ETV Bharat / bharat

ಸೋಂಕು ಮುಕ್ತವಾಗುತ್ತಿದ್ದ ಕೇರಳಕ್ಕೆ ಶಾಕ್​​​: ವಿದೇಶದಿಂದ ಬಂದ ಇಬ್ಬರೊಂದಿಗೆ ಹಾರಿ ಬಂತು ಕೊರೊನಾ!

ಕೇರಳದಲ್ಲಿ ಕೊರೊನಾ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿವೆ. ಹಲವು ದಿನಗಳಿಂದ ಒಂದೇ ಒಂದು ಪಾಸಿಟಿವ್​ ಪ್ರಕರಣ ಕೂಡಾ ರಾಜ್ಯದಲ್ಲಿ ಪತ್ತೆಯಾಗಿರಲಿಲ್ಲ. ಆದ್ರೆ ಇಂದು 2 ಪಾಸಿಟಿವ್​ ಕೇಸ್​ ವರದಿಯಾಗಿದ್ದು, ನಿನ್ನೆ-ಮೊನ್ನೆ ವಿದೇಶದಿಂದ ಹಾರಿ ಬಂದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

Kerala
ಕೇರಳ
author img

By

Published : May 9, 2020, 9:06 PM IST

ತಿರುವನಂತಪುರಂ: ವಿಶೇಷ ಏರ್ ಇಂಡಿಯಾ ವಿಮಾನಗಳ ಮೂಲಕ ಅಬುಧಾಬಿ ಮತ್ತು ದುಬೈನಿಂದ ಬಂದ 363 ಜನರಲ್ಲಿ ಇಬ್ಬರು ಭಾರತೀಯರಲ್ಲಿ ಕೊರೊನಾ ಪಾಸಿಟಿವ್​ ಪತ್ತೆಯಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಕೇರಳದಲ್ಲಿ ಇಂದು ಕೇವಲ ಎರಡೇ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು, ಈ ಎರಡೂ ಪ್ರಕರಣ ವಿದೇಶದಿಂದ ಮರಳಿದವರಲ್ಲೇ ಪತ್ತೆಯಾಗಿದೆ. ಸೋಂಕಿತರಲ್ಲಿ ಒಬ್ಬ ಕೋಯಿಕೋಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನೊಬ್ಬನಿಗೆ ಕೊಚ್ಚಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ. ಇವರಿಬ್ಬರೂ ವಂದೇ ಭಾರತ್​ ಮಿಷನ್​ ಅಡಿಯಲ್ಲಿ ಗಲ್ಫ್​ ರಾಷ್ಟ್ರಗಳಿಂದ ಕೇರಳಕ್ಕೆ ಬಂದಿದ್ದರು.

ಈ ಎರಡು ಹೊಸ ಪ್ರಕರಣಗಳಿಂದಾಗಿ ಕೇರಳದ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 505ಕ್ಕೇರಿದ್ದು, ಈಗ 17 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 4 ಜನ ಸೋಂಕಿನಿಂದ ಸಾವನ್ನಪ್ಪಿದ್ದು, ಉಳಿದಂತೆ 484 ಜನರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.