ETV Bharat / bharat

ಶಬರಿಮಲೆ ಅನ್ನದಾನಕ್ಕಾಗಿ 1 ಕೋಟಿ ರೂ. ದೇಣಿಗೆ ನೀಡಿದ ಭಾರತ್​​ ಬಯೋಟೆಕ್​​ ಅಧ್ಯಕ್ಷ - ಶಬರಿಮಲೆಗೆ 1 ಕೋಟಿ ದೇಣಿಗೆ ನೀಡಿದ ಕೃಷ್ಣ ಎಲ್ಲ

ಪ್ರಸಿದ್ಧ ದೇವಸ್ಥಾನ ಶಬರಿಮಲೆಗೆ ಭೇಟಿ ನೀಡಿರುವ ಭಾರತ್​ ಬಯೋಟೆಕ್​​​ನ ಅಧ್ಯಕ್ಷ ಕೃಷ್ಣ ಎಲ್ಲ, ದೇವಾಲಯದಲ್ಲಿ ಅನ್ನದಾನಕ್ಕಾಗಿ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.

Bharat Biotech MD donated for Sabarimala

author img

By

Published : Dec 8, 2021, 4:14 PM IST

ತಿರುವನಂತಪುರಂ(ಕೇರಳ): ಬಡವರು ಮತ್ತು ನಿರ್ಗತಿಕರಿಗೆ ಆಹಾರ ನೀಡುವ ಉದ್ದೇಶದಿಂದ ಭಾರತ್ ಬಯೋಟೆಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲ ಶಬರಿಮಲೆ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ಕೃಷ್ಣ ಎಲ್ಲ, ಪತ್ನಿ ಸುಚಿತ್ರಾ ಎಲ್ಲ ಸೇರಿದಂತೆ ಕುಟುಂಬ ಸಮೇತವಾಗಿ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದರು. ದೇವರ ದರ್ಶನದ ಬಳಿಕ ಶಬರಿಮಲೆ ಕಾರ್ಯನಿರ್ವಾಹಕ ಅಧಿಕಾರಿ ವಿ ಕೃಷ್ಣಕುಮಾರ್​​ ವೇರಿಯಲ್​​​ ಅವರಿಗೆ ಹಣವನ್ನ ಆನ್​ಲೈನ್​ ಮೂಲಕ ವರ್ಗಾಯಿಸಲಾಗಿದೆ.

ಇದನ್ನೂ ಓದಿರಿ: ಸೇನಾ ಕಾಪ್ಟರ್​ ಪತನ : ಹಿರಿಯ ಅಧಿಕಾರಿಗಳೊಂದಿಗೆ ರಾಜನಾಥ್​ ಸಿಂಗ್​ ಚರ್ಚೆ, ಸಂಸತ್​​ಗೆ ಮಾಹಿತಿ ಸಾಧ್ಯತೆ

ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಅನಂತಗೋಪನ್​​​ ಅವರು ದೂರವಾಣಿ ಮೂಲಕ ಎಲ್ಲ ಕೃಷ್ಣ ಅವರೊಂದಿಗೆ ಮಾತನಾಡಿ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ, ಪವಿತ್ರ ದೇವಸ್ಥಾನದಲ್ಲಿ ದುಡಿಯುತ್ತಿರುವ ನೌಕರರ ಆರೋಗ್ಯ ರಕ್ಷಣೆಗೆ ತಮ್ಮ ಕೈಲಾದ ಸಹಾಯ ಮಾಡಲು ಸಿದ್ಧ ಎಂದು ಭಾರತ್​​ ಬಯೋಟೆಕ್​​ನ ಅಧ್ಯಕ್ಷರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.