ರಾಹಕರು ಇದರಲ್ಲಿ ಆರ್ಡರ್‌ ಮಾಡಬಹುದಾಗಿದೆ. ಸಾವಯವ ಕೃಷಿ ಪ್ರಯೋಗ ಮಾಡುತ್ತಿರುವ ಇತರ ರೈತರೊಂದಿಗೆ ಸಲಹೆಯನ್ನೂ ಇವು ಒದಗಿಸುತ್ತವೆ.

ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಹಕರು ತಾವು ಖರೀದಿಸುತ್ತಿರುವ ರೈತರಿಂದ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ತಿಳಿಯಲು ಸಹಾಯವಾಗುತ್ತದೆ. ಗೊಬ್ಬರ, ಜೈವಿಕ ರಸಗೊಬ್ಬರ, ಕೀಟ ನಿಯಂತ್ರಣ ಪರಿಹಾರಗಳು ಇತ್ಯಾದಿ ಕೃಷಿ ಸಾಮಗ್ರಿಯನ್ನು ಎಫ್‌ಪಿಒ ಒದಗಿಸಲಿದೆ. ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಒಣಗಿಸಲು ಸೌರ ಡ್ರೈಯರ್‌ಗಳನ್ನೂ ಇದು ಒದಗಿಸಲಿದೆ. ಇದನ್ನು ಕೈಗೆಟಕುವ ದರದಲ್ಲಿ ರೈತರು ಪಡೆಯಬಹುದಾಗಿದೆ. ವೆಚ್ಚ ಕಡಿಮೆ ಮಾಡುವಿಕೆ, ಉತ್ಪನ್ನ ಗುಣಮಟ್ಟ ಸುಧಾರಣೆ ಮತ್ತು ರೈತರಿಗೆ ನೆರವು ಮತ್ತು ಮಾರ್ಗದರ್ಶನ ನೀಡುವ ಮೂಲಕ ವಿಜ್ಞಾನ ಮತ್ತು ಆರ್ಥಿಕತೆಯನ್ನು ಒಟ್ಟಾಗಿಸಿದ ವಿಶಿಷ್ಟ ಉದಾಹರಣೆ ಇದಾಗಿದೆ.

ಗೋದಾಮು ವ್ಯವಸ್ಥೆಯನ್ನು ಬಳಸುವುದಕ್ಕೆ ಎಫ್‌ಪಿಒಗಳಿಗೆ ನಬಾರ್ಡ್‌ ಕಡ್ಡಾಯವಾಗಿ ತರಬೇತಿಯನ್ನು ಒದಗಿಸಬೇಕು ಮತ್ತು ಮಾರ್ಕೆಟ್ ರಿಸ್ಕ್‌ಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅನುವು ಮಾಡಬೇಕು.

ಎರಡನೆಯದಾಗಿ, ಸಗಟು ಮಾರುಕಟ್ಟೆಯಲ್ಲಿ ಸಕ್ರಿಯವಾಗಿರುವ ಸರ್ಕಾರಿ ಸಂಸ್ಥೆಗಳಾದ ಫುಡ್ ಕಾರ್ಪೊರೇಶನ್ ಆಫ್‌ ಇಂಡಿಯಾ (ಎಫ್‌ಸಿಐ), ನ್ಯಾಷನಲ್ ಅಗ್ರಿಕಲ್ಚರಲ್‌ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ (ನಫೇದ್), ರಾಜ್ಯ ಟ್ರೇಡಿಂಗ್ ಕೋಆಪರೇಶನ್ (ಎಸ್‌ಟಿಸಿ) ಕೃಷಿ ಉತ್ಪನ್ನ ನಿರ್ವಹಣೆಯಲ್ಲಿ ತಮ್ಮ ಪಾಲನ್ನು ಹೆಚ್ಚಿಸಿಕೊಳ್ಳಬೇಕಿದೆ. ಈ ವಿಧಾನವನ್ನೇ ಬಳಸಿ ಚೀನಾ ತನ್ನ ಕೃಷಿ ಉತ್ಪನ್ನ ನಿರ್ವಹಣೆ ಮಾಡಿದೆ.

ಮೂರನೆಯದಾಗಿ, ಎಫ್‌ಪಿಒಗಳು ಮತ್ತು ಟ್ರೇಡರ್‌ಗಳಿಗೆ ಸಾಲವನ್ನು ನೀಡುವ ಬ್ಯಾಂಕ್‌ಗಳೂ ಕೂಡ ಸಗಟು ಫ್ಯೂಚರ್‌ಗಳಲ್ಲಿ ಭಾಗವಹಿಸಬೇಕು. ಕೃಷಿ ಮಾರುಕಟ್ಟೆಯ ಆರೋಗ್ಯಕರ ಬೆಳವಣಿಗೆಗೆ ಇವು ಮರು ವಿಮೆದಾರ ಪಾತ್ರ ವಹಿಸಬೇಕು.

