ETV Bharat / bharat

ಖರಗ್​​ಪುರ್​​ನಲ್ಲಿ ಅಗ್ನಿಗೆ ಆಹುತಿಯಾದ 28 ಅಂಗಡಿಗಳು

ಪಶ್ಚಿಮ ಬಂಗಾಳದ ಖರಗ್​​ಪುರ್​ನಲ್ಲಿ ನಿನ್ನೆ ರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಬರೋಬ್ಬರಿ 28 ಅಂಗಡಿಗಳು ಸುಟ್ಟು ಭಸ್ಮವಾಗಿದೆ.

author img

By

Published : Apr 25, 2020, 3:26 PM IST

28 shops gutted in fire
ಬೆಂಕಿ ಅವಘಡ

ಖರಗ್‌ಪುರ(ಪಶ್ಚಿಮ ಬಂಗಾಳ): ರಾಜ್ಯದ ಪಶ್ಚಿಮ ಮಿಡ್ನಾಪೋರ್ ಜಿಲ್ಲೆಯ ಐಐಟಿ - ಖರಗ್‌ಪುರ ಆವರಣದಲ್ಲಿ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ 28 ಅಂಗಡಿಗಳು ಸುಟ್ಟು ಭಸ್ಮವಾಗಿದೆ.

ಖರಗ್​ಪುರ್​​ ಕ್ಯಾಂಪಸ್‌ನ ಟೆಕ್ ಮಾರ್ಕೆಟ್‌ನಲ್ಲಿ ಶುಕ್ರವಾರ ರಾತ್ರಿ 7.50ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಅಗ್ನಿಶಾಮಕ ದಳಕ್ಕೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೆಲವೇ ಸಮಯದಲ್ಲಿ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಈ ಅವಘಡದಿಂದಾಗಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

ಬೆಂಕಿ ಅವಘಡ

ಎಲ್ಲ ಕಚೇರಿಗಳಿಗೂ ಬೀಗ ಹಾಕಿದ ಕಾರಣ, ಬೆಂಕಿ ಆವರಿಸಿದ ಸಮಯದಲ್ಲಿ ಯಾವೊಬ್ಬ ಸಿಬ್ಬಂದಿಗೂ ಅಪಾಯವಾಗಿಲ್ಲ. ಶಾರ್ಟ್ ಸರ್ಕ್ಯೂಟ್​ನಿಂದಾಗಿ ಈ ಅವಘಡ ಸಂಬವಿಸರಬಹುದೆಂಬ ಅನುಮಾನವಿದೆ, ಆದರೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.