ಕೊಯಮತ್ತೂರು(ತಮಿಳುನಾಡು): ನಿನ್ನೆ ಎಲ್ಲೆಡೆ ಮಹಾತ್ಮ ಗಾಂಧೀಜಿಯವರ ಫೋಟೋ ಇಟ್ಟು ಸ್ವಾತಂತ್ರ್ಯೋತ್ಸವ ಆಚರಿಸಿದರೆ, ಇಲ್ಲೋರ್ವ ವ್ಯಕ್ತಿ ಗಾಂಧೀಜಿಗೆಂದೇ ನಿರ್ಮಿಸಿರುವ ಗುಡಿಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾನೆ.

ಕೊಯಮತ್ತೂರಿನ ಸರವಣಂಪಟ್ಟಿಯಲ್ಲಿ ತಂಗವೇಲ್ ಎಂಬ ವ್ಯಕ್ತಿ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಈ ಗಾಂಧಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾನೆ.
ನಾನು ಈ ದೇವಾಲಯವನ್ನು 1993 ರಲ್ಲಿಯೇ ನಿರ್ಮಿಸಿದ್ದೇನೆ. ಗಾಂಧಿಯವರ ತತ್ವಗಳಿಂದ ತುಂಬಾ ಪ್ರಭಾವಿತನಾಗಿದ್ದೇನೆ ಎಂದು ಈ ವ್ಯಕ್ತಿ ಹೇಳಿಕೊಂಡಿದ್ದಾನೆ.