ಅಂತಿಮವಾಗಿ, ಸರ್ಕಾರಿ ನೀತಿಗಳು ಸ್ಥಿರ ಮತ್ತು ಮಾರುಕಟ್ಟೆ ಸ್ನೇಹಿಯಾಗಿರಬೇಕು. ಈ ಹಿಂದೆ ಸರ್ಕಾರದ ನೀತಿಗಳು ತುಂಬಾ ನಿರ್ಬಂಧವನ್ನು ಹೇರಿದ್ದವು ಮತ್ತು ಅನಿಶ್ಚಿತವೂ ಆಗಿದ್ದವು. ಕೃಷಿ ಬೆಲೆ ಏರಿಕೆಯಾದರೆ ಕೃಷಿ ಫ್ಯೂಚರ್‌ಗಳನ್ನು ನಿಷೇಧಿಸಲಾಗುತ್ತಿತ್ತು. ಬಹುತೇಕ ಭಾರತೀಯ ನೀತಿ ನಿರೂಪಕರು ಕೃಷಿ ಫ್ಯೂಚರ್‌ ಮಾರ್ಕೆಟ್‌ ಒಂದು ದಲ್ಲಾಳಿಗಳ ಕೂಪ ಎಂದೇ ಭಾವಿಸಿದ್ದಾರೆ. ಯಾವುದೇ ಬೆಲೆ ಏರಿಕೆ ಅಥವಾ ಇಳಿಕೆಯಾದರೂ ಇವರ ಮೇಲೆ ಆರೋಪ ಹೊರಿಸಲಾಗುತ್ತಿತ್ತು. ಬೆಲೆಯ ರಹಸ್ಯವನ್ನು ಕಂಡುಕೊಳ್ಳಲು ಇವು ಪ್ರಮುಖ ಸಂಗತಿಗಳು ಎಂಬುದನ್ನು ನೀತಿ ನಿರೂಪಕರು ಇಂದಿಗೂ ಕಂಡುಕೊಂಡಿಲ್ಲ. ಮೇಲ್ಮಟ್ಟದಲ್ಲಿ ಕೃಷಿ ಫ್ಯೂಚರ್‌ಗಳನ್ನು ನಿಷೇಧಿಸಿದರೆ, ಬೆಲೆಯ ಬದಲಾವಣೆಯನ್ನೇ ನಿಲ್ಲಿಸಿಬಿಡುತ್ತವೆ. ಹೀಗಾಗಿ ಇಂತಹ ಕ್ರಮಗಳ ಬಹುತೇಕ ಸಮಯದಲ್ಲಿ ಕತ್ತಲಲ್ಲಿ ಕಲ್ಲೆಸೆದಂತಿರುತ್ತವೆ. ಕೆಲವು ಬಾರಿ, ತಮ್ಮ ಕಾಲಬುಡಕ್ಕೇ ಈ ನೀತಿಗಳು ಗುಂಡು ಹೊಡೆದುಕೊಂಡಿರುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತವು ಕೃಷಿ ಮಾರುಕಟ್ಟೆ ವ್ಯಾಪ್ತಿಯನ್ನು ಹೆಚ್ಚಿಸುವುದಷ್ಟೇ ಅಲ್ಲ, ತಾತ್ಕಾಲಿಕವಾಗಿ ಇಡೀ ಮಾರುಕಟ್ಟೆಯನ್ನು ಒಟ್ಟಾಗಿಸಬೇಕಿದೆ. ಸ್ಪಾಟ್ ಮತ್ತು ಫ್ಯೂಚರ್ ಮಾರ್ಕೆಟ್‌ಗಳನ್ನು ಒಟ್ಟಾಗಿಸಬೇಕಿದೆ. ಆಗ ಮಾತ್ರವೇ ಭಾರತದ ಕೃಷಿಕರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯುತ್ತಾರೆ ಮತ್ತು ಮಾರ್ಕೆಟ್ ರಿಸ್ಕ್‌ಗಳಿಂದ ಬಚಾವಾಗುತ್ತಾರೆ.

