ETV Bharat / bharat

ತಮಿಳುನಾಡಿನಲ್ಲಿ ಒಂದೇ ದಿನದಲ್ಲಿ 17 ಮಂದಿಗೆ ಅಂಟಿದ ಸೋಂಕು..!

ತಮಿಳುನಾಡಿನಲ್ಲಿ ಒಂದೇ ದಿನದಲ್ಲಿ 17 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ.

17 new cases reported in Tamil Nadu
ತಮಿಳುನಾಡಿನಲ್ಲಿ ಒಂದೇ ದಿನದಲ್ಲಿ 17 ಮಂದಿಯಲ್ಲಿ ಸೋಂಕು
author img

By

Published : Mar 30, 2020, 2:05 PM IST

ಚೆನ್ನೈ: ತಮಿಳುನಾಡಿನಲ್ಲಿ ಕೋವಿಡ್​-19 ರೌದ್ರ ನರ್ತನ ತೋರುತ್ತಿದೆ. ಇಂದು ಒಂದೇ ದಿನದಲ್ಲಿ 17 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ.

ಈರೋಡ್​ ಜಿಲ್ಲೆಯಲ್ಲಿ 10, ಚೆನ್ನೈನಲ್ಲಿ 4, ತಿರುವರೂರ್​ನಲ್ಲಿ 1 ಹಾಗೂ ಮದುರೈನಲ್ಲಿ 2 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಈ ಕುರಿತು ತಮಿಳುನಾಡಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟನೆ ನೀಡಿದೆ. ಕೆಲ ದಿನಗಳ ಹಿಂದೆ ಓರ್ವ ಕೊರೊನಾದಿಂದಾಗಿ ಮೃತಪಟ್ಟಿದ್ದು, ಐವರಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿತ್ತು. ಈಗ ಒಂದೇ ಬಾರಿಗೆ 17 ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯದಲ್ಲಿ ತಳಮಳ ಮೂಡಿಸಿದೆ.

ರಾಜ್ಯದಲ್ಲಿ ಲಾಕ್​ ಡೌನ್​ ಬಗ್ಗೆ ಸಿಎಂ ಎಡಪ್ಪಾಡಿ ಕೆ.ಪಳನಿಸ್ವಾಮಿ ಕೂಡಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಸಾರ್ವಜನಿಕರು, ಮನೆಯಲ್ಲಿಯೇ ಇದ್ದು ಕೊರೊನಾ ಹರಡದಂತೆ ಮುಂಜಾಗ್ರತೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.