ETV Bharat / bharat

ಲಾಲಾ ಲಜಪತ್​ ರಾಯ್​ ಸಾವಿಗೆ ಸೇಡು.. ಬ್ರಿಟಿಷ್ ಅಧಿಕಾರಿಯ ಹತ್ಯೆಗೆ ಶಪಥ ಮಾಡಿದ್ದರು ಭಗತ್ ಸಿಂಗ್.. - ಬ್ರಿಟಿಷ್ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಸ್ಕಾಟ್ ಹತ್ಯೆ

ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಸಾವಿಗೆ ಸೇಡು ತೀರಿಸಿಕೊಳ್ಳಲು ಭಗತ್ ಸಿಂಗ್ ಮತ್ತು ಆತನ ಸಹಚರರು ಬ್ರಿಟಿಷ್ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಸ್ಕಾಟ್ ಹತ್ಯೆಗೆ ಸಂಚು ರೂಪಿಸಿದ್ದರು..

ಭಗತ್ ಸಿಂಗ್
ಭಗತ್ ಸಿಂಗ್
author img

By

Published : Oct 9, 2021, 7:04 AM IST

Updated : Oct 9, 2021, 8:25 AM IST

ಪೂರ್ವ ಬರ್ದ್ವಾನ್​​ (ಪಶ್ಚಿಮ ಬಂಗಾಳ): ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಸಾವಿಗೆ ಸೇಡು ತೀರಿಸಿಕೊಳ್ಳಲು ಭಗತ್ ಸಿಂಗ್ ಮತ್ತು ಆತನ ಸಹಚರರು ಬ್ರಿಟಿಷ್ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಸ್ಕಾಟ್ ಹತ್ಯೆಗೆ ಶಪಥ ಮಾಡಿದ್ದರು. ಆದರೆ, ಗೊಂದಲದಲ್ಲಿ ಸಹಾಯಕ ಅಧೀಕ್ಷಕ ಜಾನ್ ಸ್ಯಾಂಡರ್ಸ್​ನನ್ನು ಹತ್ಯೆ ಮಾಡಿದ್ದರು.

ಬ್ರಿಟಿಷ್ ಅಧಿಕಾರಿಯ ಹತ್ಯೆಗೆ ಶಪಥ ಮಾಡಿದ್ದ ಭಗತ್ ಸಿಂಗ್..

ಅಲ್ಲಿಂದ ಸಿಂಗ್ ಮತ್ತು ಆತನ ಸಹಚರರು ಆಗಿನ ಅವಿಭಜಿತ ಬರ್ದ್ವಾನ್ ಜಿಲ್ಲೆಗೆ ಪರಾರಿಯಾಗಿದ್ದರು. ಆರಂಭದಲ್ಲಿ ಅವರು ಬಟುಕೇಶ್ವರ ದತ್ತ ಪೂರ್ವಿಕರ ನಿವಾಸದಲ್ಲಿ ಆಶ್ರಯ ಪಡೆದರು. ಆದರೆ, ಪೊಲೀಸರ ಕಣ್ಗಾವಲಿನಿಂದ ತಪ್ಪಿಸಿಕೊಳ್ಳುವುದು ಕಷ್ಟಕರವಾಗಿತ್ತು.

ನಂತರ ಅವರು ಘೋಷ್ ಕುಟುಂಬದ ಮಾಲೀಕತ್ವದ ಪಕ್ಕದ ಮನೆಯಲ್ಲಿ ರಹಸ್ಯ ಭೂಗತ ನೆಲಮಾಳಿಗೆಯಲ್ಲಿ ಆಶ್ರಯ ಪಡೆದರು. ಭಗತ್ ಸಿಂಗ್ ಮತ್ತು ಸಹಚರರು ಪೂರ್ವ ಬರ್ದ್ವಾನ್ ಜಿಲ್ಲೆಯ ಖಾಂಡಘೋಷ್‌ನ ಉಯಾರಿ ಹಳ್ಳಿಯ ನೆಲಮಾಳಿಗೆಯಲ್ಲಿಯೇ ತಲೆ ಮರೆಸಿಕೊಂಡಿದ್ದರು.