ಸಣ್ಣ ರೈತರು ಎದುರಿಸುತ್ತಿರುವ ಉತ್ಪನ್ನ ಮತ್ತು ಹಣಕಾಸು ಮಾರುಕಟ್ಟೆ ಸಂಬಂಧಿ ಸಮಸ್ಯೆಗಳನ್ನು ರೈತರ ಸಮೂಹ ರಚಿಸುವ ಮೂಲಕಪರಿಹರಿಸಬಹುದು ಮತ್ತು ಈ ಸಮೂಹವನ್ನು ದೊಡ್ಡ ಚೈನ್‌ಗೆ ಸಂಪರ್ಕಿಸಬಹುದು ಎಂಬುದನ್ನು ಕಂಡುಕೊಳ್ಳಲಾಗಿದೆ. ಈವರೆಗೆ, 7,000 ಕೃಷಿ ಉತ್ಪಾದಕರ ಸಂಸ್ಥೆಗಳನ್ನು (ಎಫ್‌ಪಿಒ) ಸ್ಥಾಪಿಸಲಾಗಿದೆ.

ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಸುಸ್ಥಿರತೆ

ಒಂದು ಜಿಲ್ಲೆ, ಒಂದು ಉತ್ಪನ್ನ ಎಂಬ ಧ್ಯೇಯದ ಅಡಿಯಲ್ಲಿ 10 ಸಾವಿರ ಹೊಸ ಎಫ್‌ಪಿಒಗಳನ್ನು ರೂಪಿಸುವ ಕುರಿತು ಮಾರ್ಗಸೂಚಿಗಳನ್ನು ಈಗಾಗಲೇ ಪ್ರಕಟಿಸಿರುವುದರಿಂದ, ಸ್ಕೀಮ್ ಅನ್ನು ಜಾರಿಗೊಳಿಸಲು ಕೆಲವು ಶಿಷ್ಟಾಚಾರಗಳನ್ನು ಅನುಸರಿಸಬೇಕಾಗಿದೆ. ಅಲ್ಲದೆ, ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗಳನ್ನು ಸ್ಥಾಪಿಸಬೇಕಿದೆ. ಈ ಸ್ಕೀಮ್‌ನ ಉತ್ತಮ ಅಂಶವೆಂದರೆ, ನಬಾರ್ಡ್‌ ಮತ್ತು ಎನ್‌ಸಿಡಿಸಿ (ನ್ಯಾಷನಲ್ ಕೋಆಪರೇಟಿವ್ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌) ನಿಧಿಯನ್ನು ಒದಗಿಸುವುದಾಗಿದೆ. ಇದರ ಜೊತೆಗೆ ಈ ಹಿಂದೆ ಸ್ಥಾಪಿಸಿದ ಎಸ್‌ಎಫ್‌ಎಸಿ (ಸ್ಮಾಲ್ ಫಾರ್ಮರ್ಸ್‌ ಅಗ್ರಿಬ್ಯುಸಿನೆಸ್ ಕನ್ಸಾರ್ಶಿಯಮ್) ಕೂಡ ಅನುದಾನವನ್ನು ನೀಡುತ್ತವೆ. ಅಲ್ಲದೆ, ಅಗ್ರಿ ಮಾರ್ಕೆಟ್ ಇನ್‌ಫ್ರಾಸ್ಟ್ರಕ್ಚರ್ ಫಂಡ್ (ಎಎಂಐಎಫ್‌) ಮೂಲಕ ಎಫ್‌ಪಿಒಗಳಿಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಸ್ಕೀಮ್ ಅಡಿಯಲ್ಲಿ ಮಾರ್ಕೆಟಿಂಗ್‌ ಪ್ರೋತ್ಸಾಹಕ್ಕೆ ಮತ್ತು ಫಾರಂ ಮಟ್ಟದ ಮೂಲಸೌಕರ್ಯ ವೃದ್ಧಿಗಾಗಿ ನಿಧಿಯನ್ನು ಒದಗಿಸಬಹುದಾಗಿದೆ.

ರೈತರಿಗೆ ಉಂಟಾಗುವ ಮೋಸವನ್ನು ತಡೆಯಲು, ಸರ್ಕಾರ ಗಮನಾರ್ಹ ಕ್ರಮಗಳನ್ನು ತೆಗೆದುಕೊಳ್ಳಬೆಕಿದೆ. ನಮ್ಮ ರೈತರಿಗೆ ಗುಣಮಟ್ಟದ ಸಾಮಗ್ರಿಗಳನ್ನು ಕೈಗೆಟಕುವ ದರದಲ್ಲಿ ಒದಗಿಸಬೇಕಿದೆ. ನಾವು ಸದ್ಯ ಪರಿಗಣಿಸಬೇಕಿರುವ 3 ಸುಧಾರಿತ ಕೃಷಿ ತಂತ್ರಜ್ಞಾನಗಳು ಇಲ್ಲಿವೆ:

