ನವದೆಹಲಿ: ಭಾರತ್ ಬಯೋಟೆಕ್ ತನ್ನ ಕೋವಿಡ್ -19 ಲಸಿಕೆ 'ಕೊವ್ಯಾಕ್ಸಿನ್' ಅನ್ನು ದೆಹಲಿ ಮತ್ತು ಮಹಾರಾಷ್ಟ್ರ ಸೇರಿದಂತೆ 14 ರಾಜ್ಯಗಳಿಗೆ ಮೇ 1 ರಿಂದ ಸರಬರಾಜು ಮಾಡಲಾಗುತ್ತಿದೆ ಎಂದು ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಸುಚಿತ್ರಾ ಎಲಾ ತಿಳಿಸಿದ್ದಾರೆ.
ಹೈದರಾಬಾದ್ ಮೂಲದ ಈ ಸಂಸ್ಥೆಯು ಕೇಂದ್ರ ಸರ್ಕಾರವು ಪಡೆದ ಹಂಚಿಕೆಗಳ ಆಧಾರದ ಮೇಲೆ ಕೋವಿಡ್ ಚಿಕಿತ್ಸಾ ಲಸಿಕೆಯನ್ನು ರಾಜ್ಯಗಳಿಗೆ ಪೂರೈಸಲು ಪ್ರಾರಂಭಿಸಿದೆ.
ಓದಿ: ಈಟಿವಿ ಭಾರತ ಎಕ್ಸ್ಕ್ಲೂಸಿವ್.. ಗಂಗಾ ನದಿಯಲ್ಲಿ ತೇಲಿ ಬಂದ್ವು 50ಕ್ಕೂ ಹೆಚ್ಚು ಮೃತದೇಹಗಳು!
ಸ್ವೀಕರಿಸಿದ ಹಂಚಿಕೆಗಳ ಆಧಾರದ ಮೇಲೆ ಮೇ 1 ರಿಂದ ಒಟ್ಟು 14 ರಾಜ್ಯ ಸರ್ಕಾರಗಳಿಗೆ ಕೋವ್ಯಾಕ್ಸಿನ್ ನೇರ ಸರಬರಾಜನ್ನು ಮಾಡಲಾಗುತ್ತಿದೆ. ಇತರ ರಾಜ್ಯಗಳಿಂದ ವಿನಂತಿಗಳನ್ನು ಸ್ವೀಕರಿಸಲಾಗಿದೆ. ದಿನದ 24 ಗಂಟೆಗಳು ಹಂಚಿಕೆ ಆಧಾರದ ಮೇಲೆ ವಿತರಣೆಗೆ ಪ್ರಕ್ರಿಯೆಗೊಳಿಸಲಾಗುವುದು ಎಂದು ಭಾರತ್ ಬಯೋಟೆಕ್ ದೃಢಪಡಿಸಿದೆ.
ಮೇ 1ರಿಂದ ಭಾರತ್ ಬಯೋಟೆಕ್ ಕಂಪನಿಯು ಆಂಧ್ರಪ್ರದೇಶ, ಅಸ್ಸೋಂ, ಛತ್ತೀಸ್‌ಗಡ್, ಗುಜರಾತ್, ಜಮ್ಮು ಮತ್ತು ಕಾಶ್ಮೀರ್, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಕ್ಕೆ ಲಸಿಕೆಗಳನ್ನು ಪೂರೈಸುತ್ತಿದೆ.
ಏಪ್ರಿಲ್ 29 ರಂದು ಭಾರತ್ ಬಯೋಟೆಕ್ ರಾಜ್ಯಗಳಿಗೆ 'ಕೋವ್ಯಾಕ್ಸಿನ್' ಬೆಲೆಯನ್ನು ಪ್ರತಿ ಡೋಸ್‌ಗೆ 600 ರೂಪಾಯಿಯಿಂದ 400 ರೂಪಾಯಿಗೆ ಕಡಿತಗೊಳಿಸಿರುವುದಾಗಿ ಘೋಷಿಸಿತ್ತು.