ETV Bharat / bharat

ಶಾಕಿಂಗ್​: 2 ತಿಂಗಳ ಮಗು ಸೇರಿ ಒಂದೇ ಕುಟುಂಬದ 12 ಮಂದಿಗೆ ಕೊರೊನಾ ಸೋಂಕು!

ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ವೈರಸ್‌ ವಿಜೃಂಭಿಸುತ್ತಲೇ ಇದೆ. ನಿಷೇಧಿಸಲ್ಪಟ್ಟ ವಲಯ ಅಂತ ಘೋಷಿಸಿದ್ದ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ದೆಹಲಿಯ ಕಂಟೈನ್ಮೆಂಟ್‌ ಪ್ರದೇಶದಲ್ಲಿ 2 ತಿಂಗಳ ಮಗು ಸೇರಿ ಒಂದೇ ಕುಟುಂಬದ 12 ಮಂದಿಗೆ ಕೋವಿಡ್‌19 ಸೋಂಕು ದೃಢ ಪಟ್ಟಿದೆ.

12-of-family members covid-19 positive
ದೆಹಲಿ ಕೋವಿಡ್‌-19
author img

By

Published : Apr 24, 2020, 11:46 AM IST

ದೆಹಲಿ: ದೇಶದಲ್ಲಿ ಕಿಲ್ಲರ್‌ ಕೋವಿಡ್-‌19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ದೆಹಲಿಯ ನಿಷೇಧಿತ ವಲಯವೊಂದರಲ್ಲಿ 2 ತಿಂಗಳ ಮಗು ಸೇರಿ ಒಂದೇ ಕುಟುಂಬದ 12 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಂಕಿತರೆಲ್ಲರನ್ನು ಎಲ್‌ಎನ್‌ಜಿಪಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಹಳೆ ದೆಹಲಿಯ ಜಹಂಗೀರ್‌ಪುರ ಪ್ರದೇಶದಲ್ಲಿ ವೈರಸ್‌ ದೃಢಪಟ್ಟವರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ನಿರ್ಬಂಧಗಳನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ.

ಒಂದು ತಿಂಗಳ ಹಿಂದಷ್ಟೇ ಈ ಕುಟುಂಬಕ್ಕೆ ಸೇರಿದ ವ್ಯಕ್ತಿ ಉಜ್ಬೇಕಿಸ್ತಾನ್​ನಿಂದ ಸ್ವದೇಶಕ್ಕೆ ವಾಪಸ್‌ ಆಗಿದ್ದ. ದುರಂತ ಅಂದ್ರೆ ಈತ ವಿದೇಶಿ ಪ್ರವಾಸದ ಮಾಹಿತಿಯನ್ನು ಬಹಿರಂಗ ಪಡಿಸಿರಲಿಲ್ಲ. ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ನಂತರ ಆಸ್ಪತ್ರೆಗೆ ಬಂದಾಗ ಸೋಂಕು ದೃಢಪಟ್ಟಿತ್ತು. ಇದೀಗ ಇವರ ಕುಟುಂಬದ 11 ಮಂದಿಗೂ ಕೊರೊನಾ ಪಾಸಿಟಿವ್‌ ಬಂದಿದೆ.

ಇದೇ ಪ್ರದೇಶದಲ್ಲಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ 31 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 2376ಕ್ಕೆ ಏರಿಕೆಯಾಗಿದ್ದು, ಮತೃರ ಸಂಖ್ಯೆ 50ರ ಗಡಿ ದಾಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.