ಎಐ (ಆರ್ಟಿಫಿಶಿಯಲ್ ಇಂಟಲಿಜೆನ್ಸ್): ಮಹಾರಾಷ್ಟ್ರ, ತೆಲಂಗಾಣ ಮತ್ತು ಮಧ್ಯಪ್ರದೇಶದ ಗ್ರಾಮಗಳಲ್ಲಿನ ಹಲವು ರೈತರು ಬೆಳೆಯ ಫಸಲನ್ನು ಹೆಚ್ಚಿಸಲು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅನ್ನು ಬಳಸಲು ಆರಂಭಿಸಿವೆ. ಮಣ್ಣಿನ ಆರೋಗ್ಯವನ್ನು ಪರಿಶೀಲಿಸಲು ಮತ್ತು ಕಟಾವಿನಂತಹ ಇತರ ಕೃಷಿ ಕೆಲಸಗಳನ್ನು ಮಾಡಲು ಕೃಷಿ ರೋಬೋಟ್‌ಗಳನ್ನು ಬಳಸಲಾಗುತ್ತಿದೆ. ಹವಾಮಾನದ ಬದಲಾವಣೆಯಂತಹವುಗಳನ್ನು ಮಶಿನ್ ಲರ್ನಿಂಗ್ ಮಾಡೆಲ್‌ಗಳು ಟ್ರ್ಯಾಕ್ ಮಾಡುತ್ತವೆ ಮತ್ತು ಊಹೆ ಮಾಡುತ್ತವೆ.

ಅಟೊಪೈಲಟ್‌ ಟ್ರ್ಯಾಕ್ಟರ್‌ಗಳು: ಹೆಸರೇ ಹೇಳುವಂತೆ, ಇದೊಂದು ಸ್ವಯಂಚಾಲಿತ ಕೃಷಿ ಯಂತ್ರವಾಗಿದ್ದು, ಕೃಷಿ ಕೆಲಸಗಳನ್ನು ಮಾಡಲು ಅತ್ಯಂತ ಉಪಯುಕ್ತವಾಗಿದೆ. ಜಿಪಿಎಸ್ ಟೆಕ್ನಾಲಜಿಯನ್ನು ಆಧರಿಸಿದ ಇದು, ಸ್ವಯಂಚಾಲಿತವಾಗಿ ತಮ್ಮ ಟ್ರ್ಯಾಕ್‌ಗಳನ್ನು ಮಾಡಿಕೊಳ್ಳುತ್ತವೆ, ವೇಗವನ್ನು ನಿರ್ಧರಿಸಿಕೊಳ್ಳುತ್ತವೆ ಮತ್ತು ಉಳುಮೆ ಸೇರಿದಂತೆ ಹಲವು ಕೃಷಿ ಕೆಲಸಗಳನ್ನು ಮಾಡುವಾಗ ಅಡ್ಡಿಗಳನ್ನು ನಿವಾರಿಸಿಕೊಳ್ಳುತ್ತದೆ.

ಎಫ್‌ಪಿಒಗಳು ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು (ಸಣ್ಣ ಫಾರ್ಮರ್ ಡೈರಿಗೆ ಡಿಜಿಟಲ್‌ ಟೆಕ್ನಾಲಜಿ – ಅಮೂಲ್‌ನ ಯಶಸ್ಸು)

ಅಮೂಲ್ ಡೈರಿ (ದೇಶದ ಅತಿದೊಡ್ಡ ಎಫ್‌ಪಿಒ) ಜಾನುವಾರುಗಳಿಗೆ ಕೃತಕ ಗರ್ಭಧಾರಣೆಯ ಡಿಜಿಟಲೀಕರಣವನ್ನು ಅನುಷ್ಠಾನ ಮಾಡಿದೆ. ಕೈರಾ ಡಿಸ್ಟ್ರಿಕ್ಟ್ ಮಿಲ್ಕ್ ಪ್ರೊಡ್ಯೂಸರ್ಸ್ ಕೋಆಪರೇಟಿವ್ ಯೂನಿಯನ್‌ನಲ್ಲಿ (ಅಮುಲ್ ಡೈರಿ) ಯಶಸ್ವಿಯಾದ ನಂತರ, ಎಲ್ಲ 1200 ಗ್ರಾಮೀಣ ಮಟ್ಟದ ಹಾಲು ಉತ್ಪಾದಕ ಸೊಸೈಟಿಗಳನ್ನು ಡಿಜಿಟಲೀಕರಿಸಲಾಗಿದೆ.

