ETV Bharat / bharat

ಮೊಬೈಲ್ ಕದ್ದು ಪರಾರಿಯಾಗ್ತಿದ್ದ ಕಳ್ಳನ ಬೆನ್ನಟ್ಟಿ ಹಿಡಿದ 15ರ ಪೋರಿ... ಸಿಸಿ ಟಿವಿಯಲ್ಲಿ ಗಟ್ಟಿಗಿತ್ತಿಯ ದೃಶ್ಯ ಸೆರೆ! - ಜಲಂಧರ್​ ಸುದ್ದಿ

ಗಟ್ಟಿಗಿತ್ತಿ ಬಾಲಕಿವೋರ್ವಳು ಮೊಬೈಲ್​ ಕದ್ದು ಪರಾರಿಯಾಗ್ತಿದ್ದ ಕಳ್ಳನ ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾಳೆ. ಈ ವೇಳೆ ಬಾಲಕಿ ಗಾಯಗೊಂಡಿದ್ದಾಳೆ.

15-year-old girl fights snatchers
15-year-old girl fights snatchers
author img

By

Published : Aug 31, 2020, 11:05 PM IST

Updated : Aug 31, 2020, 11:33 PM IST

ಜಲಂಧರ್​: ಮೊಬೈಲ್​ ಕಸಿದುಕೊಂಡು ಪರಾರಿಯಾಗ್ತಿದ್ದ ಕಳ್ಳನನ್ನು ಬೆನ್ನಟ್ಟಿರುವ 15 ವರ್ಷದ ಬಾಲಕಿಯೋರ್ವಳ ಸಾಹಸದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೊಬೈಲ್ ಕದ್ದು ಪರಾರಿಯಾಗ್ತಿದ್ದ ಕಳ್ಳನ ಬೆನ್ನಟ್ಟಿ ಹಿಡಿದ 15ರ ಪೋರಿ

ಪಂಜಾಬ್​ನ ಜಲಂಧರ್​​-ಕಪುರ್ಥಾಲಾ ರಸ್ತೆ ಬಳಿ ದೀನ್​ ದಯಾಳ್​ ಉಪಾಧ್ಯಾಯ ನಗರದಲ್ಲಿ ಖದೀಮನೋರ್ವ ಬಾಲಕಿಯ ಮೊಬೈಲ್​ ಫೋನ್​ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ 15 ವರ್ಷದ ಕುಸುಮ್​ ಕುಮಾರಿ ಆತನನ್ನು ಬೆನ್ನತ್ತಿದ್ದಾಳೆ.

ಈ ವೇಳೆ ಬಾಲಕಿ ಮೇಲೆ ಕಳ್ಳ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾನೆ. ಇಷ್ಟಾದ್ರೂ ಸುಮ್ಮನಾಗದ ಆಕೆ ಮೊಬೈಲ್​ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾಳೆ. ರಸ್ತೆಯಲ್ಲಿ ಆತನೊಂದಿಗೆ ವಾಗ್ವಾದ ಶುರುವಾಗುತ್ತಿದ್ದಂತೆ ಸ್ಥಳದಲ್ಲಿದ್ದವರು ಆಕೆಯ ನೆರವಿಗೆ ಬಂದಿದ್ದಾರೆ. ಇದರ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Last Updated : Aug 31, 2020, 11:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.