ನವದೆಹಲಿ: 74ನೇ ಸ್ವಾತಂತ್ರ್ಯ ದಿನಾಚರಣೆಗೆ ಕೇವಲ ಒಂದೇ ದಿನ ಬಾಕಿ. ಕೊರೊನಾ ವೈರಸ್ ನಡುವೆ ಈ ಸಲ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಆದರೆ ಪ್ರತಿ ವರ್ಷದಂತೆ ಈ ಸಲವೂ ದೆಹಲಿಯ ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿ, ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯ ಮೇಲೆ ಸತತ ಏಳನೇ ಬಾರಿಗೆ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಎರಡನೇ ಅವಧಿಯಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಅವರ ಎರಡನೇ ಭಾಷಣ ಇದಾಗಲಿದೆ.
ಈ ಹಿಂದಿನ ಸ್ವಾತಂತ್ರ್ಯ ದಿನಗಳಲ್ಲಿ ಪ್ರಧಾನಿ ಮೋದಿ ಅನೇಕ ಮಹತ್ವದ ಯೋಜನೆ ಘೋಷಣೆ ಮಾಡಿದ್ದು, ಕೆಲವೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನ, ಯೋಜನಾ ಆಯೋಗ ರದ್ದು, ಮತ್ತು ರಕ್ಷಣಾ ಮುಖ್ಯಸ್ಥರ ಹುದ್ದೆ ಸೃಷ್ಟಿ ಸೇರಿಕೊಂಡಿವೆ.
ನಮೋ ಹಿಂದಿನ ಭಾಷಣಗಳ ಕೆಲವು ಪ್ರಮುಖ ಮುಖ್ಯಾಂಶಗಳು
2014ರ ಸ್ವಾತಂತ್ರ್ಯ ಭಾಷಣದ ಮುಖಾಂಶಗಳು ಇಂತಿವೆ
1. ಬಡ ನಾಗರಿಕರಿಗೋಸ್ಕರ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಘೋಷಣೆ
2.ಭಾರತದ ಕೌಶಲ್ಯ, ಪ್ರತಿಭೆ ಅನಾವರಣಗೊಳಿಸಲು ಮೇಕ್ ಇನ್ ಇಂಡಿಯಾ
3. ಸ್ವಚ್ಛ ಭಾರತ ಅಭಿಯಾನ ಪ್ರಾರಂಭಿಸುವುದಾಗಿ ಘೋಷಣೆ
4. ಡಿಜಿಟಲ್ ಇಂಡಿಯಾ ಕನಸು ಸಾಕಾರಗೊಳಿಸಲು ಎಲೆಕ್ಟ್ರಾನಿಕ್ ಸರಕು ಉತ್ಪಾದನೆಗೆ ಹೆಚ್ಚಿನ ಒತ್ತು
5. ಸಂಸದರ ಆದರ್ಶ ಗ್ರಾಮ ಯೋಜನೆ ಘೋಷಣೆ, ಒಂದು ಗ್ರಾಮ ದತ್ತು ಪಡೆದುಕೊಂಡು ಮಾದರಿ ಗ್ರಾಮ ಮಾಡುವುದು
6. ದೇಶದ ಎಲ್ಲ ಶಾಲೆಗಳಲ್ಲಿ ಒಂದು ವರ್ಷದಲ್ಲಿ ಬಾಲಕಿಯರಿಗೋಸ್ಕರ ಪ್ರತ್ಯೇಕ ಶೌಚಾಲಯ ನಿರ್ಮಾಣದ ಗುರಿ
7. ಯೋಜನಾ ಆಯೋಗ ಬದಲಿಸಿ ಹೊಸ ಸಂಸ್ಥೆ ನೀತಿ ಆಯೋಗ ಘೋಷಣೆ
2015 ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ಮುಖ್ಯಾಂಶಗಳು:
1. ದೇಶದಲ್ಲಿ ಉದ್ಯಮಶೀಲತೆ ಉತ್ತೇಜಿಸಲು ಸ್ಟಾರ್ಟ್-ಅಪ್ ಇಂಡಿಯಾ ಘೋಷಣೆ
2. 1,000 ದಿನಗಳಲ್ಲಿ 18,500 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ
3. 'ಸಿ' ಮತ್ತು 'ಡಿ' ವರ್ಗದ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ವೇಳೆ ಸಂದರ್ಶನ ರದ್ದು
4. ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ ಮೂಲಕ 17 ಕೋಟಿ ಬ್ಯಾಂಕ್ ಖಾತೆ ತೆರೆಯುವ ಗುರಿ
5. ಕಪ್ಪು ಹಣ ಹೊಂದಿರುವ ಭ್ರಷ್ಟ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧಾರ
6. ಕೃಷಿ ಸಚಿವಾಲಯವನ್ನು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಎಂದು ಮರುನಾಮಕರಣ
2016 ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ಮುಖ್ಯಾಂಶಗಳು:
1. ಎರಡು ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿರುವ ಘೋಷಣೆ
2. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ 21 ಕೋಟಿ ಜನರಿಗೆ ಅನುಕೂಲ
