ETV Bharat / bharat

ದೆಹಲಿಯ ಎರಡು ಆಸ್ಪತ್ರೆಗಳ 62 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ!

ರಾಷ್ಟ್ರ ರಾಜಧಾನಿಯ ಬಾಬಾ ಸಾಹೇಬ್​ ಅಂಬೇಡ್ಕರ್ ಆಸ್ಪತ್ರೆಯ 29 ಹಾಗೂ ಮ್ಯಾಕ್ಸ್​ ಆಸ್ಪತ್ರೆಯ 33 ವೈದ್ಯಕೀಯ ಸಿಬ್ಬಂದಿಗೆ ಕೋವಿಡ್​-19 ಇರುವುದು ದೃಢಪಟ್ಟಿದೆ.

Delhi's Max Hospital
ದೆಹಲಿಯ 62 ವೈದ್ಯಕೀಯ ಸಿಬ್ಬಂದಿಗಳಿಗೆ ಕೊರೊನಾ
author img

By

Published : Apr 27, 2020, 12:41 PM IST

Updated : Apr 27, 2020, 1:36 PM IST

ನವದೆಹಲಿ: ಕೊರೊನಾ ರೋಗಿಗಳ ಜೀವ ಉಳಿಸಲು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೇ ಸೋಂಕು ತಗುಲುತ್ತಿರುವುದು ದಿನೇದಿನೆ ಹೆಚ್ಚಾಗುತ್ತಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ರಾಷ್ಟ್ರ ರಾಜಧಾನಿಯ ಎರಡು ಆಸ್ಪತ್ರೆಗಳ ಒಟ್ಟು 62 ಸಿಬ್ಬಂದಿಗೆ ಕೊರೊನಾ ಪಾಸಿಟಿವ್​ ಬಂದಿದೆ.

ದೆಹಲಿಯ ಬಾಬಾ ಸಾಹೇಬ್​ ಅಂಬೇಡ್ಕರ್​ ಆಸ್ಪತ್ರೆಯ ವೈದ್ಯರು, ನರ್ಸ್​ಗಳು ಸೇರೆ ಒಟ್ಟು 29 ಮಂದಿ ವೈದ್ಯಕೀಯ ಸಿಬ್ಬಂದಿಗೆ ಕೋವಿಡ್​-19 ಇರುವುದು ದೃಢಪಟ್ಟಿರುವುದಾಗಿ ನೋಯ್ಡಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಯೋಲಾಜಿಕಲ್ಸ್ ವರದಿ ನೀಡಿದೆ.

ಇನ್ನು ದೆಹಲಿಯ ಪಟ್ಪರ್ಗಂಜ್​​ನ ಮಾಕ್ಸ್​ ಆಸ್ಪತ್ರೆಯ ವೈದ್ಯಕೀಯ 33 ಸಿಬ್ಬಂದಿಗೆ ಸೋಂಕು ತಗುಲಿದೆ. ಸದ್ಯ ಇಲ್ಲಿದ್ದ ಎಲ್ಲಾ ರೋಗಿಗಳನ್ನು ಸಾಕೇತ್​​ನಲ್ಲಿರುವ​ ಮ್ಯಾಕ್ಸ್ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ.

Last Updated : Apr 27, 2020, 1:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.