ETV Bharat / bharat

ಎತ್ತಿನ ಗಾಡಿ ಗ್ರಂಥಾಲಯ ಸ್ಥಾಪನೆ : ಬುಡಕಟ್ಟು ವಿದ್ಯಾರ್ಥಿಗಳಿಗೆ ಮನೆ ಮನೆಗೆ ತೆರಳಿ ಪುಸ್ತಕ ಹಂಚುತ್ತಿರುವ ಶಿಕ್ಷಕಿ

ಕಮಲಾ ದಾವಂಡೆ ಅವರ ಅಸಾಧಾರಣ ಉಪಾಯಕ್ಕೆ ಪೋಷಕರು, ಗ್ರಾಮಸ್ಥರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಮಲಾ ದಾವಂಡೆ ಅವರು ಈಟಿವಿ ಭಾರತ ಜೊತೆ ಮಾತನಾಡಿ, ಈ ಗ್ರಾಮದಲ್ಲಿರುವ ಶಾಲೆಯಲ್ಲಿ 87 ಮಕ್ಕಳು ಮತ್ತು ಮೂವರು ಶಿಕ್ಷಕರಿದ್ದಾರೆ..

Teacher's unique way to reach out to students in remote MP village
ಹಳ್ಳಿಯೊಂದರ ಶಾಲೆಯ ಶಿಕ್ಷಕಿಯಾದ ಕಮಲಾ ದಾವಂಡೆ
author img

By

Published : Jan 28, 2022, 3:17 PM IST

ಬೇತುಲ್(ಮಧ್ಯಪ್ರದೇಶ) : ಕೊರೊನಾ ಮೂರನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ಶಾಲೆಗಳನ್ನು ಮುಚ್ಚಲಾಗಿದೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಮಧ್ಯಪ್ರದೇಶದ ಶಿಕ್ಷಕಿಯೊಬ್ಬರು ವಿಶಿಷ್ಟವಾದ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಬೇತುಲ್ ಜಿಲ್ಲೆಯ ಭೈನ್ಸ್​​ದೇಹಿಯ ದೂರದ ಬುಡಕಟ್ಟು ಪ್ರದೇಶದ ಹಳ್ಳಿಯೊಂದರ ಶಾಲೆಯ ಶಿಕ್ಷಕಿಯಾದ ಕಮಲಾ ದಾವಂಡೆ ಅವರು, ಸಂಚಾರಿ ಗ್ರಂಥಾಲಯವನ್ನು ಎತ್ತಿನ ಗಾಡಿಯಲ್ಲಿ ಸ್ಥಾಪಿಸಿದ್ದಾರೆ.

ಇದರ ಜೊತೆಗೆ ಅವರು ಮನೆ ಮನೆಗೆ ಹೋಗಿ, ಬಡ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ. ಈ ಮಕ್ಕಳು ಆನ್‌ಲೈನ್ ತರಗತಿಗಳನ್ನು ಕೇಳಲು ಯಾವುದೇ ಸೌಲಭ್ಯವನ್ನು ಹೊಂದಿಲ್ಲ.

ಈ ಮಕ್ಕಳು ಇನ್ನೂ ಸಾಂಪ್ರದಾಯಿಕ ವಿಧಾನಗಳಾದ ಮೊಹಲ್ಲಾ ಅಥವಾ ರೇಡಿಯೋ ಉಪನ್ಯಾಸಗಳನ್ನೇ ಅವಲಂಬಿಸಿದ್ದಾರೆ. ಹೀಗಾಗಿ, ಮಕ್ಕಳಿಗೆ ಸಹಾಯವಾಗಲೆಂದು ಕಮಲಾ ಟೀಚರ್​ ಮಕ್ಕಳ ಮನೆ ಮನೆಗೆ ತೆರಳಿ ಪುಸ್ತಕಗಳನ್ನು ನೀಡುವ ಮೂಲಕ ಅವರ ಓದಿಗೆ ಸಹಾಯ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​ನಲ್ಲಿ ಉದ್ಘಾಟನೆಗೆ ಸಿದ್ಧವಾದ ಅತಿ ದೊಡ್ಡ ವಸತಿ ಯೋಜನೆ

ಕಮಲಾ ದಾವಂಡೆ ಅವರ ಅಸಾಧಾರಣ ಉಪಾಯಕ್ಕೆ ಪೋಷಕರು, ಗ್ರಾಮಸ್ಥರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಮಲಾ ದಾವಂಡೆ ಅವರು ಈಟಿವಿ ಭಾರತ ಜೊತೆ ಮಾತನಾಡಿ, ಈ ಗ್ರಾಮದಲ್ಲಿರುವ ಶಾಲೆಯಲ್ಲಿ 87 ಮಕ್ಕಳು ಮತ್ತು ಮೂವರು ಶಿಕ್ಷಕರಿದ್ದಾರೆ.

ಮೂವರಲ್ಲಿ ಒಬ್ಬರನ್ನು ಅಧೀಕ್ಷಕರನ್ನಾಗಿ ಮಾಡಲಾಗಿದೆ. ಮತ್ತೊಬ್ಬರು ಕೋವಿಡ್-19 ಕಾರಣ ರಜೆಯಲ್ಲಿದ್ದಾರೆ. ಹೀಗಾಗಿ, ಸದ್ಯಕ್ಕೆ ನಾನೊಬ್ಬಳೇ ಇಲ್ಲಿ ಇರುವ ಶಿಕ್ಷಕಿ.

ಮಕ್ಕಳಿಗೆ ಪುಸ್ತಕಗಳನ್ನು ಹಂಚುವುದು ಅನಿವಾರ್ಯವಾಗಿತ್ತು. ಎಲ್ಲ ಪುಸ್ತಕಗಳನ್ನು ಎತ್ತಿನ ಗಾಡಿಯಲ್ಲಿ ಇಟ್ಟುಕೊಂಡು ಮೊಹಲ್ಲಾ ತರಗತಿಯ ಬ್ಯಾನರ್ ಹಾಕಿಕೊಂಡು ಮನೆ ಮನೆಗೆ ತೆರಳಿ ಮಕ್ಕಳಿಗೆ ಪುಸ್ತಕಗಳನ್ನು ನೀಡುತ್ತಿದ್ದೇನೆ ಎಂದು ಅವರು ಹೇಳುತ್ತಾರೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.