3. ಬಳಕೆ ಮಾಡದ 1,700 ಕಾನೂನು ಗುರುತಿಸಿ ಸಂಸತ್ತಿನಲ್ಲಿ ಅವುಗಳಿಗೆ ತಿದ್ದುಪಡಿ ಮಾಡುವ ಘೋಷಣೆ
4. "ಬಲೂಚಿಸ್ತಾನ್, ಗಿಲ್ಗಿಟ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಜನರಿಗೆ ಧನ್ಯವಾದ ಅರ್ಪಣೆ
5. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರ ಪಿಂಚಣಿ ಶೇ.20 ರಷ್ಟು ಏರಿಕೆ
7. 18,000 ಗ್ರಾಮಗಳ ಪೈಕಿ 10,000 ಗ್ರಾಮಗಳಿಗೆ ವಿದ್ಯುತ್ ಒದಗಿಸಿದ್ದಾಗಿ ಘೋಷಣೆ
2017 ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ಮುಖ್ಯಾಂಶಗಳು:
1. 'ಚಲ್ತಾ ಹೈ' ಮನೋಭಾವ ತೊರೆದು 'ಬದಲ್ ಸಕ್ತಾ ಹೈ' ಬಗ್ಗೆ ಯೋಚಿಸುವ ಗುರಿ
2. ಸ್ವಾತಂತ್ರ್ಯದ ಬಳಿಕ ವಿದ್ಯುತ್ ಇಲ್ಲದ 14,000 ಕ್ಕೂ ಹೆಚ್ಚು ಗ್ರಾಮಗಳು ವಿದ್ಯುತ್ ಪೂರೈಕೆ
3. ಎರಡು ಕೋಟಿಗಿಂತಲೂ ಹೆಚ್ಚು ಬಡ ತಾಯಂದಿರು ಇಂಧನಕ್ಕಾಗಿ ಮರ ಬಳಸದೆ ಎಲ್ಪಿಜಿ ಗ್ಯಾಸ್ ಸ್ಟೌವ್ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ
4. ಶೌರ್ಯ ಪ್ರಶಸ್ತಿ ವಿಜೇತರ ಶೌರ್ಯದ ಮಾಹಿತಿ ನೀಡುವ ವೆಬ್‌ಸೈಟ್ ಪ್ರಾರಂಭಿಸುವ ಘೋಷಣೆ
6. ಡಿಜಿಟಲ್ ವಹಿವಾಟು ನಡೆಸಲು ಮತ್ತು ನಗದು ರಹಿತ ಆರ್ಥಿಕತೆಯತ್ತ ಸಾಗಲು ಮನವಿ
7. 1.25 ಲಕ್ಷ ಕೋಟಿ ರೂ. ಕಪ್ಪು ಹಣ ಮುಟ್ಟುಗೋಲು ಹಾಕಿಕೊಂಡಿದ್ದಾಗಿ ಘೋಷಣೆ
8. ಕಾಶ್ಮೀರಿ ಸಮಸ್ಯೆ ಬಗೆಹರಿಸುವ ನಿರ್ಧಾರ
9. ಹವಾಲಾ ವಹಿವಾಟು ನಡೆಸುವ 3 ಲಕ್ಷ ಶೆಲ್ ಕಂಪನಿಗಳಲ್ಲಿ 1.75 ಲಕ್ಷ ಕಂಪನಿಗಳ ನೋಂದಣಿ ರದ್ದು
2018 ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ಮುಖ್ಯಾಂಶಗಳು:
1. 2022ರ ವೇಳೆಗೆ ಮಾನವ ಸಹಿತ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆ
2. ಮುದ್ರಾ ಸಾಲ ಯೋಜನೆ ಘೋಷಣೆ, ಯುವಕರಿಗೆ ಸಾಲ ಸೌಲಭ್ಯ
3. ಗಂಭೀರ ಕಾಯಿಲೆ ಇರುವ ಬಡವರಿಗೆ ಪ್ರಧಾನಮಂತ್ರಿ ಜನ್ ಆರೋಗ್ಯ ಅಭಿಯಾನ ಪ್ರಾರಂಭಿಸುವ ಘೋಷಣೆ
4. ಭಾರತೀಯ ಸಶಸ್ತ್ರ ಪಡೆಯಲ್ಲಿ ಮಹಿಳಾ ಅಧಿಕಾರಿಗಳ ನೇಮಕ
5. ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ನಿರ್ಧಾರ
6. ಮೀನುಗಾರರಿಗೆ ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್
2019ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ಮುಖ್ಯಾಂಶಗಳು
1. ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಕನಸು ಈಡೇರಿಸಲು ಮಹತ್ವದ 370 ಮತ್ತು 35ಎ ವಿಧಿ ರದ್ದು
2. ಒಂದು ರಾಷ್ಟ್ರ ಒಂದು ಸಂವಿಧಾನದ ಮನೋಭಾವ ನಿರ್ಮಾಣ
3. ಜಲ-ಜೀವನ್ ಮಿಷನ್ ಘೋಷಣೆ
4. 2024ರ ವೇಳಗೆ ಪ್ರತಿ ಗ್ರಾಮೀಣ ಮನೆಗೆ ಕುಡಿಯಲು ಯೋಗ್ಯವಾದ ನೀರು ಒದಗಿಸುವ ಯೋಜನೆ
5. ದೇಶದಲ್ಲಿ ಮೂಲಸೌಕರ್ಯ ಹೆಚ್ಚಿಸಲು 100 ಲಕ್ಷ ಕೋಟಿ ರೂ. ಹೂಡಿಕೆ
6. ರಕ್ಷಣಾ ಸಿಬ್ಬಂದಿ ಹುದ್ದೆ ರಚಿಸುವ ಘೋಷಣೆ
7. ಬಯಲು ಮಲ ವಿಸರ್ಜನೆ ಮುಕ್ತ ಭಾರತ ಘೋಷಣೆ
8. ಪ್ಲಾಸ್ಟಿಕ್ ಬಳಕೆಯಿಂದ ಮುಕ್ತಗೊಳಿಸಲು ಸಿಂಗಲ್ ಯೂಸ್ ಪ್ಲಾಸ್ಟಿಕ್ ಮೇಲೆ ನಿಷೇಧ