ಕ್ರಾಂತಿಕಾರಿ ಬಟುಕೇಶ್ವರ ದತ್ತರ ಪೂರ್ವಜರ ನಿವಾಸದ ಪಕ್ಕದಲ್ಲಿರುವ ಮನೆಯಲ್ಲಿ ರಹಸ್ಯ, ಭೂಗತ ನೆಲಮಾಳಿಗೆಯನ್ನು ಒಳಗೊಂಡಿತ್ತು. ಕೇಂದ್ರ ಶಾಸಕಾಂಗ ಸಭೆಯ ಮೇಲಿನ ದಾಳಿಯ ನೀಲನಕ್ಷೆಯನ್ನು ಈ ನೆಲಮಾಳಿಗೆಯಲ್ಲಿ ಸಿದ್ಧಪಡಿಸಲಾಗಿತ್ತು. ಅಲ್ಮೇರಾದ ಮೂಲಕ ಈ ನೆಲಮಾಳಿಗೆಗೆ ರಹಸ್ಯ ಮಾರ್ಗವಿತ್ತು. ಅವರನ್ನು ಈ ಮಾರ್ಗವಾಗಿ ನೆಲಮಾಳಿಗೆಗೆ ಕರೆದೊಯ್ಯುತ್ತಿದ್ದರು. ಈ ಮನೆ ಈಗ ಶಿಥಿಲಾವಸ್ಥೆಯಲ್ಲಿದೆ. ಆ ರಹಸ್ಯ ಮಾರ್ಗವು ಈಗ ಬಾವಲಿಗಳ ಗುಹೆಯಾಗಿದೆ.

ಈಗ ಈ ಮನೆ ಶಿಥಿಲಾವಸ್ಥೆಯಲ್ಲಿದೆ. ಮನೆಯ ಬಹುತೇಕ ಭಾಗಗಳು ವಾಸಯೋಗ್ಯವಾಗಿವೆ. ಈ ಮನೆಯನ್ನ ಸರ್ಕಾರ ಸ್ವಾಧೀನಪಡಿಸಿಕೊಂಡು ಸಂರಕ್ಷಿಸಬೇಕೆಂದು ಘೋಷ್ ಕುಟುಂಬದ ಪೂರ್ವಜರು ಬಯಸುತ್ತಿದ್ದಾರೆ. ಇದಕ್ಕೆ ಸರ್ಕಾರವೂ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಇದನ್ನೂ ಓದಿ: 75 years : ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಊದಿದ ಮಹನೀಯ ರಾಮ್ ಸಿಂಗ್ ಠಾಕೂರ್..

ಇಲ್ಲಿನ ಸ್ಥಳೀಯರ ಆಸೆಯೂ ಅದೇ ಆಗಿದೆ. ಸರ್ಕಾರ ಈ ಮನೆಯನ್ನ ತನ್ನ ಸ್ವಾಧೀನಕ್ಕೆ ಪಡೆಯಬೇಕು ಎಂಬ ಅಭಿಪ್ರಾಯ ಹೊರ ಹಾಕಿದ್ದಾರೆ. ಖಂಡಘೋಷ್​​ನಲ್ಲಿರುವ ಘೋಷ್ ಕುಟುಂಬದ ಮನೆ ಸ್ವದೇಶಿ ಚಳವಳಿಯ ಪ್ರಮುಖ ಅಧ್ಯಾಯಗಳಲ್ಲಿ ಬಹುಮುಖ್ಯ ಅಂಗವಾಗಿದೆ. ಮುಂದೆಯು ಈ ಅಧ್ಯಾಯ ಜೀವಂತವಾಗಿಡಬೇಕಿದೆ.

Last Updated : Oct 9, 2021, 8:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.