ETV Bharat / bharat

ಉತ್ತರಾಖಂಡದ ಚಮೋಲಿಯಲ್ಲಿ ಬ್ರಿಟಿಷರ ಕಾಲದ ದೋಣಿ ಪತ್ತೆ

ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಅವಶೇಷಗಳ ಅಡಿ ಸಿಲುಕಿದ್ದ ದೋಣಿಯೊಂದು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಕಂಡು ಬಂದಿದೆ. 50 ವರ್ಷ ಹಳೆಯದಾದ ಈ ದೋಣಿ ಬ್ರಿಟಿಷರ ಕಾಲಕ್ಕೆ ಸೇರಿದ್ದಾಗಿದೆ.

50-year-old-boat-found-in-chamoli
50-year-old-boat-found-in-chamoli
author img

By

Published : Aug 20, 2020, 3:14 PM IST

Updated : Aug 20, 2020, 5:07 PM IST

ಚಮೋಲಿ (ಉತ್ತರಾಖಂಡ): ದೇವಭೂಮಿ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ 1971ರ ದೋಣಿಯೊಂದು ಕಂಡುಬಂದಿದೆ. ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಅವಶೇಷಗಳ ಅಡಿ ಹೂತು ಹೋಗಿದ್ದ ಈ ದೊಣಿ ಇದೀಗ ಪತ್ತೆಯಾಗಿದೆ.

ಇದನ್ನು ನೋಡಿ ಆಶ್ಚರ್ಯಚಕಿತರಾದ ಜನ, ಈ ದೋಣಿ ಬ್ರಿಟಿಷ್ ಕಾಲಕ್ಕೆ ಸೇರಿದ್ದಾಗಿದೆ ಎಂದು ಬಣ್ಣಿಸುತ್ತಿದ್ದಾರೆ.

50 ವರ್ಷ ಹಳೆಯ ದೋಣಿ ಪತ್ತೆ

ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ಇಲ್ಲಿನ ನೈಸರ್ಗಿಕ ಸರೋವರದ ಸೌಂದರ್ಯಕ್ಕೆ ಮಾರುಹೋಗಿ ಬ್ರಿಟಿಷರು ಈ ಸ್ಥಳದಲ್ಲಿ ಬೋಟಿಂಗ್ ಮಾಡುತ್ತಿದ್ದರು. ಬ್ರಿಟಿಷರ ಆಳ್ವಿಕೆಯ ನಂತರ ಇಲ್ಲಿನ ಗ್ರಾಮ, ಸರೋವರ ಮತ್ತು ಪ್ರವಾಸೋದ್ಯಮ ನಿರ್ಲಕ್ಷಿಸಲಾಯಿತು. 1971ರ ನೈಸರ್ಗಿಕ ವಿಕೋಪದಲ್ಲಿ ಈ ಕೊಳ ಹಾನಿಗೊಳಗಾಗಿತ್ತು.

5 ಕಿಲೋಮೀಟರ್ ಉದ್ದವಿದ್ದ ಸರೋವರದಲ್ಲಿ ಸಾಕಷ್ಟು ದೋಣಿಗಳಿದ್ದವು. ಸಾವಿರಾರು ಪ್ರವಾಸಿಗರು ದೋಣಿವಿಹಾರ ಮಾಡುತ್ತಿದ್ದರು. ಇಲ್ಲಿ ಒಂದು ಬೋಟ್ ಹೌಸ್ ಇದ್ದು, ಅದರಲ್ಲಿ ಅನೇಕ ದೋಣಿಗಳನ್ನು ಇರಿಸಲಾಗಿತ್ತು. ಅವುಗಳು 1971ರ ಪ್ರವಾಹದಲ್ಲಿ ಮುಳುಗಿದ್ದವು.

Last Updated : Aug 20, 2020, 5:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.