ETV Bharat / bharat

ಇನ್ನೆಂದೂ ಬಂಗಾಳದಲ್ಲಿ ಐಎಸ್​ಎಫ್​ ಜೊತೆ ಮೈತ್ರಿ ಇಲ್ಲ: ಕಾಂಗ್ರೆಸ್

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಸಂಪೂರ್ಣವಾಗಿ ನೆಲ ಕಚ್ಚಿದ್ದು, ಇದರ ಬೆನ್ನಲ್ಲೇ ಐಎಸ್​ಎಫ್ ಜೊತೆ ಭವಿಷ್ಯದಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದೆ.

Adhir Chowdhury
Adhir Chowdhury
author img

By

Published : May 10, 2021, 6:26 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಇಂಡಿಯನ್​ ಸೆಕ್ಯುಲರ್​​ ಫ್ರಂಟ್ ​(ಐಎಸ್​ಎಫ್) ನೊಂದಿಗೆ ಕಾಂಗ್ರೆಸ್​ ಕೈಜೋಡಿಸಿತ್ತು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಕಾಂಗ್ರೆಸ್​​ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಮಾತನಾಡಿದ್ದಾರೆ.

ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ಐಎಸ್​ಎಫ್​ ನಮ್ಮ ಜೊತೆ ಮೈತ್ರಿಕೂಟದಲ್ಲಿ ಇರುವುದಿಲ್ಲ. ಯಾವುದೇ ಚುನಾವಣೆಗೂ ಅದರೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

ಐಎಸ್ಎಫ್​ ಜತೆ ಮೈತ್ರಿ ಮಾಡಿಕೊಳ್ಳದಂತೆ ಎಡಪಂಥೀಯರನ್ನು ಕೇಳಿಕೊಂಡಿದ್ದೇನೆ ಎಂದಿರುವ ಕಾಂಗ್ರೆಸ್​ ಮುಖಂಡ, ಚುನಾವಣೆ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವಲ್ಲಿ ವಿಫಲವಾಗಿದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ಐಎಸ್​ಎಫ್​ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿರಲಿಲ್ಲ. ಅದು ಎಡಪಂಥೀಯ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಿತ್ತು ಎಂದು ಅವರು ತಿಳಿಸಿದ್ದಾರೆ.

2016ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​-ಎಡಪಂಥೀಯ ಮೈತ್ರಿ 76 ಸ್ಥಾನಗಳಲ್ಲಿ ಗೆಲುವು ದಾಖಲಿಸಿತು. ಆಗ ಬಿಜೆಪಿ ಕೇವಲ ಮೂರು ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಆದರೆ ಈ ಸಲ ಬಂಗಾಳದಲ್ಲಿ ಕಾಂಗ್ರೆಸ್​ ಶೂನ್ಯ ಸುತ್ತಿದ್ದು, ಬಿಜೆಪಿ 77 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿದೆ.

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಐಎಸ್​ಎಫ್​ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಆನಂದ್​ ಶರ್ಮಾ ಸಹ ಅಧೀರ್​ ರಂಜನ್​ ಚೌಧರಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ರಾಷ್ಟ್ರಪತಿಗೆ ಪತ್ರ ಬರೆದ ಚೌಧರಿ

ದೇಶದಲ್ಲಿ ಕೋವಿಡ್ ಸೋಂಕಿತ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ವಿಶೇಷ ಅಧಿವೇಶನ ಕರೆಯುವಂತೆ ಅಧೀರ್ ರಂಜನ್ ಚೌಧರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್​ಗೆ ಪತ್ರ ಸಹ ಬರೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.