ETV Bharat / bharat

218 ಹೊಸ ಕೇಸ್​, ಇಂದೇ10 ಮಂದಿ ಸಾವು... ಕೊರೊನಾ ರುದ್ರನರ್ತನಕ್ಕೆ ಮಹಾರಾಷ್ಟ್ರ ತತ್ತರ!

author img

By

Published : Apr 10, 2020, 7:30 PM IST

ಡೆಡ್ಲಿ ವೈರಸ್​ ಕೊರೊನಾ ಸೋಂಕಿಗೆ ಮಹಾರಾಷ್ಟ್ರ ಕಕ್ಕಾಬಿಕ್ಕಿಯಾಗಿದೆ. ಸೋಂಕಿತ ಪ್ರಕರಣ ದಿನದಿಂದ ದಿನಕ್ಕೆ ಏರುಗತ್ತಿಯಲ್ಲಿ ಸಾಗಿದ್ದು, ಇನ್ನಿಲ್ಲದ ತೊಂದರೆಗೊಳಗಾಗುವಂತೆ ಮಾಡಿವೆ.

218 New Corona Positive cases found in Mumbia

ಮುಂಬೈ: ಮಹಾಮಾರಿ ಕೊರೊನಾ ವೈರಸ್​ ಸೋಂಕಿಗೆ ಮಹಾರಾಷ್ಟ್ರ ತತ್ತರಿಸಿ ಹೋಗಿದೆ. ದಿನ ಕಳೆದಂತೆ ಹೆಚ್ಚು ಹೆಚ್ಚು ಪ್ರಕರಣ ಈ ರಾಜ್ಯದಲ್ಲಿ ಕಾಣಸಿಗುತ್ತಿದ್ದು, ಇಂದೇ ಬರೋಬ್ಬರಿ 218 ಹೊಸ ಕೇಸ್​ ಕಾಣಿಸಿಕೊಂಡಿದ್ದು, ಅಲ್ಲಿನ ಜನರಲ್ಲಿ ಮತ್ತಷ್ಟು ಆತಂಕ ಮೂಡಿದೆ.

ಮುಂಬೈನಲ್ಲೇ ಇಷ್ಟೊಂದು ಹೊಸ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 993ಕ್ಕೆ ಏರಿಕೆ ಕಂಡಿದೆ. ಇದೇ 10 ಸಾವು ಸಂಭವಿಸಿವೆ. ಹೀಗಾಗಿ ಸಾವಿನ ಸಂಖ್ಯೆ 64ಕ್ಕೆ ಏರಿಕೆಯಾಗಿದೆ. ಇದೀಗ ರಾಜ್ಯದಲ್ಲಿ ಒಟ್ಟು ಪ್ರಕರಣ 1,570 ಕೊರೊನಾ ಪ್ರಕರಣ ಸಿಕ್ಕಿವೆ.

ತಮಿಳುನಾಡಿನಲ್ಲೂ 77 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಮಹಿಳೆ ಸಾವನ್ನಪ್ಪಿದ್ದಾಳೆ. ಈ ಮೂಲಕ ರಾಜ್ಯದಲ್ಲಿ 9 ಮಂದಿ ಸಾವನ್ನಪ್ಪಿದ್ದು, ಸೋಂಕಿತರ ಸಂಖ್ಯೆ 911ಕ್ಕೆ ಏರಿಕೆ ಆಗಿದೆ. 45 ಮಂದಿ ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ.

ತೆಲಂಗಾಣದಲ್ಲಿ 442, ಉತ್ತರಪ್ರದೇಶದಲ್ಲಿ 410, ರಾಜಸ್ಥಾನ 383, ಆಂಧ್ರಪ್ರದೇಶ 348, ಕೇರಳ 345, ಮಧ್ಯಪ್ರದೇಶ 259,ಕರ್ನಾಟಕ 207, ಹರಿಯಾಣದಲ್ಲಿ 169 ಪ್ರಕರಣ ಕಾಣಿಸಿಕೊಂಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.