ನವದೆಹಲಿ: ದೇಶದ ಅತಿದೊಡ್ಡ ಐಟಿ ಸೇವಾ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ನಲ್ಲಿ 2019ರ ಆರ್ಥಿಕ ವರ್ಷದಲ್ಲಿ ವಾರ್ಷಿಕ ₹ 1 ಕೋಟಿ ವೇತನ ಪಡೆಯುವ ನೌಕರರ ಸಂಖ್ಯೆ 100ರ ಗಡಿ ದಾಟಿದೆ.
2017ರ ಹಣಕಾಸು ವರ್ಷದಲ್ಲಿ 91 ನೌಕರರು ಕೋಟ್ಯಧಿಪತಿಗಳಾಗಿ ವರ್ಷಕ್ಕೆ 1 ಕೋಟಿ ರೂ. ಸಂಬಳ ಪಡೆಯುತ್ತಿದ್ದರು. ಈಗ ಇವರ ಪ್ರಮಾಣ 103ಕ್ಕೆ ತಲುಪಿದೆ. ಇದರಲ್ಲಿ ಭಾರತದಿಂದ ಹೊರಗೆ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಸಂಬಳ ಪರಿಗಣಿಸಿಲ್ಲ.
ವಾರ್ಷಿಕ ಕೋಟಿ ರೂ. ಮೌಲ್ಯದಲ್ಲಿ ವೇತನ ಪಡೆಯುತ್ತಿರವ ಅತ್ಯಧಿಕ ಉದ್ಯೋಗಿಗಳ ಸಂಖ್ಯೆಯನ್ನ ಹೊಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆ ಟಾಟಾ ಕನ್ಸಲ್ಟೆನ್ಸಿಯದ್ದಾಗಿದೆ. ಇದರ ನಂತರದ ಸ್ಥಾನ ಬೆಂಗಳೂರು ಮೂಲದ ಇನ್ಫೋಸಿಸ್ ಪಡೆದಿದೆ. ಇನ್ಫಿಯಲ್ಲಿ 60 ನೌಕರರು 1.02 ಕೋಟಿ ವಾರ್ಷಿಕ ವೇತನ ಪಡೆಯುತ್ತಿದ್ದಾರೆ.