ಜಾನುವಾರುಗಳ ಕೃತಕ ಗರ್ಭಧಾರಣೆಯನ್ನು ನಡೆಸಲು ಜಾನುವಾರುಗಳ ರೈತರು ಮತ್ತು ಸಹಕಾರ ಸಂಸ್ಥೆಗಳಿಗೆ ಮೊಬೈಲ್ ಫೋನ್‌ನಲ್ಲಿ ತ್ವರಿತವಾಗಿ ಮತ್ತು ಕಾಲಕಾಲಕ್ಕೆ ಮಾಹಿತಿಯನ್ನು ತಂತ್ರಜ್ಞಾನವನ್ನು ಒದಗಿಸುತ್ತವೆ. ಅಮೂಲ್ ಕಾಲ್ ಸೆಂಟರ್‌ನಲ್ಲಿ ಎಐ ಗಾಗಿ ಸದಸ್ಯರು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.

ಹಾಲಿನ ಸೊಸೈಟಿ ನೇಮಿಸಿದ ತಂತ್ರಜ್ಞರಿಗೆ ಸಂದೇಶ ಲಭ್ಯವಾಗುತ್ತದೆ. ಇದರ ಜೊತೆಗೆ ಹಾಲು ಉತ್ಪಾದಕರಿಗೂ ಈ ಮೆಸೇಜ್ ಹೋಗುತ್ತದೆ. ಈ ಮೂಲಕ ಒಟ್ಟು ಸರಣಿಯೇ ಆರಂಭವಾಗುತ್ತದೆ. ತಂತ್ರಜ್ಞರು ಜಾನುವಾರು ಇದ್ದಲ್ಲಿಗೆ ತೆರಳಿ ಕೃತಕ ಗರ್ಭಧಾರಣೆ ಮಾಡುತ್ತಾರೆ. ಎಲ್ಲ ಮಾಹಿತಿಯನ್ನೂ ಮೊಬೈಲ್‌ನಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ. ಇದು ಅಮೂಲ್‌ ಕಾಲ್ ಸೆಂಟರ್ ಮತ್ತು ಹಾಲು ಉತ್ಪಾದಕರಿಗೆ ಸಂದೇಶ ಕಳುಹಿಸುತ್ತದೆ.

ಜಾನುವಾರಿನ ಗರ್ಭಧಾರಣೆ ಮಾಹಿತಿಯನ್ನು ಡಿಜಿಟಲ್‌ ವ್ಯವಸ್ಥೆ ಸಾಗಿಸುತ್ತದೆ. ಕರು ಹಾಕಿದ ಬಗ್ಗೆ ಮಾಹಿತಿಯನ್ನು ಒಂಬತ್ತು ತಿಂಗಳ ನಂತರ ಕಳುಹಿಸುತ್ತದೆ. ಜನಿಸಿದ ಜಾನುವಾರಿನ ಲಿಂಗ ಯಾವುದು, ಹುಟ್ಟಿದ್ದು ಯಾವಾಗ ಎಂಬ ಎಲ್ಲ ಮಾಹಿತಿಯೂ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನೋಂದಣಿಯಾಗುತ್ತದೆ.

ಹಾಲು ಉತ್ಪಾದಕರು ಯಾವುದೇ ಮಾಹಿತಿಯನ್ನು ಬರೆದಿಟ್ಟುಕೊಳ್ಳಬೇಕಾಗಿಲ್ಲ. ಎಲ್ಲ ಮಾಹಿತಿಯನ್ನೂ ಅಮೂಲ್ ಡೈರಿಯು ಸಾಫ್ಟ್‌ವೇರ್‌ ವ್ಯವಸ್ಥೆಯಲ್ಲಿ ಇರಬೇಕು. ಕೃತಕ ಗರ್ಭಧಾರಣೆಯ ಡಿಜಿಟಲೀಕರಣವು ಹಾಲು ಉತ್ಪಾದಕರಿಗೆ ತ್ವರಿತ ಸೇವೆಯನ್ನು ನೀಡುತ್ತದೆ. ಇದರ ಜೊತೆಗೆ, ಹಾಲು ಕರೆಯುವ ಜಾನುವಾರಿನ ಮಾಹಿತಿಯೂ ಮೊಬೈಲ್ ಸಾಫ್ಟ್‌ವೇರ್‌ ಸಿಸ್ಟಂನಲ್ಲಿ ಸಂಗ್ರಹವಾಗುವುದರಿಂದ, ಇದನ್ನು ವಿಶ್ಲೇಷಿಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.