ETV Bharat / bharat

ಚಂದ್ರಯಾನ-2 ಶೇ. 95% ಸುರಕ್ಷಿತ.. ಆರ್ಬಿಟರ್​ 1 ವರ್ಷ ಚಂದಿರನ ಫೋಟೋ ಕಳಿಸಲಿದೆ.. ಇಸ್ರೋ ಸಂತಸ!

'ನಮ್ಮ ಉದ್ದೇಶಿತ ಯೋಜನೆಯಡಿ ಕೇವಲ ಶೇ. 5 ಪ್ರತಿದಷ್ಟು ಮಾತ್ರವೇ ವಿಫಲವಾಗಿದ್ದೇವೆ. ವಿಕ್ರಮ್, ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಹೊರತುಪಡಿಸಿ ಉಳಿದ ಶೇ. 95 ಪ್ರತಿಶತ ಚಂದ್ರಯಾನ- 2 ಯಶಸ್ಸು ಕಂಡಿದೆ. ಚಂದ್ರನನ್ನು ಯಶಸ್ವಿಯಾಗಿ ಪರಿಭ್ರಮಿಸುತ್ತಿರುವ ಆರ್ಬಿಟರ್ ನಮ್ಮ ಯಶಸ್ಸು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Sep 7, 2019, 11:50 AM IST

ಬೆಂಗಳೂರು/ಚೆನ್ನೈ: ಚಂದ್ರಯಾನ-2ರ ಯೋಜನೆಯಡಿ ಚಂದ್ರನ ಮೇಲ್ಮೈ ಸ್ಪರ್ಶಿಬೇಕಿದ್ದ ವಿಕ್ರಮ್ ಲ್ಯಾಂಡರ್​ನ ಭವಿಷ್ಯ ಮತ್ತು ಅದರ ಪ್ರಸ್ತುತ ಸ್ಥಿತಿ ತಿಳಿದಿಲ್ಲವಾದರೂ, ₹ 978 ಕೋಟಿ ವೆಚ್ಚದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಭರವಸೆ ಮಾತ್ರ ಇಸ್ರೋ ವಿಜ್ಞಾನಿಗಳು ಕಳೆದುಕೊಂಡಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ನಮ್ಮ ಉದ್ದೇಶಿತ ಯೋಜನೆಯಡಿ ಕೇವಲ ಶೇ.5 ಪ್ರತಿದಷ್ಟು ಮಾತ್ರವೇ ವಿಫಲವಾಗಿದ್ದೇವೆ. ವಿಕ್ರಮ್, ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಹೊರತುಪಡಿಸಿ ಉಳಿದ ಶೇ. 95 ಪ್ರತಿಶತ ಚಂದ್ರಯಾನ- 2 ಯಶಸ್ಸು ಕಂಡಿದೆ. ಚಂದ್ರನನ್ನು ಯಶಸ್ವಿಯಾಗಿ ಪರಿಭ್ರಮಿಸುತ್ತಿರುವ ಆರ್ಬಿಟರ್ ನಮ್ಮ ಯಶಸ್ಸು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಒಂದು ವರ್ಷದ ಜೀವಿತಾವಧಿಯೊಂದಿಗೆ ಆರ್ಬಿಟರ್ ಚಂದ್ರನ ಮೇಲ್ಮೈಯ ಹಲವಾರು ಚಿತ್ರಗಳನ್ನು ತೆಗೆದು ಇಸ್ರೋಗೆ ಕಳುಹಿಸಲಿದೆ. ಲ್ಯಾಂಡರ್​ನ ಸ್ಥಿತಿಯನ್ನು ತಿಳಿದುಕೊಳ್ಳಲು ಇದೇ ಆರ್ಬಿಟರ್​ ತೆಗೆದು ಕಳುಹಿಸುವ ಚಿತ್ರಗಳು ನೆರವಿಗೆ ಬರುತ್ತವೆ ಎಂದರು.

ಚಂದ್ರಯಾನ -2 ಬಾಹ್ಯಾಕಾಶ ನೌಕೆ ಯೋಜನೆಯು ಮೂರು ವಿಭಾಗಗಳನ್ನು ಒಳಗೊಂಡಿತ್ತು. ಆರ್ಬಿಟರ್ (2,379 ಕೆಜಿ ತೂಕದ ಎಂಟು ಪೇಲೋಡ್‌ಗಳು), ವಿಕ್ರಮ್ (1,471 ಕೆ.ಜಿಯ ನಾಲ್ಕು ಪೇಲೋಡ್‌ಗಳು) ಮತ್ತು 'ಪ್ರಜ್ಞಾನ್' (27 ಕೆಜಿಯ ಎರಡು ಪೇಲೋಡ್‌ಗಳು) ಇದ್ದವು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.