ನವದೆಹಲಿ: ಚೀನಾದ ವುಹಾನ್‌ನಿಂದ ಭಾರತಕ್ಕೆ ಬಂದು ನವದೆಹಲಿಯ ಚಾವ್ಲಾದಲ್ಲಿನ ಐಟಿಬಿಪಿ (ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್) ಕೇಂದ್ರಲ್ಲಿದ್ದ 110 ಮಂದಿ ತಮ್ಮ ಸ್ಥಳಗಳಿಗೆ ತೆರಳಿದ್ದಾರೆ.
ಕೊರೊನಾ ಸೋಂಕಿನ ಕೇಂದ್ರಬಿಂದುವಾಗಿದ್ದ ವುಹಾನ್‌ನಿಂದ ಭಾರತಕ್ಕೆ ಬಂದಿದ್ದ ಇವರ ಆರೋಗ್ಯದ ಮೇಲೆ ನಿಗಾ(Quarantine) ಇರಿಸಲಾಗಿತ್ತು. ಚಾವ್ಲಾದಲ್ಲಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಕೇಂದ್ರದಲ್ಲಿ ಸುಮಾರು 16 ದಿನಗಳ ಕಾಲ 110 ಜನರು ತಂಗಿದ್ದರು.
ಈ ವೇಳೆ 2 ಬಾರಿ ಕೊರೊನಾ ಸೋಂಕಿನ ಪರೀಕ್ಷೆ ನಡೆಸಲಾಗಿದೆ. ಎರಡು ಬಾರಿಯೂ ಒಬ್ಬರಲ್ಲೂ ಸೋಂಕು ಕಂಡುಬಂದಿಲ್ಲ. 16 ದಿನಗಳ ಅವಧಿ ಪೂರೈಸಿದ 110 ಮಂದಿಯನ್ನು ತಮ್ಮ ಸ್ಥಳಗಳಿಗೆ ಕಳುಹಿಸಿಕೊಡಲಾಗಿದೆ. ಸದ್ಯ ಇಬ್ಬರು ಮಾತ್ರ ಈ ಐಟಿಬಿಪಿ ಕೇಂದ್ರದಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಭಾರತದಲ್ಲಿ ಈವರೆಗೆ 80ಕ್ಕೂ ಹೆಚ್ಚು ಜನರು ಕೊವಿಡ್-19 ಸೋಂಕಿಗೆ ಒಳಗಾಗಿದ್ದು, ಈ ಪೈಕಿ ದೇಶದಲ್ಲಿ ಎರಡು ಸಾವುಗಳು ಸಂಭವಿಸಿವೆ.