ETV Bharat / bharat

ಕೋವ್ಯಾಕ್ಸಿನ್​ ಡೋಸ್​ಗೆ ₹295, ಕೋವಿಶೀಲ್ಡ್​ ₹200: ಕೇಂದ್ರ ಆರ್ಡರ್​ ಮಾಡಿದ ಲಸಿಕೆ ಎಷ್ಟು ಗೊತ್ತಾ! - ಸೆರಂ ಇನ್ಸ್​ಟಿಟ್ಯೂಟ್​ನ ಕೋವಿಶೀಲ್ಡ್ ಲಸಿಕೆ

ಕೊರೊನಾ ವೈರಸ್ ವಿರುದ್ಧ ಹೋರಾಡಲು ಅಭಿವೃದ್ಧಿಗೊಂಡಿರುವ ಎರಡು ಲಸಿಕೆಗಳ ಕಂಪನಿಗಳೊಂದಿಗೆ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು, ದರ ಕೂಡ ನಿಗದಿ ಮಾಡಿದೆ.

Rajesh Bhushan
Rajesh Bhushan
author img

By

Published : Jan 12, 2021, 6:19 PM IST

ನವದೆಹಲಿ: ಭಾರತ್​ ಬಯೋಟೆಕ್​​ನಿಂದ ಅಭಿವೃದ್ಧಿಗೊಂಡಿರುವ ಕೋವ್ಯಾಕ್ಸಿನ್ ಹಾಗೂ ಸೆರಂ ಇನ್ಸ್​ಟಿಟ್ಯೂಟ್​ನ ಕೋವಿಶೀಲ್ಡ್ ಲಸಿಕೆ ಬಳಕೆಗೆ ಭಾರತೀಯ ಪ್ರಧಾನ ಔಷದ ನಿಯಂತ್ರಕ ಅನುಮತಿ ನೀಡಿದ ಬೆನ್ನಲ್ಲೇ ದೇಶದಾದ್ಯಂತ ಜನವರಿ 16ರಿಂದ ಲಸಿಕೆ ವಿತರಣೆಯಾಗಲಿದೆ. ಸೆರಂನ ಕೋವಿಶೀಲ್ಡ್​ ಈಗಾಗಲೇ ಎಲ್ಲಾ ರಾಜ್ಯಗಳಿಗೂ ಹಂಚಿಕೆಯಾಗಿದ್ದು, ಕೋವ್ಯಾಕ್ಸಿನ್ ಕೂಡ ಕೆಲವೊಂದು ರಾಜ್ಯಗಳಿಗೆ ರವಾನೆಗೊಳ್ಳಲಿದೆ.

ಎರಡು ಕಂಪನಿಗಳಿಂದ ಅಭಿವೃದ್ಧಿಗೊಂಡಿರುವ ಲಸಿಕೆಗಳಿಗೆ ಭಾರತ ಸರ್ಕಾರ ದರ ನಿಗದಿಪಡಿಸಿ ಖರೀದಿ ಮಾಡ್ತಿದ್ದು, ಕೋವ್ಯಾಕ್ಸಿನ್​ ಪ್ರತಿ ಡೋಸ್​ಗೆ 295 ರೂ.( ತೆರಿಗೆ ಹೊರತುಪಡಿಸಿ) ಹಾಗೂ ಕೋವ್ಯಾಕ್ಸಿನ್​ 200 ರೂ.ಗೆ ಇದೆ.

ಓದಿ: ಸೆರಂ​, ಭಾರತ್ ಬಯೋಟೆಕ್‌ನ 6 ಕೋಟಿ ಡೋಸ್‌ಗಳಿಗೆ ಕೇಂದ್ರ ಖರ್ಚು ಮಾಡಿದ್ದು______ ಕೋಟಿ ರೂ.

ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ ಭೂಷಣ್​​ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಸೆರಂ ಇನ್ಸ್​ಟಿಟ್ಯೂಟ್​ನಿಂದ 110 ಲಕ್ಷ ಕೋವಿಶೀಲ್ಡ್ ವ್ಯಾಕ್ಸಿನ್​ ಡೋಸ್​​ ಹಾಗೂ ಭಾರತ್ ಬಯೋಟೆಕ್​ನಿಂದ 55 ಲಕ್ಷ ಡೋಸ್​ ಖರೀದಿ ಮಾಡಲು ನಿರ್ಧರಿಸಿದ್ದು, ಇದರಲ್ಲಿ 38.5 ಲಕ್ಷ ಡೋಸ್ ಒಂದಕ್ಕೆ​ 295 ರೂ. ನೀಡಿ ಖರೀದಿ ಮಾಡಲಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ ಭೂಷಣ್​​ ಸುದ್ದಿಗೋಷ್ಠಿ

ಭಾರತ್​ ಬಯೋಟೆಕ್​ನಿಂದ 55 ಲಕ್ಷ ಡೋಸ್​ಗಳು ಜನವರಿ 14ರೊಳಗೆ ವಿವಿಧ ರಾಜ್ಯಗಳ 12 ಕೇಂದ್ರಗಳಿಗೆ ತಲುಪಲಿದ್ದು, ಮೊದಲ ಹಂತದಲ್ಲಿ 38.5 ಲಕ್ಷ ಹಾಗೂ ಎರಡನೇ ಹಂತದಲ್ಲಿ 16.5 ಲಕ್ಷ ವ್ಯಾಕ್ಸಿನ್​ ರವಾನೆಯಾಗಲಿವೆ. ಸೆರಂನಿಂದ ಖರೀದಿಯಾಗುತ್ತಿರುವ 1.1 ಕೋಟಿ ಡೋಸ್​ಗಳ ಬೆಲೆ 231 ಕೋಟಿ ಆಗಲಿದ್ದು, 4.5 ಕೋಟಿ ಡೋಸ್ ಖರೀದಿ ಮಾಡಲು ಕೇಂದ್ರ ನಿರ್ಧಾರ ಮಾಡಿರುವ ಕಾರಣ ಇದರ ಒಟ್ಟು ಬೆಲೆ 1,176 ಕೋಟಿ ರೂ. ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.