ETV Bharat / bharat

ಬೇರೆಡೆಗೆ ಪೋಸ್ಟ್​​ ಆಗಿದ್ದ ಪೊಲೀಸ್​ ಅಧಿಕಾರಿಯಲ್ಲೂ ಕೊರೊನಾ ಪಾಸಿಟಿವ್​!

ಪಂಜಾಬ್​​ನ ಬೇರೊಂದು ಸ್ಥಳಕ್ಕೆ ವರ್ಗಾವಣೆಗೊಂಡಿದ್ದ ಅಧಿಕಾರಿಯೊಬ್ಬರಲ್ಲಿ ಕೊರೊನಾ ವೈರಸ್​ ಕಾಣಿಸಿಕೊಂಡಿದ್ದು, ಅನೇಕ ಅನುಮಾನಗಳಿಗೆ ಎಡೆ ಮಾಡಿದೆ.

author img

By

Published : Apr 13, 2020, 4:38 PM IST

52-year old Gazetted Officer of Punjab Police

ಲೂಧಿಯಾನ್​​(ಪಂಜಾಬ್​): ಮಹಾಮಾರಿ ಕೊರೊನಾ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಜನರಲ್ಲಿ ಹಬ್ಬುತ್ತಿದ್ದು, ಇದರಿಂದ ಇಡೀ ಭಾರತ ಭೀತಿಗೊಳಗಾಗಿದೆ. ಇದೀಗ ಪಂಜಾಬ್​​ನಲ್ಲಿ 52 ವರ್ಷದ ಪೊಲೀಸ್​​ ಅಧಿಕಾರಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

ಲೂಧಿಯಾನಾಗೆ ವರ್ಗಾವಣೆ ಗೊಂಡಿದ್ದ 52 ವರ್ಷದ ಪೊಲೀಸ್​ ಆಫೀಸರ್​​​​ ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಟೆಸ್ಟ್​ ಮಾಡಿಸಲಾಗಿದ್ದು, ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿದೆ ಎಂದು ಮುಖ್ಯ ಕಾರ್ಯದರ್ಶಿ ಕೆಬಿಎಸ್​​ ಸಿದ್ದು ತಿಳಿಸಿದ್ದಾರೆ.

ಈ ಮೂಲಕ ಪಂಜಾಬ್​​ನಲ್ಲಿ ಸೋಂಕಿತರ ಸಂಖ್ಯೆ 171ಕ್ಕೆ ಏರಿಕೆಯಾಗಿದ್ದು, ಕೆಲವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಈಗಾಗಲೇ 9 ಸಾವಿರ ಗಡಿ ದಾಟಿದ್ದು, 900ಕ್ಕೂ ಹೆಚ್ಚು ಜನರು ಗುಣಮುಖರಾಗಿ ಮನೆಗೆ ಹೋಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.