ETV Bharat / bharat

ದುಷ್ಕರ್ಮಿಗಳಿಗೆ ದುಸ್ವಪ್ನದಂತೆ ಕಾಡುತ್ತಿರುವ ಯೋಗಿ ಸರ್ಕಾರ: 3 ವರ್ಷದಲ್ಲಿ 6 ಸಾವಿರ ಎನ್​ಕೌಂಟರ್

ಉತ್ತರಪ್ರದೇಶದಲ್ಲಿ ಪುಂಡ, ಪೋಕರಿಗಳ​ ಹೆಡೆಮುರಿ ಕಟ್ಟುತ್ತಿರುವ ಯೋಗಿ ಸರ್ಕಾರ ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿದೆ.

Uttar Pradesh
Uttar Pradesh
author img

By

Published : Jul 15, 2020, 6:20 PM IST

ಕಾನ್ಪುರ್​: ಕಳೆದ ಕೆಲ ದಿನಗಳ ಹಿಂದೆ ನಟೋರಿಯಸ್​ ಗ್ಯಾಂಗ್​ಸ್ಟರ್​ ವಿಕಾಸ್​ ದುಬೆಯನ್ನು ಎನ್​ಕೌಂಟರ್​ ಮೂಲಕ ಹತ್ಯೆಗೈದಿರುವ ಯುಪಿ ಪೊಲೀಸರು, ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಹೆಚ್ಚುವರಿ ಪೊಲೀಸ್​ ಮಹಾನಿರ್ದೇಶಕ ಪ್ರಶಾಂತ್​ ಕುಮಾರ್ ಸುದ್ದಿಗೋಷ್ಟಿಯಲ್ಲಿ​ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ 6,126 ಎನ್​ಕೌಂಟರ್ ನಡೆದಿದೆ. 122 ಕ್ರಿಮಿನಲ್ಸ್​​​ ಹತ್ಯೆಗೈಯಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪೊಲೀಸ್​ ಇಲಾಖೆಯ 13 ಸಿಬ್ಬಂದಿ ಕೂಡ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದು, 909 ಪೊಲೀಸ್​ ಸಿಬ್ಬಂದಿಗೆ ಗಾಯಗಳಾಗಿವೆ ಎಂದಿದ್ದಾರೆ.

ಪೊಲೀಸರ ಕಾರ್ಯಾಚರಣೆ ವೇಳೆ 2 ಸಾವಿರಕ್ಕೂ ಹೆಚ್ಚು ಕ್ರಿಮಿನಲ್ಸ್​ ಗಾಯಗೊಂಡಿದ್ದು, 13 ಸಾವಿರ ಕಳ್ಳರ ಬಂಧನ ಮಾಡಲಾಗಿದೆ ಎಂದರು.

ಕಳೆದ ಕೆಲ ದಿನಗಳ ಹಿಂದೆ ಕಾನ್ಪುರದಲ್ಲಿ ನಡೆದ ಎನ್​ಕೌಂಟರ್​ ಪ್ರಕರಣದಲ್ಲಿ 8 ಮಂದಿ ಪೊಲೀಸರು ಸಾವನ್ನಪ್ಪಿದ್ದು, ಈ ಅಪರಾಧ ಕೃತ್ಯದಲ್ಲಿ 21 ಮಂದಿ ಭಾಗಿಯಾಗಿದ್ದಾಗಿ ತಿಳಿಸಿದ್ದಾರೆ. ಈಗಾಗಲೇ ಆರು ಮಂದಿಯ ಎನ್​ಕೌಂಟರ್​ ಮಾಡಲಾಗಿದ್ದು, ನಾಲ್ವರನ್ನು ಬಂಧನ ಮಾಡಲಾಗಿದೆ. ಉಳಿದಂತೆ 11 ಜನ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಸದ್ಯ ಉತ್ತರಪ್ರದೇಶದಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿದ್ದು, ಇದೇ ವರ್ಷ 913 ಅತ್ಯಾಚಾರ​ ಪ್ರಕರಣ ದಾಖಲಾಗಿರುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.