ETV Bharat / bharat

Exclusive ಸಿಹಿ ಮಾತಿನ ಚಂದುಳ್ಳಿ ಚೆಲುವೆ ಆಗ್ತಾಳೆ ಬೆತ್ತಲೆ; ಮರುಳಾದ್ರೆ ನಿಮ್ಮ ಬಾಳು ಕತ್ತಲೆ!

author img

By

Published : Jul 28, 2021, 7:00 PM IST

Updated : Jul 28, 2021, 8:17 PM IST

ಫೇಸ್​ಬುಕ್​ನಲ್ಲಿ(Facebook) ಫ್ರೆಂಡ್​​ ರಿಕ್ವೆಸ್ಟ್​ ಕಳುಹಿಸಿರುವ ಯುವತಿ ತದನಂತರ ವ್ಯಕ್ತಿಯನ್ನು ಹನಿಟ್ರ್ಯಾಪ್​ಗೆ ಒಳಪಡಿಸಲು ಮುಂದಾಗಿರುವ ಘಟನೆ ಕೇರಳದಲ್ಲಿ ಬೆಳಕಿಗೆ ಬಂದಿದೆ.

Facebook honeytrap
Facebook honeytrap

ತಿರುವನಂತಪುರಂ(ಕೇರಳ): Honey trapping case ಕಳೆದ ಕೆಲವು ತಿಂಗಳುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹನಿಟ್ರ್ಯಾಪ್​ ಪ್ರಕರಣಗಳು ಹೆಚ್ಚೆಚ್ಚು ಸುದ್ದಿಯಲ್ಲಿವೆ. ಇದರ ಮೂಲಕ ತೊಂದರೆಗೊಳಗಾಗಿ ಅನೇಕರು ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಇದೀಗ ಇಂತಹದ್ದೇ ಮತ್ತೊಂದು ಪ್ರಕರಣ ಕೇರಳದಲ್ಲಿ ನಡೆದಿದೆ.

ಇಡೀ ಪ್ರಕರಣದ ವಿವರ:

ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ಫೇಸ್​ಬುಕ್​ನಲ್ಲಿ ಅಪರಿಚಿತ ಯುವತಿಯಿಂದ ಫ್ರೆಂಡ್ ರಿಕ್ವೆಸ್ಟ್(Friend Request) ಬಂದಿತ್ತು. ಅದನ್ನು ಒಪ್ಪಿಕೊಳ್ಳುತ್ತಿದ್ದಂತೆ ಯುವತಿ ತಾನು ತನ್ನ ಹೆಸರು ಪರಿಚಯ ಮಾಡಿಕೊಂಡಿದ್ದಳು. ತಾನು ಮುಂಬೈನಲ್ಲಿ ಸಾಫ್ಟ್‌ವೇರ್​ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವುದಾಗಿಯೂ​ ಹೇಳಿದ್ದಳು. ಇದಾದ ಬಳಿಕ ಇಬ್ಬರೂ ಪರಸ್ಪರ ವಾಟ್ಸ್​ಆ್ಯಪ್​ ನಂಬರ್​ ವಿನಿಮಯ ಮಾಡಿಕೊಂಡಿದ್ದಾರೆ. ಪರಸ್ಪರ ಸಲುಗೆ ಹೆಚ್ಚಾದಂತೆ ವಿಡಿಯೋ ಕಾಲ್ ಮಾಡಲು ಪ್ರಾರಂಭಿಸಿದ್ದಾರೆ.

ವಿಡಿಯೋ ಕಾಲ್​ ಮಾಡಿರುವ ಸಂದರ್ಭದಲ್ಲಿ ಮಹಿಳೆ ತಕ್ಷಣವೇ ವಾಶ್​ ರೂಂಗೆ ಬಂದು ಹಾಕಿಕೊಂಡಿರುವ ಬಟ್ಟೆ ಕಳಚಿ ನಗ್ನಳಾಗುತ್ತಾಳೆ. ಇದಾದ ಬಳಿಕ ವರದಿಗಾರನಿಗೂ ಬಟ್ಟೆ ತೆಗೆದು ನಗ್ನವಾಗಿ ಕಾಣಿಸಿಕೊಳ್ಳುವಂತೆ ಪ್ರಚೋದಿಸುತ್ತಾಳೆ. ಅದಕ್ಕೆ ನಿರಾಕರಿಸಿದಾಗ ತಕ್ಷಣವೇ ವಿಡಿಯೋ ಕಾಲ್​ ಆಫ್​ ಆಗುತ್ತೆ. ಇದಾದ ಕೆಲವೇ ನಿಮಿಷಗಳ ಬಳಿಕ ಒಂದು ವಾಟ್ಸ್‌ಆ್ಯಪ್‌ಗೆ ಮೆಸೇಜ್‌ ಬರುತ್ತೆ. ನೀನು ನಾನು ಕೇಳಿದಷ್ಟು ಹಣ ನೀಡದಿದ್ದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡುವ ಬೆದರಿಕೆ ಹಾಕುತ್ತಾಳೆ.

ಹೀಗೆ ಬ್ಲ್ಯಾಕ್‌ ಮೇಲ್​(Blackmail) ಮಾಡುತ್ತಿದ್ದಂತೆ ಪೊಲೀಸರಿಗೆ ವರದಿಗಾರ ಲಿಖಿತ ದೂರು ನೀಡಿದ್ದಾರೆ. ಯುವತಿಯ ಮೊಬೈಲ್ ನಂಬರ್ ಆಧರಿಸಿ ಆಕೆ ಇರುವ ಸ್ಥಳ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾದರು. ಈ ವೇಳೆ ಆರೋಪಿತೆ ಅಸ್ಸೋಂ ಮೂಲದ 'ಅಕ್ಲಿಮಾ ಬೇಗಂ' ಎಂಬ ಹೆಸರಿನಲ್ಲಿ ಸಿಮ್​​ ತೆಗೆದುಕೊಂಡಿರುವುದು ಗೊತ್ತಾಗಿದೆ. ಈ ಪ್ರಕರಣ ಬೆನ್ನತ್ತಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇದೇ ವೇಳೆ ಇಂತಹ ಮೋಸದ ಜಾಲಗಳಿಗೆ ಒಳಗಾಗದಂತೆ ಜನರಿಗೆ ಕೇರಳ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Last Updated : Jul 28, 2021, 8:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.