ಪುಣೆ(ಮಹಾರಾಷ್ಟ್ರ): ಪುಣೆಯ ಮಣಿಕ್ಬಾಗ್ ಪ್ರದೇಶದಲ್ಲಿ 29 ವರ್ಷದ ಯುವತಿಯ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾ ಗಿದೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

ಮೃತ ಯುವತಿ ತೇಜಸ್ ಪಾಲ್ ಬೀಡ್ ಜಿಲ್ಲೆಯ ನಿವಾಸಿಯಾಗಿದ್ದು, ಎಂಬಿಎ ಶಿಕ್ಷಣ ಮುಗಿಸಿ ಪುಣೆಯ ಫ್ಲ್ಯಾಟ್‌ನಲ್ಲಿ ತಾಯಿ ಹಾಗೂ ಸಹೋದರಿ ಜತೆ ವಾಸವಾಗಿದ್ದರು. ಈ ಮಧ್ಯೆ, ಬೀಡ್ಗೆ ತೆರಳಿದ್ದ ತೇಜಸ್ ಮೂರು ದಿನಗಳ ಹಿಂದೆ ಕೆಲಸ ಇದೆ ಎಂದು ಹೇಳಿ ಏಕಾಂಗಿಯಾಗಿ ಪುಣೆಗೆ ವಾಪಸ್ ಆಗಿದ್ದರು. ಇದೀಗ ಆಕೆಯ ಮೃತದೇಹ ಪತ್ತೆಯಾಗಿದ್ದು ಅನುಮಾನಗಳಿಗೆ ಆಸ್ಪದವಾಗಿದೆ.

ಯುವತಿಯ ಮೃತದೇಹ ಪತ್ತೆಯಾದ ಕೋಣೆಯಲ್ಲಿ ಖಾಲಿ ಮದ್ಯದ ಬಾಟಲಿ ಸಿಕ್ಕಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನ್ನಾಗಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.